ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮದುವೆಯಾಗದ ಬ್ರಾಹ್ಮಣತಿ

25

ಬಲಪಾರ್ಶ್ವದ ಗೋಡೆಯ ಮರೆಯಲ್ಲಿ ನಿಂತುಕೊಂಡು ಇವರ ಮಾತುಕಥೆ ಕೇಳುತಿದ್ದನು.

ಚೆನ್ನಯ- “ಕಥೆ ಕೇಳೋಣ”

ಹೆಂಗಸು~ “ನಮ್ಮ ಅಜ್ಜಿ, ಅಂದರೆ ತಾಯಿಯ ತಾಯಿ ಬ್ರಾಹ್ಮಣಿತಿಯಂತೆ, ಅವಳಿಗೆ ತಕ್ಕ ಕಾಲದಲ್ಲಿ ಮದುವೆಯಾಗದೆ ಇದ್ದುದರಿಂದ, ತಾಯಿತಂದೆಗಳು ತಮ್ಮ ಜಾತಿಕಟ್ಟಳೆ ಮೀರಲಾರದೆ, ಅವಳನ್ನು ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟರಂತೆ,

ಕೋಟಿ- ಆ ಮೇಲೆ

ಹೆಂಗಸು- ಆ ಮೇಲೆ ಕಳ್ಳು ತೆಗೆಯಲು ತಾಳೆಮರ ಏರಿದ್ದ ಒಬ್ಬನು ಅವರನ್ನು ಕಂಡು, ಬೀಡಿಗೆ ಹೋಗಿ ತಿಳಿಸಿದನಂತೆ. ಬಲ್ಲಾಳರು ಅಪ್ಪಣೆ ಮಾಡಿದರಂತೆ; ಆ ಪ್ರಕಾರ ಅವನು ಅವರನ್ನು ಮನೆಗೆ ಕೊಂಡುಹೋಗಿ, ಚೆನ್ನಾಗಿ ಸಾಕಿ, ಬಿರ್ಮಣ ಬೈದ್ಯನಿಗೆ ಮದುವೆಮಾಡಿ ಕೊಟ್ಟನಂತೆ,”

ಕೋಟಿ- “ಕರ್ಗೋಲ ತೋಟದ ಬಿರ್ಮಣ್ಣ ಬೈದ್ಯನಿಗೊ?”

ಹೆಂಗಸು- “ಹೌದು ಹೌದು, ಕರ್ಗೊಲ ತೋಟ- ಆ ಹೆಸರೇ ಮರೆತುಹೋಗಿತ್ತು. ನನ್ನ ತಾಯಿ ಆ ಹೆಸರನ್ನು ಒಂದು ಸಲ ಹೇಳಿದ್ದು ನನಗೆ ನೆನಪಿದೆ.”

ಕೋಟಿ- "ತಾಯಿ ಯಾರು?"

ಹೆಂಗಸು - "ಬಿರ್ಮಣ್ಣ ಬೈದ್ಯನ ಮಗಳೇ ನನ್ನ ತಾಯಿ”

ಕೋಟಿ- "ತಾಯಿಯ ಹೆಸರು?"

ಹೆಂಗಸು- "ದೇಯಿ"

ಕೋಟಿ- "ತಂದೆಯ ಹೆಸರು?"

ಹೆಂಗಸು- “ಕಾಂತಣ್ಣ”

ಕೋಟಿ- "ಮೂಲಸ್ಥಳ?”

ಹೆಂಗಸು- “ಕೆಮ್ಮಲಳೆಯ ಬ್ರಹ್ಮರ ಎಂದು ಹೇಳುವುದನ್ನು ಕೇಳಿ ದ್ದೇನೆ. ನಾನು ನೋಡಲಿಲ್ಲ.”