ಪುಟ:ಕೆಳದಿನೃಪವಿಜಯಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XV ಗಳಿಂದ ಕೂಡಿದ ಕಟ್ಟಡಗಳು ಕಟ್ಟಲ್ಪಟ್ಟುವು, ಹಿರಿಯ ವೆಂಕಟಪ್ಪ ನಾಯಕನು ( ಇಕ್ಕೇರಿಯ ಅರಮನೆಯೊಳೆ ವಿಚಿತ್ರತರರಚನಾಕೌಶ ಆದಿಂ ನಾಟಕಶಾಲೆಯುಂ ನಿರ್ಮಾಣಂಗೈಸಿ'ದನು, ಆತನು ವಿದ್ಯಾ° ಸರಿಗೆ ಕೊಟ್ಟ ಆಶ್ರಯದಿಂದ ತಿರುವುಲಭಟ್ಟರ ಕರ್ಣಾಟ ಶಿವಗೀತೆ, ಶಿವಾಪ್ಪಪದಿ, ಗೀತಗೌರೀವರ, ರಂಗನಾಥರೀತನ ತಂತ್ರಸಾರವ್ಯಾಖ್ಯಾನ ಮುಂತಾದ ಗ್ರಂಥಗಳು ಹುಟ್ಟಿದುವು. ಆಮೇಲೆ “ ಸರಿನಿಕರ ಕಲ್ಪದ್ರುಮ ' ನೆಂದು ಹೊಗಳಿಸಿಕೊಂಡ ಹಿರಿಯ ಬಸಪ್ಪನಾಯಕನು ಕೊಟ್ಟ ಪ್ರೋತ್ಸಾಹದಿಂದ ಮಂತ್ರಿಷಡಕ್ಷರಯ್ಯನ ವೀರಶೈವಧರ್ಮ ಶಿರೋಮಣಿ, ಸಂಗಮೇಶ್ವರನ ಶಿವಸಹಸ್ರನಾಮವ್ಯಾಖ್ಯಾ, ಮರಿತೋಂ ಟದಾರ್ಯನ ವೀರಶೈವಾನಂದಚಂದ್ರಿಕೆ ಮುಂತಾದ ಗ್ರಂಥಗಳು ಹುಟ್ಟಿ ದುವು. ಹಿರಿಯ ಬಸಪ್ಪನಾಯಕನ ಹೆಸರಿನಲ್ಲಿಯೇ ಶಿವತತ್ಪರತ್ನಾ ಕರ, ಪೀರಶೈವಸಂಜೀವಿನೀ, ಸುಭಾಸಿತಸುರದ್ರುಮ, ಸೂಕ್ತಿಸುಧಾಕರ ಎಂಬ ನಾಲ್ಕು ಸಂಸ್ಕೃತಗ್ರಂಥಗಳಿವೆ. ಇವಲ್ಲದೆ ಇವರ ಕಾಲದಲ್ಲಿ ಇನ್ನೂ ಹಲವುಗ್ರಂಥಗಳು ಹುಟ್ಟದುವೆಂದು ಊಹಿಸುವುದಕ್ಕೆ ಕಾರಣ ವಿದೆ. ಕೆಳದಿನೃಪವಿಜಯವು ಚಂಪೂಗ್ರಂಥ ; ನಾವು ನೋಡಿದ ನಾಲ್ಕು ಪ್ರತಿಗಳಲ್ಲಿ ಒಂದರಲ್ಲಿಯ ಇದರ ಪೀಠಿಕಾಪ್ರಕರಣವು ಕಂಡುಬರುವ ದಿಲ್ಲ. ಈ ಪ್ರತಿಗಳಿಗೆಲ್ಲ ಮೂಲವಾಗಿದ್ದಿರಬಹುದಾದ ಮಾತೃಕೆಯಲ್ಲಿಯೇ ಗ್ರಂಥಪಾತವಾಗಿ ಈ ಭಾಗವು ಬಿಟ್ಟು ಹೋಗಿತ್ತೊ, ಅಥವಾ ಕವಿಯು ಬರೆಯಲೇ ಇಲ್ಲವೋ ತಿಳಿಯದು. ಅಂತು ಇತರ ಚಂಪೂಗ್ರಂಥಗಳ ಲ್ಲಿರುವಹಾಗೆ ಕವಿಸಂಪ್ರದಾಯವನ್ನನುಸರಿಸಿ ಸಮುದ್ರವರ್ಣನೆ, ಮೇರು ಪರ್ವತದ ವರ್ಣನೆ, ಜಂಬೂದ್ವೀಪದ ವರ್ಣನೆ, ಕರ್ಣಾಟಕದೇಶದ ವರ್ಣನೆ ಮುಂತಾದವುಗಳು ಕ್ರಮವಾಗಿ ಬರುತ್ತವೆ. ಆದಿಭಾಗದಲ್ಲಿ ವಿಶೇಷವಾಗಿಯೂ ಮುಂದೆ ಅಲ್ಪಸ್ವಲ್ಪವಾಗಿಯ ಶಬ್ದಾಲಂಕಾರ ಅರ್ಥಾಲಂಕಾರ ಮುಂತಾದ ಕಾವೇಚಮತ್ಕಾರಗಳು ಕಂಡುಬರುತ್ತವೆ. ಇಸ್ಮಪಟ್ಟರೆ ಕವಿಯು ಸೌ ಢವಾಗಿಯೂ