ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೆಂಡಾಟದ ಜಗಳ

7

ದಾರಿಯಲ್ಲಿ ಅವರಿಬ್ಬರು ಚೆಂಡಾಡುತ್ತ ತನ್ನ ಎದುರಿಗೆ ಬಂದದ್ದನ್ನು ಕಂಡು ಬುದ್ದಿವಂತನು ಅವರ ಕೈಗೆ ಹೊಡೆದು, ಚೆಂಡನ್ನು ಕಸಕೊಂಡು ಹಿಂದೆರಳಿದನು. ಕೋಟಿ ಚೆನ್ನಯರು ಕೈಯೆತ್ತಲಿಲ್ಲ.

ಅಯ್ಯಾ ! ಚೆಂಡನ್ನು ಚೆನ್ನಾಗಿ ಕಟ್ಟಿಡಿ ! ನಮ್ಮ ಸಣ್ಣ ಕೈಗಳಿಂದ ನೀವು ಕಿತ್ತ ಚೆಂಡನ್ನು ದೊಡ್ಡ ಕೈಗಳಿಂದ ಬೆಳೆದು ತಂದೇವು- ಮರೆಯಬೇಡಿ ! ” ಎಂದು ಹೇಳಿ ಇಬ್ಬರು ಹುಡುಗರು ಮನೆಯ ದಾರಿ ಹಿಡಿದರು.

ಅಲ್ಲಿಂದ ಇತ್ತ ಬುದ್ಧಿವಂತನ ಮನೆಯವರಿಗೂ ಬಿಲ್ಲವರ ಮನೆಯವರಿಗೂ ಮನಸ್ಸು ಸರಿಯಿಲ್ಲದೆ, ಜಗಳಗಳು ಹುಟ್ಟಿ, ಆಗಾಗ ಬಲ್ಲಾಳನ ಬೀಡಿಗೆ ದೂರು ಹೋಗುತಿತ್ತು. ಈ ಮನೆಯ ಕೋಳಿಯ ಮರಿ ಅವರ ಅಂಗಳಕ್ಕೆ ಹಾರಿ ಬಂತೆಂದು ಜಗಳ, ಆ ಮನೆಯ ದನದ ಕರು ಇವರ ಗದ್ದೆಯ ಹತ್ತಿರ ಬಂತೆಂದು ಜಗಳ, ಇಂಥಾ ವ್ಯಾಜ್ಯಗಳನ್ನು ಪದೇಪದೇ ತೀರಿಸುವ ಬದಲಾಗಿ ಇವರಿಬ್ಬರನ್ನು ಬೇರ್ಪಡಿಸುವುದೇ ಮೇಲೆಂದು ಪೆರುಮಾಳು ಬಲ್ಲಾಳನು ನಿಶ್ಚಯಿಸಿ, “ನೀವು ಇಬ್ಬರು ಒಂದೇ ಬೈಲಿನಲ್ಲಿ ಒಂದೇ ನೆರೆಯಲ್ಲಿ ಇದ್ದರೆ, ನಿಮ್ಮ ತೊಂಡುತೊಳಸು ನಮಗೆ ಸದಾ ಸರ್ವದಾ ತಪ್ಪದು. ಭೂಮಿಯನ್ನು ಪಾಲು ಮಾಡಿಕೊಡುತ್ತೇನೆ. ಆಸ್ತಿಯಲ್ಲಿ ಕೆಳಗಿನ ಕಂಬುಳದ ಗದ್ದೆಯು ಬುದ್ದಿವಂತನಿಗೆ, ಮೇಲಿನ ಕಂಬುಳವು ಬಿಲ್ಲವರಿಗೆ' ಎಂದು ತೀರ್ಮಾನಮಾಡಿ, ಗಡಿ ಬಿಡಿಸಿಕೊಟ್ಟು,"ಕಂಬುಳವನ್ನು ಗೋರುವಾಗ ಬಿಲ್ಲವರು ಬುದ್ಧಿವಂತನಿಗೆ ಒಂದು ಕಾಣಿಕ ಕೊಡಬೇಕು” ಎಂದು ಕಟ್ಟುಮಾಡಿದನು. ಈ ರೀತಿಯಾಗಿ ಗದ್ದೆಗಳನ್ನು ವಿಂಗಡಿಸಿಕೊಟ್ಟ ತರುವಾಯ ಕೋಟಿ ಚೆನ್ನಯರು ಅನಿಲಜೆ ಬೈಲನ್ನು ಬಿಟ್ಟು, ಏರಜೆ ಎಂಬಲ್ಲಿಗೆ ಹೋಗಿ, ಅಲ್ಲಿ ಉಳುಕೊಂಡಿದ್ದರು.

ಕೋಟಿ ಚೆನ್ನಯರು ದೂರವಾದರೂ ಮಲ್ಲಯ ಬುದ್ಧಿವಂತನ ಮನಸ್ಸಿನಲ್ಲಿದ್ದ ಕಿಚ್ಚು ಮಾತ್ರ ಆರಲಿಲ್ಲ. ಒಳಗೊಳಗೆ ಬೇಯುತ್ತಲಿದ್ದ ಆ ಹಗೆಯು ಒಂದು ದಿನ ಕುದಿಬ೦ದು ಹೊರಗೆ ಹರಿಯಿತು,

ವರ್ಷ ವರ್ಷವೂ ಬರುವ ಅನಿಲಜೆ ಬೈಲಿನ ಕಂಬುಳದ ಉತ್ಸವವು ಸಮೀಪಿಸಿತು. ಬುದ್ದಿವಂತನು ಕಂಬುಳಕ್ಕೆ ಮುಹೂರ್ತ ಕೇಳಿಕೊಳ್ಳುವು