ಕ ವಿ ಕಾ ವ್ಯವಿ ಮ ರ್ಶ. (ರಾವಬಹದೂ, ಆಕೆ. ನರಸಿಹ್ವಾಚಾರ್, ಎಮ್ ಏ, ಯವರ ಕವಿಚವಿತ್ರೆ'ಯ ಆಧಾರದಿಂದ ಸಂಗ್ರಹಿಸಿದುದು ) | 1. THE DRAVIDIAN LANGUAGES. ೧, ದ್ರಾವಿಡಭಾಷೆಗಳು. ನಮ್ಮ ಭರತಖಂಡದಲ್ಲಿರುವ ಭಾಷೆಗಳನ್ನು ಗೌಡ ಮತ್ತು ದ್ರಾವಿಡಗಳೆಂದು ಮುಖ್ಯವಾದ ಎರಡು ವರ್ಗಗಳಾಗಿ ವಿಭಾಗಿಸಬಹುದು, ಹಿಂದೂಸ್ತಾನದ ಉತ್ತರಭಾ ಗದಲ್ಲಿ ಪ್ರಾಯಕವಾಗಿ ಗೌಡಭಾಷೆಗಳೂ, ದಕ್ಷಿಣಪ್ರಾಂತದಲ್ಲಿ ದ್ರಾವಿಡಭಾಷೆಗಳೂ ವ್ಯವಹರಿಸಲ್ಪಡುವುವು. ಗೌಡಭಾಷೆಗಳೆಲ್ಲವೂ ಸಂಸ್ಕೃತವನಗಳು, ದ್ರಾವಿಡಭಾಷೆ ಗಳಲ್ಲಿ ಅನೇಕಸಂಸ್ಕೃತಪದಗಳು ಸಂಬಂಧಿಸಿದ್ದರೂ, ವ್ಯವಹಾರಕ್ಕೆ ಬೇಕಾದ ಶಬ್ದಗಳು ಪ್ರಯಕವಾಗಿ ಸ್ವತಂತ್ರವಾಗಿವೆ, ಆದುದರಿಂದ ದ್ರಾವಿಡಭಾಷೆಗಳು ಸ್ವತಂತ್ರಭಾಷೆಗ ಳೆನಿಸಿಕೊಳ್ಳುವುವು. ಈ ದ್ರಾವಿಡಭಾಷೆಗಳಲ್ಲಿ ಕನ್ನಡ, ತಮಿಳು, ತೆಲುಗು, ಮಲೆ ಯಾಳ, ತುಳು, ತುದದ, ಎಡಗ, ಕೂತ್ರ, ಕಡಗು ಮುಂತಾದ ಅನೇಕಭೇದಗ ಳುಂಟು. ಆದರೆ, ಇವುಗಳಲ್ಲಿ ಮೊದಲಿನ ಐದುಭಾಷೆಗಳೂ, ದಕ್ಷಿಣದೇಶದಲ್ಲಿ ಹೆಚ್ಚಾಗಿ ಪ್ರಚಾರದಲ್ಲಿರುವುದರಿಂದ, ಅವುಗಳನ್ನು ಪಂಚದ್ರಾವಿಡಭಾಷೆಗಳನ್ನು ವರು, ಈ ಸಂಚ ದ್ರಾವಿಡಗಳನ್ಸಿಯ, ತಮಿಳು, ಕನ್ನಡ, ತೆಲುಗು, ಮಲೆಯಾಳ, ಈ ನಾಲ್ಕು ಭಾಷೆಗ ಆಗೂ, ವರ್ಣಮಾಲೆಗಳೂ, ವ್ಯಾಕರಣಗಳೂ, ಸಾಹಿತ್ಯ ಗ್ರಂಥಗಳೂ ಇರುವುದರಿಂದ ಇವು ಗ್ರಾಂಥಿಕಭಾಷೆಗಳ ನಿನುವುವು. ಮಿಕ್ಕವು ಕೇವಲವ್ಯಾವಹಾರಿಕ ಭಾಷೆಗಳಾಗಿವೆ. ವರ್ಣಮಾಲೆಯಿಲ್ಲದ ಈ ಭಾಷೆಗಳಲ್ಲವೂ ಪ್ರಾಯಕವಾಗಿ ಕನ್ನಡದ ಆಘಾನಗಳಂತೆ ತೋರುತ್ತಿವೆ. ಈ ನಾಲ್ಕು ಗ್ರಾಂಥಿಕ ದ್ರಾವಿಡಭಾಷೆಗಳಲ್ಲಿ ಕನ್ನಡಕ್ಕೂ, ತಮಿಳಗೂ ವಿಶೇಘವಾದ ಹೋಲಿಕಯಿರುವುದರಿಂದ, ಈ ಭಾಷೆಗಳು ಅನೋನ್ಯವಾಗಿ ಅಕ್ಕತಂಗಿ ಯರ ಸಂಬಂಧವುಳ್ಳವುಗಳಂತೆ ತೋರುವುವು. ಇದರಿಂದ ಭಾಷಾತಜ್ಞರು, ಈ ಭಾಷೆ ಗಳನ್ನು ಸಂಸ್ಕೃತದಿಂದ ಭಿನ್ನವಾದ ಯಾವುದೋ ಒಂದು ಮಾತೃಭಾಷೆಯಿಂದ ಹುಟ್ಟಿ ದುವಂದು ನಿರ್ಣಯಿಸಿರುವರು, ಮಲಯಳವು ತಮಿಳಿನ ಆಭಸವಾಗಿ ಹುಟ್ಟಿ ಬಹು ಈುಲಕ್ಕೆ ಹಿಂದೆಯೇ ಸ್ವತಂತ್ರಭಾಷೆಯಾಯಿತೆಂದು ಹೇಳುವರು, ತೆಲುಗುಭಾಶಯ ವರ್ಣಮಾಲೆ, ಛಂದಸ್ಸು, ಮುಂತಾದವಿಷಯಗಳಲ್ಲಿ ಮಾತ್ರ ವಿಶೇಷವಾಗಿ ಕನ್ನಡವ ನ್ನು ಹೋಲುತ್ತದೆ. ಪೂರ್ವಕಾಲದಲ್ಲಿ ಕನ್ನಡಭಾಷೆಯು, ಕಾವೇರಿಯಿಂದ ಗೋದಾವರಿ
ಪುಟ:ಕೆನರೀಸ್ ಭಾಗ ೧.djvu/೩೯೧
ಗೋಚರ