ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಲ್ಲಯ ಬುದ್ಧಿವಂತ

5

“ನನ್ನ ಮಗಳು, ಕಿನ್ನಿದಾರು ಇದಾಳೆ.—ಅವಳಿಗೆ ?” ಎಂದು ಬೈದಿತಿಯು ಕೇಳಿದಳು. “ಅವಳು ನಿಮ್ಮ ಮನೆಯಲ್ಲಿ ಇದ್ದಾಳೋ” ಎಂದು ಬಲ್ಲಾಳನು ಪ್ರಶ್ನೆ ಮಾಡಿದನು.

ಬೈದಿತಿಯು ಅವಳಿಗೆ ಏಳುವರ್ಷ ವಯಸ್ಸು ಎಂದಾಗ ಪಂಜದಲ್ಲಿ ಪಯ್ಯ ಬೈದ್ಯನಿಗೆ ಕೈ ಹಿಡಿಸಿ ಕೊಟ್ಟು ಬಿಟ್ಟಿದ್ದೇವೆ. ಈ ವರ್ಷದ ಅಯನಕ್ಕೆ ಇಲ್ಲಿಗೆ ತರಿಸಿಕೊಳ್ಳಬೇಕೆಂದಿದ್ದೇನೆ' ಎಂದಳು.

ಅದಕ್ಕೆ ಬಲ್ಲಾಳನು ಈ ಪಟ್ಟಿಯ ಸೀರೆ, ಈ ಕುತ್ನಿಯ ರವಕೆ, ಈ ಚಿನ್ನದ ಬಳೆ ಅವಳಿಗೆ” ಎಂದು ಹೇಳಿ ಕೆಲವು ಒಡವೆ ವಸ್ತುಗಳನ್ನು ಕೊಟ್ಟು, ದೇಯಿಬೈದಿತಿಯನ್ನು ಕಳುಹಿಸಿದನು. ಬೀಡಿನ ಚಾವಡಿಯಿಂದ ಇಳಿದು ಬಂದ ದೇಯಿಗೆ ಕಂಬಳದ ಗದ್ದೆಯ ಹತ್ತಿರ ಬರುವಷ್ಟರಲ್ಲಿ ಹೆರಿಗೆ ಬೇನೆಯು ತೋರಿತ್ತು ಅವಳು ಗದ್ದೆಯ ತವರಿಯ ಮೇಲಿನ ಒಂದು ಕೆಂದಾಳೆ ತೆಂಗಿನ ಮರಕ್ಕೆ ಒರಗಿ ಕೊಂಡು, ವ್ಯಥೆಯಿಂದ ನಿಂತುಬಿಟ್ಟಳು. ಅಷ್ಟರಲ್ಲಿ ಹಿಂದೆ ಹೇಳಿದ ಆ ಮಲ್ಲಯ ಬುದ್ಧಿವಂತನು ಬೀಡಿಗಾಗಿ ಅದೇ ದಾರಿಯಲ್ಲಿ ಬರುತಿದ್ದು, ಹಾದಿಗೆ ಅಡ್ಡವಾಗಿ ಕದಲದೆ ನಿಂತಿದ್ದ ದೇಯಿಯನ್ನು ಕಂಡು, “ಅಬ್ಬ! ಬಿಲ್ಲರ ಹೇಣ್ಣೊ? ರಕ್ತದ ಕೊಬ್ಬೊ? ದುಡ್ಡಿನ ಸೊಕ್ಕೊ?” ಎಂದು ಬಿರುಸಾಗಿ ಬಾಯಿ ಮಾಡಿದನು. ದೇಯಿಯು ಉಸ್ಸೆಂದು ಉಸಿರುಬಿಟ್ಟು “ನಾನು ಸೊಕ್ಕಿನಿಂದ ನಿಂತದ್ದೇ ಆದರೆ ನಾನು ಮಾಡಿದ್ದನ್ನು ನಾನೇ ಉಣ್ಣುವೆ. ನಾನು ಸಂಕಟದಿಂದ ನಿಂತದ್ದು ಹೌದಾದರೆ, ನನ್ನ ಮಕ್ಕಳು ನೋಡಿಯಾರು?” ಎಂದು ಮೆಲ್ಲನೆ ಉತ್ತರ ಕೊಟ್ಟಳು.

ಇಷ್ಟರೊಳಗೆ ಬೇನೆಯ ಸುದ್ದಿಯು ಬೀಡಿಗೆ ಮುಟ್ಟಿತು. ಪೆರುಮಾಳು ಬಲ್ಲಾಳನು ದೇಯಿಯ ಹೆರಿಗೆಗಾಗಿ ಎಲ್ಲವನ್ನು ಏರ್ಪಡಿಸಿದನು. ದೇಯಿಯು ಬೀಡಿನ ಒಂದು ಅರೆಯಲ್ಲಿ ಅವಳಿಜವಳಿ ಗಂಡು ಮಕ್ಕಳನ್ನು ಹೆತ್ತಳು, ಸೂತಕದ ದಿವಸಗಳು ಕಳೆದನಂತರ ಮಕ್ಕಳಿಗೆ ನಾಮಕರಣವಾಯಿತು. 'ದಕ್ಷಿಣ ಕೋಟೇಶ್ವರ ದೇವರೆ ಬದಿಕಲ್ಲು ಬಾಳುವಂತ ಬಾಳು' ಎಂದು ಹರಸಿ ಹಿರಿಯ ಮಗುವಿಗೆ ಕೋಟಿ ಎಂತಲೂ, ಉತ್ತರ ಚೆನ್ನಿಗ ದೇವರ ಬದಿಕಲ್ಲು ಬಾಳುವಂತೆ ಬಾಳು' ಎಂದು ಹರಸಿ ಕಿರಿಯ ಮಗುವಿಗೆ ಚೆನ್ನಯ ಎಂತಲೂ ಇಬ್ಬರಿಗೂ ಹೆಸರು ಹಾಕಿದರು.