ಕವಿಕಾವ್ಯವಿದುರ್ಕೆ, 4. THE DIFFERENT STAGES OF THE KANARESE LANGUAGE.. ೪. ಕನ್ನಡಭಾಷೆಯ ಅವಸ್ಥಾ ಭೇದಗಳು. ಕನ್ನಡಭಾಷೆಯಲ್ಲಿ ಇದುವರೆಗೆ, ಪೂರ್ವದ ಹಳಗನ್ನಡ, ಹಳಗನ್ನಡ, ಹೊಸಗ «ಡನೆಂಬ ಮರವಸ್ಥೆ ಗಳುಂಟಾಗಿವೆ. ಕ್ರಿ. ಶ. ಎಂಟನೆಯ ಶತಮಾನದವರೆಗೆ ಪೂ ರ್ವದ ಹಳಗನ್ನಡವೂ, ಅದರಿಂದಾಚಗೆ 14ನೆಯ ಶತಮಾನದವರೆಗೆ ಹಳಗನ್ನಡವೂ, ಅದರಿಂದೀಚೆಗೆ ಹೊಸಕನ್ನಡವೂ ಬಳಕೆಗೆ ಬಂದ ಹಾಗೆ ಊಹಿಸಬಹುದಾಗಿದೆ. 5, THE ANTIQUITY OF THE KANARESE. LITERATURE. ೫, ಕನ್ನಡದಲ್ಲಿ ಗ್ರಂಥರಚನೆಯ ಪ್ರಾಚೀನತೆ. ಈಗ ಕನ್ನಡದಲ್ಲಿ ನಮಗೆ ಗ್ರಂಥರೂಪವಾಗಿ ದೊರೆತಿರುವುದರಲ್ಲಿ 9ನೆಯ ಶತಮಾನ ದಲ್ಲಿ ಹುಟ್ಟಿದ ಕವಿರಾಜಮಾರ್ಗನೇ ಮೊದಲನೆಯದು, ಆದರೆ ಆ ಗ್ರಂಥಕರ್ತನಾದ ನೃಪತುಂಗನು, ತನ್ನ ಕಾಲಕ್ಕೆ ಹಿಂದೆಯೇ ಅನೇಕಗದ್ಯಪದ್ಯಗ್ರಂಥಗಳು ಹುಟ್ಟಿರುವಂತೆ ತಿಳಿಸಿರುವನು, ಮತ್ತು ಕಿ. ಕ. 6 ನೆಯ ಶತಮಾನದಲ್ಲಿದ್ದ ಶ್ರೀವರ್ಧದೇವನು, 96000 ಗ್ರಂಥಗಳುಳ್ಳ ಚೂಡಾಮಣಿಯೆಂಬ ಜೈನಗ್ರಂಥವನ್ನು ರಚಿಸಿದುದಾಗಿಯೂ ಕಂಡು ಬಂದಿದೆ. ಆಗಲೇ ಇಂತಹ ಅಪಾರವಾದ ಗ್ರಂಥವು ಹುಟ್ಟಿರ ಬೇಕಾದರೆ, ಅದಕ್ಕೆ ಬಹು ಕಾಲದ ಹಿಂದೆಯೇ ಕನ್ನಡದಲ್ಲಿ ಗ್ರಂಥರಚನೆಗೆ ಆರಂಭವಾಗಿರಬೇಕು, ಇಷ್ಟು ಪ್ರಾಚೀನ ಕುಲದಲ್ಲಿಯೇ ಗ್ರಂಥರಚನಾರಂಭವು, ತಮಿಳಿನಲ್ಲಿ ಹೊರತು ಬೇರೆಯಾವ ದ್ರಾವಿಡಭಾಷೆ ಯಲ್ಲಿಯೂ ಇದ್ದಂತೆ ಕಾಣುವುದಿಲ್ಲ. ಕನ್ನಡದಲ್ಲಿ ಛಂದೋಲಂಕಾರವ್ಯಾಕರಣ ಗ್ರಂಥಗಳು, ಕಾವ್ಯನಾಟಕಟಂಪುಗಳು, ನಿಘಂಟು, ವೈದ್ಯಶಾಸ್ತ್ರ, ಪಾಕಶಾಸ್ತ್ರ, ಗಣಿತ ಶಾಸ್ತ್ರ, ಜ್ಯೋತಿಶ್ಯಾಸ್ತ್ರ, ಕಾಮಶಾಸ್ತ್ರ, ಸೌರಶಾಸ್ತ್ರ, ರತ್ನ ಶಾಸ್ತ್ರ, ಸಾಮುದ್ರಿಕ ಶಾಸ್ತ್ರ, ಬಾಣಗಾರಿಕ, ಮುಂತಾದುವುಗಳವಿಷಯವಾಗಿ ಅನೇಕ ಗ್ರಂಥಗಳು ಹುಟ್ಟಿರುವುವೆಂ ಬುದಕ್ಕೆ ಆಧಾರಗಳು ಅನೇಕವಾಗಿವೆ. ಕಾವ್ಯಸರಣಿಯನ್ನನುಸರಿಸಿ ಉದ್ಧಾವಕವಿಗಳು ರಚಿಸಿರುವ ಅನೇಕ ಶಾಸನಗಳೂ ದೊರೆತಿವೆ. ಇವು ಪೂರೇಚರಿತ್ರಗಳನ್ನು ತಿಳಿಯುವು ದಕ್ಕೆ ಬಹಳ ಸಹಕಾರಿಗಳಾಗಿವೆ.
ಪುಟ:ಕೆನರೀಸ್ ಭಾಗ ೧.djvu/೩೯೩
ಗೋಚರ