ಪುಟ:ಕೃಷ್ಣ ಗೋಪೀವಿಲಾಸಂ.djvu/೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


19 ಕೃಷ್ಣಗೋಪೀವಿಲಾಸಂ. (ಸಾಂಗತ್ಯಂ ) ಶ್ರೀಮನೋಹರ ದಿವ್ಯಮೂರ್ತಿ ಸಂತತಪುಣ್ಯ ! ನಾನು ಸದ್ಗುಣಗಣಕೀರ್ತಿ | ರಾಮನೆನ್ನಯ ಹೃದಯದೊಳಿರ್ದು ಕೃತಿಯನು! ನೇಮಿಸಿದಂತೆ ಪೇಳುವೆನು ಅಜನ ಪಟ್ಟದ ರಾಣಿಯಖಳಗುಣಶ್ರೇಣಿ | ವಿಜಿತಾಬ್ಬಪಾಣಿ ಸುಶ್ರೋಣಿ ! ಗಜರಾಜಗಮನೆ ಪನ್ನಗವೇಣಿ ಕಲ್ಯಾಣಿ i ಭಜಿಪೆ ವರವನೀಯ ವಾಣಿ | ಮುನವೆಂಬ ಮಾನಿನಿಗಿನಿಯ ಚೇತನನು ತಾಂ | ತನುವೆಂಬ ರಾಜ್ಯವಾಳುತಲಿ | ವನರುಹಾಂಬಕನ ಮಹಿಮೆಯ ಬೋಧಿಸಿದ ತ 1 ನ್ನಿನಿಯಳಿಗತಿವಿನಯದೊಳು | ಶೇಷನೀಧರೆಯೊಳಗುದಿಸಿ ಮಾನುಷದಿವ್ಯ | ವೇಸದಿಂ ಯತಿರಾಜನೆನಿಸಿ | ಪೋಷಿಸಿ ಜಗದ ಜನರನು ಪಾವನಗೈದ | ಭಾಷ್ಯಕಾರರಿಗೆ ವಂದಿಸುವೆ | ಪಂಕಜಾಕ್ಷನ ಪಾದವನು ಕಾಣ್ಬ ಮಾರ್ಗವ | ಕಂಕೆಯಿಲ್ಲದೆ ಕೃಪೆಯಿಂದ | ಬಿಂಕದಿಂದುಪದೇತಗೆಯ ಶ್ರೀಮದ್ಗುರು | ವೆಂಕಟಾರ್ಯರಿಗೆ ವಂದಿಸುವೆ ಛಂದಸ್ಸು ಲಕ್ಷಣಗಳ ನೋಡಬೇಕೆಂಬ ಸಂದೇಹಗಳ ಪರಿಹರಿಸಿ | ಇಂದಿರಾಪತಿ ನಾರಾಯಣನ ಶ್ರೀಪಾದಾರ | ವಿಂದಕೆ ನತಿಗೆಯುತಿಹೆನು ಇ