v ಆದಿಕಾವ್ಯವಿಮುರ್ಕ: 6, THE KANARESE POETS. ೬. ಕನ್ನಡ ಕವಿಗಳು. ಕನ್ನಡದಲ್ಲಿ ಗ್ರಂಥರಚನೆ ಮಾಡಿರುವ ಕವಿಗಳನ್ನು ಆಘಾತವಾಗಿ, ಜೈನರು ವೀರ ಶೈವರು, ವೈ ಸ್ಮವರೆಂಬ ಮರುಪಂಗಡವಾಗಿ ವಿಭಾಗಿಸಬಹುದು. ಇವರಲ್ಲಿ ಜೈನರೇ ಕನ್ನಡದಲ್ಲಿ ಆದಿಕವಿಗಳು, 12ನೆಯ ಶತಮಾನದವರೆಗೆ ವಿಶೇಷವಾಗಿ ಜೈನ ಗ್ರಂಥಗಳೇ ದೊರೆತಿರುವುವು. ಈ ಜೈನಕವಿಗಳಿಗೆ ಗಂಗರು, ರಾಬ್ಬಿ ಕೂಟರು, ಚಳು ಕ್ಯರು, ಬಲ್ಕುಳರು ಈ ರಾಜರೆಲ್ಲರೂ ವಿಶೇಪ್ರಪ್ರೋತ್ಸಾಹಕರಾಗಿದ್ದುದರಿಂದ, ಕನ್ನಡ ಭಾಷೆಯು ಉತ್ತಮಸ್ಥಿತಿಗೆ ಬರಲು ಕಾರಣವಾಯಿತು. 12ನೆಯ ಶತಮಾನದಲ್ಲಿ, ಹೊಯ್ಸಳ ಬಿಟ್ಟ ದೇವನು ಮೈ ಏವಮತವನ್ನವಲಂಬಿಸಿದುದು, ಬಸವನು ಲಿಂಗಾಯ ತರ ಮತವನ್ನು ಸ್ಥಾಪಿಸಿದುದು, ಕಾಲಚರಾಜವಂಶವು ನಮ್ಮವಾದುದು, ಇವೇ ಮೊದಲಾದ ಕಾರಣಗಳಿಂದ ಜೈನರ ಪ್ರಾಬಲ್ಯವು ಕುಗ್ಗಿದಂತೆ ಕಾಣುವುದು, 12ನೇ ಕತನದಿಂದಾಚೆಗೆ 16ನೇ ಶತಮಾನದವರೆಗೆ ವೀರ ಶೈವಗ್ರಂಥಗಳು ಹೆಚ್ಚಾಗಿವೆ. ಈ ವೀರ ಶೈವಗ್ರಂಥಗಳೆಲ್ಲವೂ ಪ್ರಾಯಕವಾಗಿ, ವಚನ, ರಗಳೆ, ಪಟ್ಟದಿ, ತ್ರಿಪದಿ, ಸಂಗತ್ಯವಂಬೀ ರೂಪಗಳಲ್ಲಿವೆ. ಅದರಿಂದಾಚೆಗೆ ವೈಷ್ಣವ ಕವಿಗಳ ಗ್ರಂಥಗಳು ಕೆಲವು ಹುಟ್ಟಿವೆ. ಇದಲ್ಲದೆ, ಅನೇಕರಾಜರೂ, ಕಂತಿ, ಬಿಜ್ಜಳ ದೇವಿ, ಮಹಾದೇವಿ ಯಕ್ಕೆ, ಚೆಲುವಾಂಬೆ, ಸಂಚಿರುಹೊನ್ನಮ್ಮ, ಮಹಾಲಕ್ಷ್ಮಿ ಮುಂತಾದ ಕೆಲವುಸ್ತ್ರೀಯ ರೂ ಕನ್ನಡದಲ್ಲಿ ಗ್ರಂಥಗಳನ್ನು ರಚಿಸಿರುತ್ತಾರೆ. 7, REVIEW OF WORKು. ೭, ಗ್ರಂಥವಿಮರ್ಶೆ. ಕವಿರಾಜಮಾರ್ಗ.-ಈಗ ದೊರೆತಿರುವ ಕನ್ನಡಗ್ರಂಥಗಳಲ್ಲಿ ಇದೇ ವದ ಲನೆಯದು, ಇದು ಅಲಂಕಾರಗ್ರಂಥವು. ಆದರೆ ಈ ಗ್ರಂಥಕರ್ತನು ತನಗೆ ಹಿಂದಿದ್ದ ಕೆಲವು ಕನ್ನಡ ಗ್ರಂಥಕರ್ತರ ಹೆಸರನ್ನು ಹೇಳಿರುವುದರಿಂದ ಇದಕ್ಕೆ ಮೊದಲೇ ಎಷ್ಟೋ ಗ್ರಂಥಗಳು ಹುಟ್ಟಿರಬೇಕು, ಈ ಗ್ರಂಥಕರ್ತನಿಗೆ ನೃಪತುಂಗನೆಂದು ಹೆಸರು. `ಇವನು ರಾಷ್ಟ್ರಕೂಟವಂಶದ ದೊರಯಾಗಿ, 814ರಿಂದ 877ರವರೆ ರಾಜ್ಯಭಾರ ಮಾಡಿದಂತೆ ಶಾಸನಗಳಿಂದ ತಿಳಿದುಬರುತ್ತಿದೆ. ಈಗ ಹೈದರಾಬಾದು ಸೀಮೆಯಲ್ಲಿ (ಮಾಲೆ ಬೇಡ ಎಂದು ಕರೆಯಲ್ಪಡುವ ಮನಸೇಟಪುರವೇ ಈತನ ರಾಜಧಾನಿ, ಇವನಿಗೆ ಅತಿಕಯ ಧವಳ, ನರಲೋಕಚಂದ್ರ, ಕೃತಕೃತ್ಯವಲ್ಲ, ಪರಿಮನರತೀತೀರಿರಾವತಾರ,
ಪುಟ:ಕೆನರೀಸ್ ಭಾಗ ೧.djvu/೩೯೪
ಗೋಚರ