ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

14

ಕೋಟಿ ಚೆನ್ನಯ

ಅವಳ ಗೋಳನ್ನು ಕಂಡು ಚೆನ್ನಯನು ಅಮ್ಮಾ! ನೀನೇಕೆ ಅಳುವೆ? ಈ ಕತ್ತಿಗೆ ಧಾರೆ ಇದೆ; ನನ್ನ ಕೈಗೆ ಚಳಕವಿದೆ. ನಾವು ಯಾರನ್ನೂ ಹೆದರಬೇಕಾಗಿಲ್ಲ. ಯಾರಾದರೂ ಸರಿಯೇ! ನಮ್ಮನ್ನು ನೀತಿಯಿಂದ ಕಂಡರೆ, ಅವರಿಗೆ ಎದೆಯ ಮೇಲಿಂದ ಹಾದಿಕೊಟ್ಟೆವು; ಅನ್ಯಾಯದಿಂದ ಕಂಡರೆ, ಅವರ ಪ್ರಾಣವನ್ನು ಹೀರಿಬಿಟ್ಟೇವು” ಎಂದು ಬಿರುಸಿಂದ ಹೇಳಿದನು.

ಸಾಯಿನ ಬೈದಿತಿಯು “ಮಕ್ಕಳೇ! ಇನ್ನು ನಿಮಗೆ ಉಳಿಗಾಲವಿಲ್ಲ. ಇಲ್ಲಿ ಇನ್ನು ಮುಂದೆ ನಿಮಗೆ ನೀರು ನಂಜಾಯಿತು, ಊರು ಹಗೆಯಾಯಿತು. ಪಡುಮಲೆ ರಾಜ್ಯದಲ್ಲಿ ಒಂದು ಹಗೆ, ಒಂಭತ್ತು ಹೇಗೆ ? ಎಂದಳು.

ಅದಕ್ಕೆ ಕೋಟಿಯು “ಹಾಗಾದರೆ, ನಾವು ಪರರಾಜ್ಯಕ್ಕೆ ಹೋಗುತ್ತೇವೆ. ನಮಗೆ ಈ ರಾಜ್ಯದಲ್ಲಿಯೇ ನೀರು ಬರೆದಿದೆಯೋ?” ಎಂದನು,

ಆ ಮಾತಿಗೆ ಬೈದಿತಿಯು ಈ ನಿಮ್ಮ ಯೋಚನೆಯು ಬಲ್ಲಾಳನಿಗೆ ಗೊತ್ತಾದರೆ, ಅವನು ಸುಮ್ಮನಿರಲಿಕ್ಕಿಲ್ಲ. ನಿಮಗೆ ತನ್ನ ರಾಜ್ಯದಲ್ಲಿ ಬೆಂಕಿ ನೀರು ಕೊಡಬಾರದಾಗಿ ಅವನು ಡಂಗುರ ಹೊಯಿಸುವನು; ನೀವು ರಾಜ್ಯದ ಗಡಿ ದಾಟುವಾಗ ನಿಮ್ಮನ್ನು ಹಿಡಿದು ತರಬೇಕೆಂದು ಉಕ್ಕಡದವರಿಗೂ, ಸುಂಕದ ಕಟ್ಟೆಯವರಿಗೂ, ಅರವಟ್ಟಿಗೆಯವರಿಗೂ ಅಪ್ಪಣೆ ಮಾಡುವನು. ಅವನ ಕಣ್ಣು ಮರಸಿಕೊಂಡು ಹೋಗುವುದು ಸರಿಯೂ ಅಲ್ಲ, ಸಾಧ್ಯವೂ ಇಲ್ಲ” ಎಂದಳು.

ಹಾಗಾದರೆ ಅವನನ್ನು ಬೀಡಿನಲ್ಲಿ ಕಂಡೇ ಹೋಗುವೆವು. ಅವನ ಭಯವೇನು?” ಎಂದು ಚೆನ್ನಯರು ಹೇಳಿದನು.

ತಾಯಿ ಮಕ್ಕಳು ಹೀಗೆ ಮಾತಾಡುತಿದ್ದಾಗ, ಬಲ್ಲಾಳನ ಜನರುಗಳು ಬಂದು, ಕೋಟಿ ಚೆನ್ನಯರನ್ನು ಬೀಡಿಗೆ ಕರೆದುಕೊಂಡುಹೋದರು, ಅವರು ಮನೆಯಿಂದ ಹೊರಡುವ ಮೊದಲು ಬೈದಿತಿಯು ಕೋಟಿಯನ್ನು ಕರೆದು, ಬಲ್ಲಾಳನ ಮುಂದೆ ಹೇಗೆ ಹೇಗೆ ವರ್ತಿಸಬೇಕೆಂದು ಆತನ ಕಿವಿಯಲ್ಲಿ ಹೇಳಿದಳು

ಮನೆಯಿಂದ ಹೊರಟ ಕೋಟಿ ಚೆನ್ನಯರು ಬಲ್ಲಾಳನ ಆಳುಗಳೊಂದಿಗೆ ಪಾಲೆ ದಾಟಿ, ಬೈಲು ಕಳೆದು, ಬೆಟ್ಟ ಹತ್ತಿ, ಹಿತ್ತಿಲಿಗೆ ಇಳಿದು,