ಪುಟ:ಕೆಳದಿನೃಪವಿಜಯಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಳದಿನೃಪವಿಜಯಂ ತೊರೆಯಿಂ ರಾಜಿನ ಗಂಧಶಾಲಿವನದಿಂ ಕ್ರೀಡಾಧಿಯಿಂ ಕಣ್ ಭಾ ಸುರವಾಗಿರ್ದುದು ದೇಶಮುನ್ನ ತಸುಖಾವಾಸಂ ದಲೇಂ ವರ್ಣಿ ಪೆಂ ||೧೬ ಮತ್ತಮದಲ್ಲದಾದೇಶಂ (ರ್ಲೋಕದಂತೆ ಸುರುಚಿರಸುರಭಿಸು ಮನೋವೃಕಪರಿಶೋಭಿತವುಂ, ಸುತ್ತಾಮನೋಲಗಶಾಲೆಯಂತೆ ಸುಧ ರ್ಮಾನಿತಮಂ, ವಧೂಸಯೋಧರದಂತಗ್ರಹಾರಮಾಲಾಲಂಕೃತಮುಂ ಗಗನಮಂಡಲದಂತೆ ಭಾಸದ್ಧಿ ಜರಾಜಾಭಿರಾಮಮುಂ, ಅಳಕಾನಗರ ದಂತಗಣ್ಯಂ ಪುಣ್ಯಂಜನಾಧಿಸಿ ತಮಂ, ಸಮಾಸಚಕ್ರದಂತೆ ಬಹುಹಿಸ ಮಾವೃತವುಂ, ಪದ್ಯ ಪೀಠನಂತನಂತನಿಗಮಾಶ್ರಯವಂ, ನಾರಾಯಣ ನಂತೆ ಸುದರ್ಶನೋಪಸೇವ್ಯಮುಂ, ಮಹಾದೇವನಂತಚಲಿತದುರ್ಗಾಪ್ಪ ದಮುವೆನಿಸಿ ವಿರಾಜಿಸುತಿರ್ದುದಂತುಮಲ್ಲದೆಯುಂ || ೧೭ ಪುಸಿ ಕಳವು ಪಾದರಂ ಭೀ ವಸಮುಟ್ಟು ೪ ದಾಳಿ ತೌಳಿಯಪಹೃತಿ ಮೋಸಂ | ಪಿಸುಣನ್ಯಾಯಮೆನಿಪ್ಪಿ ಪೆಸರ್ಗಳೆ ಪೆಸರ್ಗೊಂಬೋಡಿಲ್ಲವಂತಾನಾಡೋಳಿ | ಮತ್ತವಂತುವಲ್ಲದೆ || ಫೋಡ ಯೆಂಬರ್ಶಾಲಿಯನಾ ರಡಿ ಯೆಂಬರ್ಪಟ್ಟದಾಳಿಯಂ ಕರಿಣಿಯುಮಂ || ಪಿಡಿ ಯೆಂಬರಲ್ಲದೀಸರಿ ನುಡಿಯೊಲಿಪೊಡಿಲ್ಲ ಜನರೊಳಂತಾ ನಾಡೋಳೆ | ಕಡೆ ಯೆಂಬರ್ದಧಿಮಥನದೊ ಲೌಡೆಯೆಂಬರ್ಭಕ ಭೇದದೊಳೆ ಕಬರಿಗಳ್ಳಿ | ಮುಡಿ ಯೆಂಬರಲ್ಲದೇ ಬಿರು ನುಡಿ ಕನಸಿನೊಳಾದೊಡಂ ವಿಚಾರಿಪೊಡಿಲ್ಲಂ || ಅಳಿಯಿಲ್ಲದಬ್ಬಮಬ್ಬಾ ವಳಿಯಿಲ್ಲದ ಸರಸಿ ಸರಸಿಯಿಲ್ಲದ ಸನ್ನಂ | ... ... ?