ಪುಟ:ಕೆಳದಿನೃಪವಿಜಯಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1X ಚರಿತ್ರಗಳು ಮಾತ್ರ ತುಂಡುತುಂಡಾಗಿದ್ದು ಜನರ ಹೇಳಿಕೆಯ ಮಾತಿನ ಮೇಲೆ ಬರೆದಹಾಗೆ ಕಾಣುತ್ತವೆ. ಆದುದರಿಂದ ಅವುಗಳಲ್ಲಿ ಯಾವು ದಕ್ಕೂ ಗಮನ ಕೊಡಬೇಕಾದುದಿಲ್ಲ. ಆದರೆ ಇಲ್ಲಿ ಹೇಳಿರುವ ವಿಜಯ ನಗರದ ಚರಿತ್ರೆ ಮಾತ್ರ ಸ್ಮಲ್ಪ ವಿಚಾರಾರ್ಹವಾಗಿದೆ. ಈ ಹೇಳಿಕೆಗೆ ಎಸ್ಮರಮಟ್ಟಿಗೆ ಪ್ರಮಾಣವನ್ನು ಕೊಡಬೇಕೆಂದು ತಿಳಿಯಬೇಕಾ ದರೆ ಕೆಳದಿನೃಪವಿಜಯಕ್ಕೆ ಮೂಲಗ್ರಂಥವಾವುದು, ಅದರಲ್ಲಿಯ ಈ ವಿಜಯನಗರದ ಚರಿತ್ರೆಯನ್ನು ಗ್ರಂಥಕರ್ತನು ಎಲ್ಲಿಂದ ಸಂಗ್ರಹಿ ನಿದನು ಎಂಬುದನ್ನು ತಿಳಿದುಕೊಳ್ಳಬೇಕು. ಶಕ ೧೬೦೦ ರಿಂದ ೧೬೩೭ರ ವರೆಗೆ ಆಳಿದ ಹಿರಿಯ ಬಸಪ್ಪ ನಾಯಕನು “ ಶಿವತತ್ಪರತ್ನಾಕರ ” ಎಂಬ ಸಂಸ್ಕೃತ ಗ್ರಂಥವನ್ನು (ಕ್ರಿ. ಶ. 1709ರಲ್ಲಿ] ಬರೆದಿದ್ದಾನೆ. ಇದು ನಾನಾಶಾಸ್ತು ರ್ಥಸಾರ ವನ್ನು ಒಳಗೊಂಡಿದೆ. ಇದರ ನಾಲ್ಕನೆಯ ಕಲ್ಲೋಲದ ಹನ್ನೆರ ಡನೆಯ ತರಂಗದಲ್ಲಿ ವಿಜಯನಗರದ ರಾಜಸ್ಥಾಪನೆಯಾದ ಸಂದರ್ಭ, ಅಲ್ಲಿಂದ ಮುಂದೆ ಆಳಿದ ರಾಜರ ಪರಂಪರೆ ಕಾಲ ಮುಂತಾದುವುಗಳು ಹೇಳಲ್ಪಟ್ಟಿವೆ. ಇದರಿಂದ ಎಂಟು ಕಲ್ಲೋಲಗಳ ವರೆಗೂ ಅಲ್ಲಿ ಸುಮಾರು ಇಪ್ಪತ್ತು ತರಂಗಗಳಲ್ಲಿ ಕೆಳದಿಯ ರಾಜರ ಚರಿತ್ರೆಯ ಬರುತ್ತದೆ 1. ಕೆಳದಿನೃಪವಿಜಯವು ಈ ಸಂಸ್ಕೃತಗ್ರಂಥದ ಆಧಾರದ ಮೇಲೆ ಬರೆದುದೋ ಅಥವಾ ಇವೆರಡಕ್ಕೂ ಮೂಲವಾಗಿ ಮತ್ತಾವುದಾದರೂ ಗ್ರಂಥವಿದ್ದಿತೋ ಗೊತ್ತಾಗುವುದಿಲ್ಲ, ಅಂತು ನಾಲ್ಕನೆಯ ಕಲ್ಲೋಲದ ಹನ್ನೆರಡನೆಯ ತರಂಗದಲ್ಲಿ ನರಸತಿ ಸಿಂಹಾಸನ ವೃತ್ತಾಂತವನ್ನು ಹೇಳುವಾಗ : ಹ ಬ ಹೋ ವಿ ಭು ದೇ ರಾ ವಿ ದೇವಿ ಮಾ ರಾ ವಿ ಸ೦ ತಾ & | ತ್ರಯೋದಶಮಹೀ 1 ವ|| ರಾl ಎಸ ಕೃಷ್ಣಸ್ವಾಮಯ್ಯಂಗಾರ Sources of Vijay೩nagar History' ಎಂಬ ಗ್ರಂಥದ ೧೯-೦-೦, ೩೩೭-೩೬೪ ಪುಟಗಳನ್ನು ನೋಡಿ, ಆದರೆ ಮೈಸೂರು ಓರಿಯಂಟಲ್ ಲೈಬ್ರರಿಯಲ್ಲಿರುವ ಶಿವತತ್ವ ರತ್ನಾ ಕ ರದ ಪ್ರತಿಯಲ್ಲಿ ಕೆಳದಿಯ ಅರಸುಗೆ ಸಂಬಂಧಪಟ್ಟ & ಪ್ರಮಗಳಲ್ಲಾ ಸಂಪೂರ್ಣ ವಾಗಿ ಬಿಟ್ಟು ಹೋಗಿವೆ, ಏನು ಕಾರಣವೋ ತಿಳಿಯದು. K. N. Vij.೨YA

  • +