ಕವಿಕಾವ್ಯವಿಮರ್ಶೆ ಎಂಬ ಬಿರುದುಗಳಿದ್ದಂತೆ ತೋರುತ್ತದೆ. ಕವಿರಾಜಮಾರ್ಗವೆಂಬ ಇವನ ಗ್ರಂಥದಲ್ಲಿ, “ದೋಪಾನುವರ್ಣನನಿರ್ಣಯ, ಕಬಾ ಅ೦ಕಾರ, ಅರ್ಧಾಂಕಾರವೆಂಬ ಮೂರು ಪರಿ ಛೇದಗಳಿವೆ. ಇವನು ತನ್ನ ಗ್ರಂಥಾದಿಯಲ್ಲಿ, ಕನ್ನಡಭಾಷೆಯು ಆಗ ಪ್ರಚಾರದಲ್ಲಿದ್ದ ಸ್ಥಳಗಳನ್ನೂ, ತನ್ನ ಕಾಲಕ್ಕೆ ಹಿಂದೆ ಹಳಗನ್ನಡವೆಂಬ ಭಾಷೆಯಿದ್ದು ದನ್ನೂ, ಕನ್ನಡ ಭಾಷೆಯಲ್ಲಿ ದಕ್ಷಿಣೋತ್ತರಮಾರ್ಗಗಳೆಂಬ ಎರಡುಭೇದಗಳಿದ್ದು ದನ್ನೂ, ಬೆದಂಡ, ಜತ್ತಾಣಗಳ೦ಬ ಪದ್ಯಕಾವ್ಯಭೇದಗಳಿದ್ದು ದನ್ನೂ ಸೂಚಿಸಿರುವನು. ಈ ಗ್ರಂಥವು ನೃಪತುಂಗಕೃತವೆಂಬ ಪ್ರತೀತಿಯಿದ್ದರೂ, ಶ್ರೀವಿಜಯನೆಂಬ ಬೇರೆ ಕವಿಯು ಇದನ್ನು ಬರೆದು, ನೃಪತುಂಗನ ಅಂಕಿತದಿಂದ ಪ್ರಕಟಿಸಿದ್ದರೂ ಇರಬಹುದೆಂಬುದಕ್ಕೆ ಅಲ್ಲಲ್ಲಿ ಸೂಚನೆಗಳಿವೆ. ಆದರೆ, ಅದನ್ನು ಚೆನ್ನಾಗಿ ನಿರ್ಧರಿಸುವುದಕ್ಕೆ ತಕ್ಕ ಆಧಾರವಿಲ್ಲ. ಇವನ ಕವಿತೆಯು ಸರಳವಾಗಿದ. ಪಂಪಭಾರತ.-ಇದಕ್ಕೆ ವಿಕ್ರಮಾರ್ಜುನವಿಜಯವೆಂದ ಹೆಸರು. ಇದನ್ನು ಬರೆದವನು ಪಂಪನು, ಇವನು ಆದಿಪುರಾಣವನ್ನೂ ಬರೆದಿರುವನು. ಇವನ ಕಾಲ, ಸುಮಾರು ಕ್ರಿ ಶ, 902. ಈತನು ಜೈನಬುಹ್ಮಣನು. ಈ ಕವಿಯು ಪುಲಿಗೆರೆಯ ರಾಜನಾದ ಚಾಳುಕ್ಯ ವಂಶದ ಅರಿಕೇಸರಿಯ ಆಸ್ಥಾನಪಂಡಿತನಾಗಿ ದಂಡನಾಯಕನಾಗಿ ಧ್ವಂತೆಯೂ ತೋರುತ್ತಿದೆ. ಈ ಕವಿಗೆ ಕವಿತಾಗುಣಾರ್ಣವ, ಪುರಾಣ ಕವಿ, ಸುಕವಿಜನ ಮನೆ ಮನಸೋತ್ತಂಸಹಂಸ, ಸರಸ್ವತೀಮಣಿ ಹಾರ, ಸಂಸಾರಸುದಯ, ಎಂಬ ಬಿರುದುಗಳುಂಟು, ಕವಿಯು ಈ ಗ್ರಂಥದಲ್ಲಿ ರಾಜನಾದ ಅರಿಕೇಸರಿಯನ್ನು ಅರ್ಜ್ ನನಿಗೆ ಹೋಲಿಸಿರುವನು, ಮತ್ತು ಈತನು ಭಾರತದಲ್ಲಿ ಲೌಕಿಕವನ ಆದಿಪುರಾಣ ದಲ್ಲಿ ಜೆನಾಗಮವನ್ನೂ ವಿವರಿಸಬೇಕೆಂದು ಯತ್ನಿಸಿ, ಒಂದನ್ನು ಆರುತಿಂಗಳಲ್ಲಿಯೂ, ಮತ್ತೊಂದನ್ನು ಮರುತಿಂಗಳಲ್ಲಿ ಯ ಬರೆದು ಮುಗಿಸಿದುದಾಗಿ ಹೇಳುತ್ತಾನೆ. ಇವನ ಕಾಲದಿಂದಾಚೆಗೆ ಕಾವ್ಯವನ್ನು ಬರೆದಿರುವ ಜೈನಕವಿಗಳೆಲ್ಲಾ ಪ್ರಾಯಕವಾಗಿ ಇವನನ್ನು ಕೊಂಡಾಡಿರುವರು, ಇವನ ಭಾಷಾ ಶೈಲಿಯು ಬಹಳ ಗಂಭೀರವಾಗಿಯೂ ಬೌಢವಾಗಿಯೂ ಇದೆ. ವಿಕೇ ಪಸಂಸ್ಕೃತಪದಗಳೂ, ಶಬ್ದಾರಾಲಂಕಾರಗಳೂ ಇಲ್ಲದೆ, ನೀಭಾವೋಕ್ತಿಗಳನ್ನೂ, ಲೋಕೋಕ್ತಿಗಳನ್ನೂ ಹೆಚ್ಚಾಗಿ ತೋರಿಸಿರುವನು. ಖಾಂಡವರ ಜನನದಿಂದ ಕೌರವವಧೆಯವರೆಗೆ ಭಾರತಕಥೆಯನ್ನು ಇದರಲ್ಲಿ ಸಂಕೇ ಪವಾಗಿ ಹೇಳಿ, ಕೊನೆಯಲ್ಲಿ ಆರ್ಜ್‌ನನ ಪಟ್ಟಾಭಿಷೇಕವನ್ನು ವರ್ಣಿಸಿರುವನು. ಶಾಂತಿಪುರಾಣ.-ಇದು ಹದಿನಾರನೆಯ ತೀರ್ಥಂಕರನಾದ ಶಾಂತಿನಾಥನ ಚರಿತ್ರನ, ಇದರಲ್ಲಿ 12 ಆಶ್ವಾಸಗಳಿವೆ. ಈ ಕಾವ್ಯಕ್ಕೆ ಪುರಾಣಚೂಡಾಮಣಿಯೆಂದೂ ಹಸರು, ಈ ಗ್ರಂಥವನ್ನು ರಚಿಸಿದವನು ಪೊನ್ನನೆಂಬ ಕವಿ. ಈತನು ಜೈನಮತದವನು,
ಪುಟ:ಕೆನರೀಸ್ ಭಾಗ ೧.djvu/೩೯೫
ಗೋಚರ