ಪುಟ:ಕುರುಕ್ಷೇತ್ರ.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


68 ಬೇಬೋಧಿನಿ ನನ್ನ ವ್ಯಾಪಾರದ ಲೆಕ್ಕವನ್ನು ಕ್ರಮವಾಗಿ ಇಟ್ಟಿದೇನೆ. ಇದನ್ನು ತರಿಸಿ ಕೊಂಡು ನೋಡದೆ, ನನಗೆ ಪ್ರೇಮಿಗಳಾದ ಕೆಲವರ ಮಾತನ್ನು ನಂಬಿ ಕೊಂಡು, ಮಾಮ್ಪದಾರವರು ಅನ್ಯಾಯ ಮಾಡಿರುತ್ತಾರೆ. ನನಗೆ ಹೋದ ವರುಷವೂ ಮತ್ತು ಹಿಂದಿನ ಯಾವ ವರ್ಷವೂ ೫೦೦ ರೂಪಾ ಯಿಗೆ ಮಾರಿದ ಲಾಭ ಬರಲಿಲ್ಲ, ಖಾವಂದರ ಪರಾಮರಿಕೆಯ ಬಗ್ಗೆ ನನ್ನ ಲೆಕ್ಕದಬುಕ್ಕುಗಳನ್ನು ಹಾಜರ್ಮಾಡುತೇನೆ. ಇದನ್ನು ಚೆನ್ನಾಗಿ ವಿಚಾರಿಸಿ, ಧರ್ಮ ಪ್ರಭುಗಳು ನನಗೆ ಅನ್ಯಾಯವಾಗಿ ದಾಖಲಾಗಿರುವ ತೆರಿಗೆಯನ್ನು ವಜಾ ಮಾಡಿಸಬೇಕೆಂದು ಅತ್ಯಂತ ವಿಧೇಯನಾಗಿ ಬೇಡಿ ಕೊಳುತೇನೆ (ರುಚ್) ನಂಜಪ್ಪಶೆಟ್ಟಿ, 8. ಮೈಸೂರು ಡಿಸ್ಟಿ ಮುಜರಾಯಿ ಆಫೀಸರವರ ಸನ್ನಿಧಾನಂಗಳಿಗೆ. •oooooooooooooo..........ರಾಮಭಟ್ಟನ ಅರ್ಜೆ; ಸ್ಯಾಮಿ, ಚಾಮರಾಜನಗರದ ದೇವಸ್ಥಾನದ ಧರ್ಮದ ಪೈಕಿ ರು ದ್ರಾಭಿಷೇಕಕ್ಕೋಸ್ಕರ ನೇಮಿಸಿರುವ ಕೆಲಸವು ಈಗ ಖಾಲಿ ಇದೆ ಎಂದು ಕೇಳುತೇನೆ, ನನಗೆ ಯಜದದಲ್ಲಿ ಘನಾಂತವಾಗಿದ್ದರೂ ಈ ಅಧ್ಯಯನ ಓದಿದವನಿಗೆ ಮಧ್ಯಾಹ್ನಕ್ಕೆ ಹಿಟ್ಟಿಲ್ಲ ” ವೆಂಬ ನುಡಿ ನನ್ನಲ್ಲಿಯೇ ಸಾರ್ಥಿ ಕ್ರವನ್ನು ಹೊಂದಿದೆ. ಈ ದರಿದ್ರಕ್ಕೆ ತಕ್ಕಂತೆ ನಾಲ್ವರು ಹೆಣ್ಣು ಮಕ್ಕ ೪ು ಗಂಡು ಮಕ್ಕಳು ಚಿಕ್ಕವರು ಕಿತ್ತುಕೊಂಡು ತಿನ್ನು ತಿರುವುದರಿಂದ ನನ್ನ ಕವನ್ನು ಸರಿಯಾಗಿ ಅರಿಕೆಮಾಡಿಕೊಳ್ಳಲು ಅಶಕ್ತನಾಗಿದೇನೆ. ಬ್ರಾಹ್ಮಣರ ಪೋಪ್ರಣಾರ್ಥವಾಗಿ ಏರ್ಪಡಿಸಿರುವ ಈ ಕೆಲಸಕ್ಕೆ ನನ್ನ ನ್ನು ನೇಮಿಸಿದರೆ, ಭಕ್ತಿಯಿಂದ ದೇವರ ಸೇವೆಯನ್ನು ನೆರವೇರಿಸಿ ಕೊಂಡು, ತಮ್ಮ ಶ್ರೇಯಃಪ್ರಾರ್ಥನೆಯನ್ನು ಮಾಡಿಕೊಂಡು, ಒಂದು ಹೊತ್ತಿನ ಅನ್ನವನ್ನಾದರೂ ಊಟಮಾಡಿಕೊಳ್ಳುತೇನೆ.