ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

16

ಕೋಟಿ ಚೆನ್ನಯ

ಚೆನ್ನಯ- “ನಾವು ಸತ್ತ ನಂತರ ನಿಮ್ಮ ಹತ್ತಿರ ಕೇಳುವವರು ಯಾರು?
ಬಲ್ಲಾಳ- “ಏನು ಬೇಕು, ಕೇಳಿ ಕೊಡುತ್ತೇನೆ.”
ಕೋಟಿ-ಬೀಡಿನ ಮುಂದಿನ ಬಾಕಿಮಾರು ಗದ್ದೆ.”
ಬಲ್ಲಾಳ-“ಅದಾಗದು”,
ಕೋಟಿ-'ಹಾಲು ಬತ್ತದ ಸರಳೆಮ್ಮೆ”.
ಬಲ್ಲಾಳ- ಅದು ನಮಗೆ ಬೇಕು”
ಕೋಟಿ- “ಇಡೀ ವರ್ಷ ಕಾಯಿ ಮಿಡಿ ಹಣ್ಣುಗಳನ್ನು ಒಟ್ಟಿಗೆ ಬಿಡತ್ತಿರುವ ಆ ಹಲಸಿನ ಮರ
ಬಲ್ಲಾಳ- ಅದನ್ನು ಬಿಡು. ಬೇರೊಂದು ಕೇಳು”.
ಚೆನ್ನಯ- ನಿಮ್ಮ ಇಬ್ಬರ ಹೆಂಡಿರ ಹೂದೋಟಗಳನ್ನು ಕೊಡಿಸಿ.”
ಬಲ್ಲಾಳ “ಏನಂದೆ ?
ಚೆನ್ನಯ-ನಿಮ್ಮ ಪಟ್ಟದ ಕತ್ತಿ.”

ಬಲ್ಲಾಳನು ಕೋಪದಿಂದ ಕೆಂಪಗಾಗಿ ಬೀಡಿನ ಹಾಲಿನಿಂದ ಬೆಳೆದ ನೀವು ನಮ್ಮ ಹೆಂಡಿರ ಹೂದೋಟಗಳನ್ನೂ, ನಾವು ಹಿಡಿಯುವ ಪಟ್ಟದ ಕತ್ತಿಯನ್ನೂ ಬಯಸಿದ ಮೇಲೆ ಮುಂದೆ ಯಾವುದನ್ನು ಕೇಳುವಿರಿ, ಏನನ್ನು ಮಾಡುವಿರಿ ಎಂದು ಹೇಳಲಾಗುವುದಿಲ್ಲ, ಬಿಡಲಾಗದು” ಎಂದು ಹೇಳಿ, ಅವರನ್ನು ಹೆಡೆಮುಡಿ ಕಟ್ಟಿ ತೆಗೆದುಕೊಂಡು ಹೋಗಲು ತನ್ನ ಕಡೆಯವರಿಗೆ ಕಟ್ಟಾಜ್ಞೆ ಮಾಡಿದನು.

“ಕೇಳದ ಉಚಿತ ಕೇಳಿದರೆ ಬಲ್ಲಾಳನಿಗೆ ಬಾರದ ಕೋಪವು ಬರುತ್ತದೆ ” ಎಂದು ಬೈದಿತಿಯು ತನಗೆ ಹೇಳಿದ್ದು ಸತ್ಯವೆಂದು ಕೋಟಿಗೆ ಈಗ ತಿಳಿಯ ಬಂದು, ಅವನು ತನ್ನ ಹಚ್ಚಡದೊಳಗೆ ಅಡಗಿಸಿ ಇಟ್ಟಿದ್ದ ಒಂದು ಪೊಟ್ಟಳವನ್ನು ಮೆಲ್ಲನೆ ಬಿಚ್ಚಿದನು. ಆ ಪೊಟ್ಟಳದಲ್ಲಿ ವೀಳ್ಯದೆಲೆಯ ಕವಳೆಗಳು ಇದ್ದುವು. ಹಾಲೆಮರಕ್ಕೆ ಹೋದ ಪಂಚವಳ್ಳಿ ಜಾತಿಯ ವೀಳ್ಯ, ಮಾವಿನ ಮರಕ್ಕೆ ಹೋದ ಮುಂಡುವಳ್ಳಿ ಜಾತಿಯ ವೀಳ್ಯ-ಕೋಟಿಯು ಆ