ಪುಟ:ಕೆಳದಿನೃಪವಿಜಯಂ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

220 ಕೆಳದಿನ್ನ ಪವಿಜಯಂ ಗೆಲ್ಲು ಬಳಕ್ಕಂ ಶಾರದಾದೇವಿಯಂ ಕರ್ಣಾಟದೇಶದೆಡೆಯೊಳೊಪ್ಪುವ ತುಂಗಭದ್ರಾನದೀತೀರದೊಳಸೆವ ವಿಭಾಂಡಕರ್ಷಿಶರನ ಪುತ್ರನಾದ ಋಷ್ಯಶೃಂಗಮುನಿಯಾಶ್ರಮಮಧ್ಯದೊಳೆ ತಾವು ನಿರ್ಮಾಣಂಗೆಯ್ದಿದ ಶೃಂಗಪುರದ ಮಠಕ್ಕೆ ಬಿಜಯಂಗೆಯ್ತಿ ತಂದು ಶಾರದಾಪೀಠದೊಳೆ ಸ್ಥಿರ ವಾಗಿ ನೆಲೆಗೊಳಿಸಿ ನಿಲಿಸಿ, ಶಾರದಾಪೀಠದಿಂ ಯುಕ್ತವಾದ ಧರ್ಮ ಸಂಸ್ಥಾನವೆಂದು ಸಮಸ್ತದಿಗೇಶದೊಳೆ ಪ್ರಖ್ಯಾತಿಗೆ ತಂದು, ಸಾಂಖ್ಯ ತ್ರಯಪ್ರತಿಪಾದಕ, ವಿಶುದ್ಧಾತಸಿದ್ಧಾಂತವತಸ್ಥಾಪಕ, ಪದವಾಕ್ಕೆ ಪಾರಾವಾರಪಾರೀಣ, ಅಪ್ಪಾಂಗಯೋಗಾನುಸಂಧಾನನಿರತ, ಪಞ್ಚ ತಸ್ಸಾ ಪನಾಚಾರ, ಜಗದ್ದು ರು, ಪರಮಹಂಸಪರಿವ್ರಾಜಕಾಚಾ‌ಶಂಕರಾಚಾ ರರಂಬಿವು ಮೊದಲಾದ ಬಿರುದಂ ಪಡೆದು ಪರಮಪ್ರಸಿದ್ದಿವೆತ್ತು ಮತ್ತ ಮಾಶೃಂಗಪುರದೊಳೆ ತಮ್ಮ ಶಿಷ್ಯರಾದ ಸುರೇಶ್ವರಾಚಾರೀರಂ ನೆಲೆ ಗೊಳಿಸಿ ತಾವು ಸ್ವತಂತ್ರ ಸಂಚಾರವಿನೋದಶೀಲರಾಗಿರುತಿಂತು ವರ್ತಿಸು ತುಂ, ಕೆಲವು ವತ್ಸರಮಿರ್ದು ಮುಕ್ತಿಗೆ ಸಂದರಿ. ಇನ್ನಾ ಸುರೇಶ್ವರಾಚಾರ್ಯ ಕರಕಮಲಸಂಜಾತರಾರೆಂದೊಡೆ, ಅವರ ನಾಮಂಗಳೆ:- ನಿತ್ಯಬೋಧಘನಾಚಾರ್ಯರೆ, ಅವರ ತರುವಾಯು ನೃಸಿಂಹಾಚಾರ್ಯರೆ, ಆ ತರುವಾಯ ಜಾ ನೋತ್ತಮಶಿವಾಚಾರ್ಯರೆ, ಆ ತರುವಾಯ ಜ್ಞಾನಗಿರ್ಯಾಚಾರಣೆ,*ಆ ತರುವಾಯ ನೃಸಿಂಹಗಿ ರ್ಯಾಚಾರಣೆ, ಆ ತರುವಾಯ ಈಶ್ವರತೀರ್ಥಾಚಾರರೆ, ಆ ತರುವಾಯು ನೃಸಿಂಹಾಚಾರರೆ, ಆ ತರುವಾಯು ವಿದ್ವಾಂತೀರ್ಥಾಚಾರ್ಯ5, 2 ಆ ತರು ವಯ ಭಾರತೀತೀರ್ಥಕ್ಷ ಪ್ರಾಚಾರ್ಯರೆ, ಆ ತರುವಾಯ ವಿದ್ಯಾರಣ್ಯ ಯೋಗೀಂದ್ರರೆ. ಮತ್ತಮಾ ವಿದ್ಯಾರಣ್ಯರೆಂಬವರ ಪಂಪಾಕ್ಷೇತ್ರದೊಳಿರ್ದ ಶ್ರೀಚ ಕ್ರೋಪಾಸನೆಯಿಂ ದೇವಿಯಂ ಮೆಚ್ಚಿಸಿ ಬಳಿಕ್ಯಾ ಶೃಂಗೇರಿಯ ಮಠ 1 ಜ್ಞಾನಪುನಚಾರ್‌ (ಕೆ) 2 ಭಾರತೀಕೃಪಾಚಾರ್ಯರ