ಪುಟ:ಕೃಷ್ಣ ಗೋಪೀವಿಲಾಸಂ.djvu/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಕರ್ಣಾಟಕ ಕಾವ್ಯಮಂಜರಿ | ೨ ಗಂಗೆಯ ಗಾಜ ಕುಪ್ಪಿಗೆಯೊಳು ತರಲು ತಾಂ | ಗಂಗೆಯಲ್ಲದೆ ಜಲವಹುದೆ # ರಂಗನ ಕಥೆಯ ಭಾಷಾಂತರದೊಳು ಪೇಳೆ ತಾ | ಮಂಗಳಮಹಿಮೆ ತಪ್ಪುವುದೆ ||೭ ಆವನ ಚಾದದೊಳುದಿಸಿದ ಗಂಗೆ ತಾಂ | ಪಾವನವಾದಳೀಧರೆಗೆ | ಆವಾಸುದೇವನ ಕಥೆಯೊಳು ತಪ್ಪ ಮ | ತ್ತಾವ ಸುಕೃತಿಯೆಣಿಸುವನು ! ಹರಿಕತೆಯಮೃತತರಂಗ ಸಂಗ ದುರಿತವಾರಣಸಿಂಗ | ಹರಿಕಥೆಯಮೃ ತತರಂಗ | ಹರಿಸ್ಮರಣೆ ಮಂತ್ರಜಪ ವೇದವೇದಾಂಗ ! ವರಿವೊಡಿದೀಗಂತರಂಗ | ೯ ರಂಗನ ನಾಮವಿಲ್ಲದ ಕೃತಿಯೊಳಗೆ ಪ್ರ ! ಸಂಗರಚನೆಯಿದ್ದರೇನು ! ಮಾಂಗಲ್ಯಸೂತ್ರವಿಲ್ಲದ ಯುವತಿಗೆ ಭೂದ | ಣಂಗಳ ತೊಡಿಸಿದಂತಿಹುದು || ನಿಚ್ಚಳವಾಗಿರ್ದೊಡೆಯು ಕೃತಿಯೊಳಗೆ ನ 1 ಮ್ಮ ಚ್ಯುತನಾಮವೊಂದಿರಲು ಬಿಟ್ಗೊಲೆ ಕರಿಯ ಮಣಿಯೆ ಸಾಕು ಪತಿಯುಳ್ಳ ಸಚ್ಚರಿತೆಯ ಲಕ್ಷ್ಮಿ ಧರೆಗೆ Yan ಅಂಬುಜವದನೆ ಕೇಳಾಪರಮಾತ್ಮನ ! ನಂಬದೆ ಹಲವು ದೈವಗಳಾ || ಪಂಬಲಿಸುವರು ನಾಲ್ಯನ್ನ ವನೊಲ್ಲದೆ | ಯಂಬಲಿಯನು ಸೆರೆವಂತೆ H೧೩ ಆರ ನಾಭಿಯೊಳುದಿಸಿದನಬುಜಾಸನ ! ನಾರಿಂದಲಾದ ಶಂಕರನು || ಬೇರಿಗಿಂದೆಲೆ ಮೊದಲೆಂಬ ಮೂರ್ಖರ ಮಾತ್ರ | ನಾರಾದೊಡೆಯು ನಂಬ ಬಹುದೆ || ಹರಿಯೆಂದುದಿಲ್ಲ ತಾ ಹರನೆನ್ನ ಲಿಲ್ಲ ಮೇ ! ರಸಿಜಾಸನನೆಂದುದಿಲ್ಲ || ಪರವಸ್ತುವೆಂದು ಕರೆಯಲು ಕರಿಯ ಕಾಯ್ದ | ಗರುಡವಾಹನಗೆರಗುವೆನು ||೧8 ಪ್ರಳಯದೊಳೆಂಡವೆಲ್ಲವು ಮುಳುಗಲು ವಟ | ದೆಲೆಯೊಳು ಶಿಶುವಿನಂದದಲಿ | ಹಲವು ಚೇತನಗಳನುದರದೊಳಿಂಬಿಟ್ಟ | ಜಲಜಾಕ್ಷಗಾನೆರಗುವೆನು ||೧೫ ಹತ್ತು ಸಾವಿರವೆಂಗಳೊಡಗೂಡಿ ಬ್ರಹ್ಮಚಾ ! ರಿತ್ಯದ ಮಹಿಮೆಯ ಮೆರೆದು ಇತ್ತ ನಸುವನುತ್ತರೆಯ ಕಂದಗೆಂಬುದು | ಮತ್ತಾವ ದೇವರಿಗುಂಟು ||೧೬ ಆಳಿದೊಡಯನಾದನಖಳಜಗಂಗಳಿ | ಗಾಳಾದನಾಧನಂಜಯಗೆ | ಮೂಲೋಕವನು ತನ್ನೊಳಗೆ ತೋರ್ಪ ಕೃಷ್ಯನ | ಲೀಲೆಗಿನ್ನೆ ಣೆಯಾವದುಂಟು!