ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

12

ಕೋಟಿ ಚೆನ್ನಯ

ತಕ್ಕ ನೀರು ಕ್ರಮ ಪ್ರಕಾರವಾಗಿಯೇ ಹೋಗಲಿ! ಅಡ್ಡಗಟ್ಟ ಬೇಡ! ರೀತಿ ರಿವಾಜು ಮೀರ ಬೇಡ ” ಎಂದು ಹೇಳಿ, ಮತ್ತೊಮ್ಮೆ ಕೈ ಮುಗಿದನು.

“ಕ್ರಮಗಿಮ, ರೀತಿರಿವಾಜು ನಿಮಗೆ ಮುಂಡೆ........” ಎಂದು ಮಲ್ಲಯನ ನಾಲಗೆಯಿಂದ ಬೈಗಳು ಬೀಳುವಷ್ಟರಲ್ಲಿ, ಚೆನ್ನಯನು ಅಣ್ಣನ ಕೈಯಿಂದ ಬಿಡಿಸಿಕೊಂಡು, ಚಿಟ್ಟನೆ ಚೀರಿ, ಬುದ್ಧಿವಂತನ ತಲೆ ಹಿಡಿದು ಗಂಟಲನ್ನು ಹಿಂಡಿ, ಬೆನ್ನನ್ನು ಮುಟ್ಟಿ, ಮುಳ್ಳು, ಹುರಿಯನ್ನು ಮುರಿದು, ನೆಲದ ಮೇಲೆ ಅಂಗತಾನೆ ಕೆಡವಿ, ಬೆಳ್ಳಿಯ ಕಟ್ಟಿನ ಬಿಳಿಯ ಸುರಗಿಯನ್ನು ಮೂರು ಸಲ ಅವನ ಎದೆಗೆ ಹಾಕಿದನು. ಮಲ್ಲಯ ಬುದ್ಧಿವಂತನು ಕತ್ತಿಯ ತಿವಿತದಿಂದ ಬಿಸಿ ನೆತ್ತರನ್ನು ನೊರೆನೊರೆಯಾಗಿ ಕಾರಿ, ಕಾಯ ಬಿಟು ಕೈಲಾಸಕ್ಕೆ ಸಂದನು.

ಅನಂತರ ಬುದ್ದಿವಂತನ ಶವಕ್ಕೆ ಕೋಟಿ ಚೆನ್ನಯರು ನೂತನ ಸಂಸ್ಕಾರ ಮಾಡಿದರು. ಅವರು ಹೆಣವನ್ನು ಗದ್ದೆಯ ತೋಡಿನಲ್ಲಿ ಇಟ್ಟು, ಒಂದೊಂದು ಹಾರೆ ತುಂಬ ಮಣ್ಣು ತೆಗೆದು “ಈ ಮಣ್ಣು ಮುದ್ದೆ ನಿನ್ನ ತಲೆಯ ಮುಂಡಾಸು, ಇದು ಮೈಯ ಹಚ್ಚಡ, ಇದು ಕಂಬಿಯ ದೋತರ, ಇದು ಕಾಲಿನ ಎಕ್ಕಡ” ಎಂಬುದಾಗಿ ಹೇಳುತ್ತ, ಸುಗ್ಗಿಯ ಗದ್ದೆಯ ತೆವರಿಗೆ ಮಣ್ಣು ಮೆತ್ತುವಂತೆ ಹೆಣದ ಮೇಲೆ ಮಣ್ಣಿಟ್ಟು, ಬುದ್ಧಿವಂತನ ಮನೆಯ ಕಡೆಗೆ ತಿರುಗಿದರು.

ಕೋಟಿಚೆನ್ನಯರನ್ನು ಕಾಣುತ್ತಲೆ ಬುದ್ಧಿವಂತನ ಹೆಂಡತಿಯ ಎದೆಯು ದಡದಡಿಸಿತ್ತು, ಬಾಯ ನೀರು ಒಣಗಿತು. ಅವಳು ಚೆನ್ನಯನ ಕೈಯಲ್ಲಿದ್ದ ಕತ್ತಿಯ ರಕ್ತವನ್ನು ಕಂಡು, ತನ್ನ ಗಂಡನಿಗೆ ಆಪತ್ತು ಬಂತೆಂದು ತಿಳಿದು, 'ಕುಯ್ಯೋ” ಎಂದು ಕೂಗುತ್ತ, ಕಂಬಳದ ಗದ್ದೆಗೆ ಓಡಿದಳು. ಯನು “ಅಣ್ಣಾ! ಇದೀಗ ಸಮಯ! ನಮ್ಮ ಸಣ್ಣ ಕೈಗಳಿಂದ ಅಂದು ಕಸುಕೊಂಡು ಹೋದ ಚೆಂಡನ್ನು ದೊಡ್ಡ ಕೈಗಳಿಂದ ತಂದೇವೆಂಬುದಾಗಿ ನಾವು ಆಡಿದ ಮಾತನ್ನು ಸಲ್ಲಿಸುವುದಕ್ಕೆ ಇದೀಗ ಸಮಯ!” ಎಂದು ಹೇಳಿ ಆ ಮನೆಯೊಳಕ್ಕೆ ಹೋಗಿ, ತಮ್ಮ ಚಿಕ್ಕಂದಿನ ಚೆಂಡನ್ನು ಹೊರಕ್ಕೆ ತಂದು, ಅಣ್ಣಾ! ಹೊತ್ತಾಯಿತು, ಇನ್ನು ಮನೆಗೆ ಹೋಗೋಣ ! ” ಎಂದು ಹೇಳಿ, ಇಬ್ಬರು ತಮ್ಮ ಮನೆಯ ದಾರಿ ಹಿಡಿದರು. ಆಗ ಚೆನ್ನ