ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೋಟಿ-ಚೆನ್ನಯ.


೧ನೆಯ ಭಾಗ


ಪಡುಮಲೆಯಲ್ಲಿ .

ಹುಕಾಲದ ಹಿಂದೆ ತುಳುರಾಜ್ಯದ ಒಂದೊಂದು ಭಾಗವನ್ನು ಒಂದೊಂದು ಮನೆತನದ ಅರಸರು ಆಳಿಕೊಂಡಿದ್ದರು, ಆ ರಾಜ್ಯದ ಒಂದು ಪ್ರಾಂತ್ಯಕ್ಕೆ ಬಂಗರು ಮನೆಯವರು ಅರಸರಾಗಿದ್ದರು; ಒಂದು ಸೀಮೆಗೆ ಚೌಟರು ದೊರೆಗಳಾಗಿದ್ದರು; ಒಂದು ಭಾಗದಲ್ಲಿ ಆಜಿಲ ಮನೆತನದವರು ಬಲಿಷ್ಠರಾಗಿದ್ದರು. ಈಗ ಹಳ್ಳಿಹಳ್ಳಿಗಳಲ್ಲಿ ಪಟೇಲರು ಇರುವ ಹಾಗೆ ಆ ಕಾಲದಲ್ಲಿ ಗ್ರಾಮಕ್ಕೊಬ್ಬ ಗುರಿಕಾರನಿದ್ದನು. ಇಂಥ ನಾಲ್ಕಾರು ಮಂದಿ ಗ್ರಾಮ ಗುರಿಕಾರರ ಮೇಲೆ ಮತ್ತೊಬ್ಬ ಅಧಿಕಾರಿ ಇದ್ದನು; ಇವನಿಗೆ ಬಲ್ಲಾಳ ಎಂದು ಹೆಸರು. ಬಂಗರು, ಚೌಟರು, ಆಜಿಲರು, ಸಾವಂತರು ಮೊದಲಾದವರ ಕೈಕೆಳಗೆ ಅನೇಕ ಮಂದಿ ಬಲ್ಲಾಳರಿದ್ದರು. ಇಂಥ ಒಬ್ಬ ಬಲ್ಲಾಳನು ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ತಾಲೂಕಿನ ಪಡುಮಲೆ ಎಂಬಲ್ಲಿ ಇದ್ದನು; ಮತ್ತೊಬ್ಬನು ಪಂಜದಲ್ಲಿ ಇದ್ದ ನು; ಮೂರನೆಯವನು ಎಣ್ಮೂರಲ್ಲಿ ಇದ್ದನು.

ಒಂದಾನೊಂದು ದಿನ ಆ ಪಡುಮಲೆ ಪೆರುಮಾಳು ಬಲ್ಲಾಳನು ಬೇಟೆಯಾಡುವುದಕ್ಕಾಗಿ ತನ್ನ ಸಂಗಾತಿಯವರೊಡನೆ ಹೊರಟು, ಸಮೀಪದ ಅಡವಿಯನ್ನು ನುಗ್ಗಿ, ಒಂದು ಕಾಡುಹಂದಿಯನ್ನು ಅಟ್ಟಿ ಕೊಂಡು ಹೋಗುತಿದ್ದಾಗ, ದಾರಿಯ ಮೇಲೆ ಇದ್ದ ಚೂಪಾದ ಕಾಸರ್ಕನ ಮುಳ್ಕೊಂದು ಅವನ ಪಾದಕ್ಕೆ ಚುಚ್ಚಿ, ತಲೆಗೆ ನರನರನೆ ನೋವು ಏರಿ, ಅವನು ಅಲ್ಲಿಯೇ ಬಿದ್ದು ಬಿಟ್ಟನು.

1