ಪುಟ:ಕುರುಕ್ಷೇತ್ರ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬೈಬೋಧಿನಿ ಣೆಯಾಗಿರುವಂತೆ ತಮ್ಮ ಗ್ರಾಮದಲ್ಲಿ ಹೋಗುವ ರಸ್ತೆಯ ಪಕ್ಕದಲ್ಲಿ ತಾವು ಸಾಲು ಗಿಡಗಳನ್ನು ಹಾಕುವುದಕ್ಕೆ ತಮ್ಮ ಗ್ರಾಮದ ಸರಹದ್ದು ಬಹಳ ದೂರದವರೆಗೂ ಇರುವುದರಿಂದ ತಮ್ಮ ಗ್ರಾಮದಲ್ಲಿ ಇರುವ ರೈ ತರು ಸ್ವಲ್ಪ ಜನ, ಇವರಲ್ಲಿ ಒಬ್ಬೊಬ್ಬನು ಅನೇಕ ಗಿಡಗಳನ್ನು ಹಾಕ ಬೇಕಾಗುವುದರಿಂದ ಇದು ಸಾಧ್ಯವಾಗಲಾರದೆಂದು ತಕರಾರು ಹೇಳಿ ಕೊಂಡರು. ಬಹಳ ಹೊತ್ತು ಸಮಜಾಯಿಷಿ ಹೇಳಿ, ರೂಲ್ಕು ಪ್ರಕಾರ ಗಿಡಗಳ ಫಲ ಮತ್ತು ಕೊನೆಗಳ ವಿಷಯದಲ್ಲಿ ತಮಗೆ ಉಂಟಾಗುವ ಹಕ್ಕನ್ನೂ ತಮ್ಮ ಗ್ರಾಮದ ಬಳಿಯಲ್ಲಿ ರಸ್ತೆಯಲ್ಲಿ ನೆರಳಿದ್ದರೆ ತಮಗೆ ಆಗುವ ಉಪಕಾರವನ್ನೂ ತಿಳಿಯಪಡಿಸಿದ್ದಲ್ಲದೆ, ಈ ಗಿಡಗಳು ದೊಡ್ಡ ದಾಗುವ ವರೆಗೂ ನೀರು ಹಾಕಿ ಕಾಪಾಡತಕ್ಕ ತೊಂದರೆಗೊಸ್ಕರ ಅವ ರಿಗೆ ರಿಯಾಯತಿಯಾಗಿ ಇನ್ನು ಐದು ವರುಷಗಳ ವರೆಗೂ ಈ ಗ್ರಾಮದ ಬಂಜರ ಜಮಿಾನಿನ ಹುಲ್ಲನ್ನಿ ಯನ್ನು ಹರಾಜಿಲ್ಲದೆ ಇವರಿಗೆ ಕೊಡುವಂತೆ ಸಿಖಾರಪು ಮಾಡುವುದಾಗಿ ಅವರನ್ನು ಒಪ್ಪಿಸಲಾಗಿದೆ. ಖಾವಂದರು ದಯವಿಟ್ಟು ಈ ರಿಯಾಯತಿಯನ್ನು ಅವರಿಗೆ ಉಂಟುಮಾಡಿಕೊಟ್ಟರೆ ಕೆಲಸ ಸಲೀಸಾಗಿ ನಡೆಯುವುದೆಂಬ ವಿಷಯವನ್ನು ಅರಿಕೆ ಮಾಡಿಕೊಂ ಡಿದೇನೆ. ತಾರೀಖು ಮೊಕ್ಕಾಂ (ರುಜ್) ಅಮಲ್ದಾರ