ಪುಟ:ಕುರುಕ್ಷೇತ್ರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 లేఖబింధినీ ಮಹಿಸೂರು ಸೀಮೆಯ ಪೋಲೀಸ್ ಇಲಾಖೆಯ ಇನಸ್ಪೆಕ್ಟರ ಜನರಲೆ ಸಾಹೇಬರವರ ಜನಾಬಿಗೆ ಚಿಂತಾಮಣಿ ತಾಲ್ಲೂಕು ಅಡ್ಡಗಲೆ ಹೋಬಳ ಗೌಡನಹಳ್ಳಿಯ ಲ್ಲಿರುವ ಕೆಳಗೆ ರುಜ್ಹಾಕಿರುವ* ಜನರ ಅರ್ಜಿ, ಅದಾಗಿ ; ನಮ್ಮ ಊರುಬಳಿಯಲ್ಲಿರುವ ರಸ್ತೆಯಲ್ಲಿ ಒಂದು ತಿಂಗಳ ಕೆಳಗೆ ಒಂದು ದರೋಡೆಯಾಯಿತು ; ನಮ್ಮ ಊರಿನಲ್ಲಿ ಒಬ್ಬ ವರ್ತಕನ ಮನೆ ಗೆ ಮಾರನೇ ದಿನವೇ ಕಳ್ಳರು ಬಿದ್ದು ದೋಚಿಕೊಂಡು ಹೋದರು. ಇಲ್ಲಿಂದ ತಾಲೂಕಿರುವ ಊರಿಗೆ ೧೬ ಮೈಲಿಯಾಗುತದೆ ; ಹತ್ತರಿ ರುವ ಪೋಲೀಸ ಸ್ಟೇಪನ ಇಲ್ಲಿಗೆ v ಮೈಲಿ ದೂರದಲ್ಲಿದೆ. ಅಲ್ಲಿಯ ಸ್ಮ ಲ್ಪವೇ ಮಂದಿ ಪೋಲೀಸಿನವರು ಇರುವುದರಿಂದ, ಯಾವಾಗಲಾದರೂ ಮಧ್ಯಾಹ್ನದ ಹೊತ್ತಿನಲ್ಲಿ ಒಬ್ಬ ಪೋಲೀಸಿನವನ ಮುಖವನ್ನು ನೋಡು ವುದೇ ಅಪೂರ್ವವಾಗಿದೆ. ತಾಲ್ಲಕು ಅಮಲ್ದಾರರವರಿಗೂ ಡಪ್ರುಟಿ ಕಮಿಾಪನಾ ಸಾಹೇಬರವರಿಗೂ ಅರ್ಜಿ ಕೊಟ್ಟುಕೊಂಡುದಕ್ಕೆ ಈ ವ ರೆಗೆ ಜವಾಬೇ ಬರಲಿಲ್ಲ. ನಮ್ಮ ಗ್ರಾಮದಲ್ಲಿ ೨೦೦ ಮನೆಗಳಿಗಿಂತ ಹೆಚ್ಚಾಗಿವೆ ; ಮತ್ತು ಇದು ಈ ಸೀಮೆಯ ಸರಹದ್ದಿನಲ್ಲಿರುವುದಾಗಿದೆ. ಕರೀಬರಾದ ನಮ್ಮ ಮೇಲೆ ಪೂರಾ ವಿಶ್ವಾಸವಿಟ್ಟು, ಮಹಾ ಪ್ರಭುಗಳು ಈ ಊರಲ್ಲೊಂದು ಪೋಲೀಸ ಠಾಣೆಯನ್ನು ಇಡಿಸಬೇಕೆಂದು ಅತಿವಿನಯದಿಂದ ಬೇಡಿಕೆ ಇುವೆವು ೨೧ನೇ ಜಲೈ, ೧೪೯೧ (ರುಜ್) ಶಾನಭೋಗ ರಂಗಣ್ಣ. (೨) ಪಟೇಲ ರಾಮೇಗೌಡ. (೨) ರೈತ ಲಿಂಗಣ್ಣ, (೨) ರಾಮಶೆಟ್ಟಿ." 4 ( ರು ಹಾಕಲ್ಪಟ್ಟಿರುವ ?” ಎಂದು ಬರೆಯಕೂಡದು ಅದು ತಪ್ಪು