ಪುಟ:ಕುರುಕ್ಷೇತ್ರ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧಿನಿ 91 ೧೧. ನೌಕರಿಯ ಕರಾರು, ರ್ಸ ೧vr೩ ನೆಯ ಇಸವಿ ಜುಲೈ ೧೪ನೇ ತಾರೀಖಿನಲ್ಲಿ ಬೆಂಗ ಳೂರು ತಾಲ್ಲೂಕು ಬಸವಾಪುರದಲ್ಲಿರುವ ಬಸವೇಗೌಡರ ಮಕ್ಕಳು ಮರಿಬಸಪ್ಪನವರಿಗೆ ಸದರೀ ತಾಲ್ಲಕು ತಿಮ್ಮಾಪುರದಲ್ಲಿರುವ ಬಗ್ಗೆ ಜಾತಿಯ ಬೋಳನ ಮಗ ಮಾರನು ಬರೆದುಕೊಟ್ಟ ನೌಕರಿಯ ಕರಾರಿ ನ ಕ್ರಮವೆಂತೆಂದರೆ, ನಾನು ಈ ತಾರೀಖು ಲಾಗಾಯಿತು ಮರು ವರ್ಷಗಳವರೆಗೂ ನಿಮ್ಮ ಮನೆಯಲ್ಲಿ ದನ ಕಾಯುವುದು ಅಥವಾ ನೀವು ಹೇಳುವ ಜೀರಾಯಿತಿಗೆ ಸಂಬಂಧಪಡುವ ಇತರ ಕಾರ್ಯಗಳನ್ನು ಮಾಡಿಕೊಂಡಿರತಕ್ಕದ್ದು, ಇದಕ್ಕಾಗಿ ನಾನು ನಿಮ್ಮಿಂದ ಈ ದಿವಸ ಮುಂಗಡವಾಗಿ ೫೦ ರೂಪಾಯಿ ತೆಗೆದುಕೊಂಡಿದೇನೆ. ನಾನು ನಿಮ್ಮಲ್ಲಿ ಚಾಕರಿ ಇರುವವರೆಗೂ ಈ ಹಣಕ್ಕೆ ಬಡ್ಡಿ ಇಲ್ಲ, ಮತ್ತು ನನಗೆ ಸ ಬಳ ವರ್ಷಕ್ಕೆ ಇಪ್ಪತೈದು ರೂಪಾಯಿ, ಇನ್ನೂರು ಸೇರಿನ ನಾಲ್ಕು ಗಂಡಗ ರಾಗಿ, ಮೂರು ರೂಪಾಯಿನದೊಂದು ಕಂಬಳ ಕೊಡಬೇಕು. ತಿಂಗಳಿಗೆ ೨ ದಿನಕ್ಕೆ ಹೆಚ್ಚಾಗಿ ಉಳಿಕೆಯಾದರೆ ಅದಕ್ಕೆ ತಕ್ಕ ಸಂಬಳ ವನ್ನು ನೀವು ಕಡಿಮೆ ಮಾಡಿಕೊಳ್ಳಬಹುದು, ಖಾಹಿಲೆಯ ಸಬಬಿಲ್ಲದೆ ನಾನು ನಿಮ್ಮ ಕೆಲಸವನ್ನು ಬಿಟ್ಟುಬಿಟ್ಟಲ್ಲಿ, ನೀವು ಕೊಟ್ಟಿರುವ ಹಣಕ್ಕೆ ಬಿಟ್ಟಲಾಗಾಯಿತು ಸೇಕಡ ೧ ರೂಪಾಯಿನಂತೆ ಬಡ್ಡಿ ಸೇರಿಸಿ, ಕೇಳಿದ ಕೂಡಲೇ ಕೊಡಲುಳ್ಳವನು, ವಾಯಿದೆ ತೀರಿದ ಮೇಲೆ ಕೆಲಸವನ್ನು ಬಿಡುವಾಗ ನಿಮ್ಮ ಅಸಲು ಹಣ ನಿಮಗೆ ಪಾವತಿ ಮಾಡಲುಳ್ಳವನು. ನಿಮ್ಮ ಕೆಲಸವನ್ನು ನಾನು ಸರಿಯಾಗಿ ಮಾಡದೆ ಆಗಲೀ, ನಿಷ್ಕಾರಣವಾಗಿ ಬಿಡುವುದರಿಂದಲೇ ಆಗಲೀ ನಿಮಗೆ ನಮ್ಮ ಉಂಟಾದರೆ ಅದನ್ನು ನಾನೇ ಕಟ್ಟಿಕೊಡುಳ್ಳವನೆಂದು ಒಪ್ಪಿ ಬರೆದುಕೊಟ್ಟ ಕರಾರು ಸಹಿ. + ಈ ಗುರ್ತು ಮಾರ ಹಾಕಿದ್ದಕ್ಕೆ ಶಾನುಭೋಗ ರಾಮಯ್ಯನ ಬರಹ. ಸಾಕ್ಷಿಗಳು. ಇದು ಕಾರಿ ರಾಮಯ್ಯನಿಂದ ಬರೆಯಲ್ಪಟ್ಟುದು,