ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೇಯಿಬೈದಿಯ ಮದ್ದು

3

"ದೇಯಿ ಬೈದೆತಿ ಮದ್ದು ಬಲ್ಲಳ" ಎಂಬ ವಾಕ್ಯವು ಬಲ್ಲಾಳನ ಕಿವಿಯ ಮೇಲೆ ಬೀಳುವಷ್ಟರಲ್ಲಿ ಅವನು ನನ್ನ ದಂಡಿಗೆಯಲ್ಲಿ ಅವಳನ್ನು ಕರೆದುಕೊಂಡು ಬನ್ನಿ” ಎಂದು ಬೋವಿಗಳಿಗೆ ಅಪ್ಪಣೆಮಾಡಿದನು. ಆಳುಗಳು ಕೂಡಲೆ ಹೊರಟರು.

ಪೆರುಮಾಳು ಬಲ್ಲಾಳನ ಬೋವಿಗಳು ತನ್ನ ಮನೆಯ ಬಾಗಿಲಿಗೆ ಸಿಂಗರಿಸಿ ತಂದಿದ್ದ ದಂಡಿಗೆಯನ್ನು ಕಂಡು ದೇಯಿ ಬೈದಿತಿಯು- "ಆಹಾ! ಅವಶ್ಯವಿಲ್ಲದ ಭವಿಷ್ಯ ಬಂತು" ಎಂದು ಮನಸ್ಸಿನಲ್ಲಿ ನೆನಸಿಕೊಂಡು, ಉಟ್ಟ ಉಡಿಗೆಯಲ್ಲಿಯೇ ಏಳ್ಮಲೆಗೆ ಹೋಗಿ ಏಳು ಹಿಡಿ ಸೊಪ್ಪು ಕೊಯ್ದಳು; ಮೂರ್ಮಲೆಗೆ ಹೋಗಿ ಮೂರು ಹಿಡಿ ಮದ್ದು ತಂದಳು; ಮನೆಗೆ ಬಂದು, ಅಟ್ಟ ಹತ್ತಿ, ತೆಂಗಿನಕಾಯಿ ತಂದು, ಕಾಣಿಕೆ ಇಟ್ಟಳು. ಆ ಮೇಲೆ ಅವಳು ಆ ಮದ್ದನ್ನೂ, ಕಾಯಿಯನ್ನೂ ದಂಡಿಗೆಯಲ್ಲಿ ಮಡಗಿ ಹೊರಟಳು, ಬೋವಿಗಳು ದಂಡಿಗೆಯನ್ನು ಹೊತ್ತು ಕೊಂಡು ಬಂದರು.

ಇತ್ತ ಬಲ್ಲಾಳನು ದೇಯಿ "ಬಂದಳೋ? ಬರುತ್ತಾಳೆ? ಬರುವಳೋ?” ಎಂದು ಪದೇಪದೇ ಕೇಳುತ್ತ ಅವಳ ಬರವನ್ನೇ ಎದುರು ನೋಡುತಿದ್ದನು. ಅಷ್ಟರಲ್ಲಿ ದೇಯಿಯು ದಂಡಿಗೆಯಿಂದ ಇಳಿದು, ನಾಚಿಕೊಂಡು ಹೇಚಿಕೊಂಡು ಬಂದು, ಬಲ್ಲಾಳನ ಹಾಸಿಗೆಯ ಮಗ್ಗುಲಲ್ಲಿ ಕುಳಿತುಕೊಂಡಳು.

ಬಲ್ಲಾಳನು ದೇಯಿಯ ಮೋರೆಯನ್ನೇ ದೃಷ್ಟಿಸುತ್ತ “ಬೈದಿತಿ! ನನ್ನ ಒಂದು ಜೀವವನ್ನು ಉಳಿಸಿಕೊಡಪ್ಪಾ! ಹಿಂದೆ ನನ್ನ ತಾಯಿಯ ಬಸುರಿಂದ ನಾನು ಬಂದೆ; ಇಂದು ನಿನ್ನ ಬಸುರಿಂದ ಬಂದವನು ಎನ್ನಿಸಿಬಿಡವ್ವಾ! ನಿನಗೆ ಯಾರೂ ಮಾಡದಿದ್ದ ಮಾನ ಮಾಡುವೆ; ಕೊಡದಿದ್ದ ಉಡುಗೊರೆ ಕೊಡುವೆ' ಎಂದು ಅಂಗಲಾಚಿ ಹೇಳಿದನು.

ದೇಯಿ ಬೈದಿತಿಯು ಕೂಡಲೆ ಎದ್ದಳು; ತಾನು ತಂದಿದ್ದ ಔಷಧದ ಪೊಟ್ಟಳವನ್ನು ಬಿಚ್ಚಿದಳು; ಅಮ್ಮಣ್ಣನು ಮೊದಲು ಹಚ್ಚಿದ್ದ ಮದ್ದನ್ನು ತೊಳೆದು ತೆಗೆದಳು; ಅನಂತರ ತನ್ನ ಮದ್ದನ್ನು ಅರೆದು ಪೂಸಿದಳು; ಮಂತ್ರದಿಂದ ಮಾಣಿಸಿದಳು; ಸೊಪ್ಪಿನಿಂದ ತಣಿಸಿದಳು,

ಹೀಗೆ ಮಾಡಲಾಗಿ,-ಬಲ್ಲಾಳನಿಗೆ ಗಳಿಗೆಯಿಂದ ಗಳಿಗೆಗೆ, ದಿನ ದಿಂದ ದಿನಕ್ಕೆ- ಎದೆಯಲ್ಲಿ ಇದ್ದದ್ದು ನಡುವಿಗೆ ಬಂತು; ನಡುವಿನಲ್ಲಿ

1*