ಪುಟ:ಕುರುಕ್ಷೇತ್ರ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

59 ಲೇಬೇಬೋಧಿನಿ ಸ್ವಪ್ರಶಂಸೆಯನ್ನು ಹೇಳಿಕೊಂಡರೆ ಪ್ರಯೋಜನವಿಲ್ಲವಾಗಿ, ನನ್ನ ವಿಷಯವಾಗಿ ತಾಲೂಕು ಸುಬೇದಾರರ ಮೂಲಕ ತಾವು ವಿಚಾರಣೆ ನಡಿಸಿಕೊಳ್ಳಬಹುದೆಂದು ಬೇಡಿಕೊಳ್ಳುತೇನೆ. (ರುಜ್) ರಾಮಭಟ್ಟ, ಚನ್ನಪಟ್ಟಣದ ತಾ|| ಅವುಲ್ಲಾ ರವರ ಸನ್ನಿಧಾನಕ್ಕೆ. ಬೊಮ್ಮಸಂದ್ರದ ಹೋಬಳಿ ರಾಜಘಟ್ಟದ ರೈತ ಮಲ್ಲಪ್ಪನು ಬರೆ ದುಕೊಂಡ ಅರ್ಜಿ. - ನಾನು ಈ ಊರಲ್ಲಿ ೫೦ ರೂಪಾಯಿ ಕಂದಾಯ ಕೊಡತಕ್ಕೆ ಪಟ್ಟೆಯುಳ್ಳ ಚೈತನಾಗಿದೇನೆ, ಭಾರೀ ಸಂಸಾರವಾದ್ದರಿಂದಲೂ ನನಗೆ ಸ್ವಂತಮನೆ ಇಲ್ಲದ್ದರಿಂದಲೂ ಈ ಊರಲ್ಲಿ ಹೊಸ ಮನೆಯನ್ನು ಕಟ್ಟಿ ಕೊಳ್ಳ ಬೇಕೆಂದು ಉದ್ದೇಶಿಸಿದ್ದೇನೆ. ನಾನು ಲಾಗಾಯತಿನಿಂದ ಸರ್ಕಾ ರದ ಜಂಗ್ಲಿಯಲ್ಲಿ ಮರವನ್ನು ಪಡೆದವನಲ್ಲ. ಈಗ ರೈತರಿಗೆ ರಿಯಾ ಯತು ದರಗಳ ಮೇಲೆ ಕೊಡಬಹುದೆಂದು ಇರುವ ರೂಲ್ಸಿನ ಪ್ರಕಾರ ನನಗೆ ೨೫ ಗಾಡಿ ಕಾಡುಜಾತಿಯ ಸಾಮಾನನ್ನು ಕೊಡಿಸಿಕೊಡಬೇ ಕೆಂದು ಬೇಡುತ್ತೇನೆ, ಅದಲ್ಲದೆ ಇದೇ ಹೋಬಳಿ ಸರ್ವಮಾನ್ನ ಕಿತ್ತೂ ರು ಗ್ರಾಮದಲ್ಲಿ ಇನಾಂದಾರರಿಂದ ನಾನು ಕೊಂಡುಕೊಂಡಿರುವ ನಾಲ್ಕು ಗಾಡಿ ಹೊನ್ನೆ ಸಾಮಾನನ್ನು ನಮ್ಮ ಗ್ರಾಮಕ್ಕೆ ತಂದುಕೊಳ್ಳತಕ್ಕದಕ್ಕೆ ೧೫ ದಿವಸ ವಾಯಿದೆಯೊಡನೆ ಒಂದು ಮಾಫಿ ಲೈರ್ಸೆಸನ್ನ ಅಪ್ಪಣೆ ಕೊಡಿಸಬೇಕೆಂದು ಬೇಡಿಕೊಳ್ಳುತೇನೆ. ೨Vನೇ ಜನವರಿ, ೧vr೩, -- ಈ ಗುರ್ತು ಮಲ್ಲಪ್ಪ ಹಾಕಿದ್ದಕ್ಕೆ ಈ ಗ್ರಾಮದ ಪಟೇಲ ರಾಮಪ್ಪನ ಬರಹ `ಕಿ ೧ ಕಿ