ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೆಂದುಗಿಡಿ

29

ಬೇರೊಬ್ಬರ ಎದೆಗಾರಿಕೆಯು ಆತನ ಕಣ್ಣಿಗೆ ಆಗದು. ಅವನು ಮೊದಲೇ ಚೆನ್ನಯನ ಕೈಯಾಟವನ್ನೂ, 'ಬಿಲ್ಲಿನ ಹೊಡೆತವನ್ನೂ, ಕೊಳಲಿನ ಜಾಣ್ಮೆಯನ್ನೂ ಕಂಡು ಬೆಚ್ಚಿ ಹೋಗಿದ್ದನು. ಅದೂ ಅಲ್ಲದೆ ತಾನು ಬೀಡಿನಿಂದ ಕೆಳಕ್ಕೆ ಬೀಳಿಸಿದ್ದ ಪಯ್ಯಬೈದ್ಯನು ಅರಸು ಕೊಂಬೆಯಲ್ಲಿ ತೊಳೆದು ತೂಗುತ್ತಲಿದ್ದ ತನ್ನನ್ನು ಈ ಕೋಟಿ ಚೆನ್ನಯರ ಬಲ್ತೋಳಿನ ದೋಟಿಯಿಂದ ಎಳೆದು ಹಾಕಿ ನೆಲಕ್ಕೆ ಉದುರಿಸಿ ಬಿಡಲಿಕ್ಕಿಲ್ಲವೇ ಎಂಬೊಂದು ಸಂಶಯವು ಚೆಂದುಗಿಡಿಯ ತಲೆಯನ್ನು ತಿನ್ನುತ್ತಲಿತ್ತು. ಆದುದರಿಂದ ಆ ಮೂವರು- ಕೇಮರ ಬಲ್ಲಾಳ, ಪಯ್ಯಬೈದ್ಯ, ಕೋಟಿ ಚೆನ್ನಯರು ಪರಸ್ಪರ ಕೈಗೂಡಿರದೆ, ಮೂರು ಮಲೆಗಳಲ್ಲಿ ಪ್ರತ್ಯೇಕವಾಗಿರುವುದೇ ತನಗೆ ಮೇಲೆಂದು ಆ ಚಂದುಗಿಡಿಯು ಯೋಚಿಸಿ, ಕೇಮರ ಬಲ್ಲಾಳನು ಕೋಟಿ ಚೆನ್ನಯರನ್ನು ಕಣ್ಣು ತುಂಬ ನೋಡದಂತೆ ಹವಣಿಸುತ್ತಿದ್ದರೂ ತನ್ನ ಮನಸ್ಸಿನಲ್ಲಿ ಇದ್ದುದನ್ನು ಮೋರೆಯಲ್ಲಾಗಲಿ ಮಾತಿನಲ್ಲಾಗಲಿ ತೋರಿಸುತ್ತಿರಲಿಲ್ಲ. ಇದು ಪಯ್ಯಬೈದ್ಯನಿಗೆ ಗೊತ್ತಾಗದೆ ಅವನು ದಿನಕ್ಕೆ ಒಂದಾವೃತ್ತಿ “ನಮ್ಮ ಭಾವಂದಿರು ಬೀಡಿನ ಬಲ್ಲಾಳರನ್ನು ಓಲಗದಲ್ಲಿ ಕಾಣಬೇಕೆಂದಿದ್ದಾರೆ. ನೀವು ಭೇಟಿ ಮಾಡಿಸಬೇಕಷ್ಟೆ” ಎಂದು ಚಂದುಗಿಡಿಯ ಹತ್ತಿರ ಪದೇಪದೇ ಕೇಳುವನು; ಚಂದುಗಿಡಿಯು “ಈ ಹೊತ್ತು ನಾಳೆ, ಈ ಹೊತ್ತು ನಾಳೆ ” ಎಂದು ಒಂದಲ್ಲ ಒಂದು ನೆಪವನ್ನು ಹೇಳಿ, ಅವನ ಆಲೋಚನೆಯನ್ನು ಕಡಿದು ಹಾಕುವನು; ಬೈದ್ಯನು ಕೋಟಿಚೆನ್ನಯರಿಗೆ ಬಂದು ತಿಳಿಸಿ ಮುಂದೆ ನೋಡೋಣ ಎಂದು ಹೇಳುವನು; ಹೀಗೆ ಅನೇಕ ತಿಂಗಳುಗಳು ದಾಟಿದುವು.

ಇತ್ತ ಪಡುಮಲೆಯಲ್ಲಿ ಪೆರುಮಾಳ ಬಲ್ಲಾಳನ ಕಣ್ಣಿನ ಮುಂದೆ ಕೋಟಿ ಚೆನ್ನಯರು ಗದ್ದಿಗೆಯ ಮೇಲೆ ಗಡುವಿಟ್ಟು ಯಾವ ದಿನ ಬೀಡಿನಿಂದ ಕೆಳಕ್ಕೆ ಇಳಿದು ಹೋದರೊ ಆ ದಿನದಿಂದ ಬಲ್ಲಾಳನ ಮನಸ್ಸು ಒಂದಕ್ಕೊಂದಾಗಿ ಹೋಯಿತು. ಅವನು ಮಾತುಮಾತಿಗೆ “ಸತ್ತು ಹೋಗಲಿ... ಸುಟ್ಟು ಬಿಡಿ' ಎಂದು ಹೇಳುತ್ತ, ಸಿಟ್ಟನ್ನು ಕಾರುತ್ತಿದ್ದನು. ಕೋಟಿ ಚೆನ್ನಯರನ್ನು ಸಿಕ್ಕಿದ್ದಲ್ಲಿ ಹಿಡಿದು ಕೊಂದು ಹಾಕುವುದಕ್ಕೆ ಅವನ ಆಳುಗಳು ಹೋದರು, ಹೋದ ಆಳುಗಳು ಬೈದ್ಯನ ಮನೆಯನ್ನು ಸುಟ್ಟುಬಿಟ್ಟರು. ಕೋಟಿಚೆನ್ನಯರೂ, ಸಾಯಿನ ಬೈದಿತಿಯ ಮನೆಯೊಳಕ್ಕೆ. ಇರಲಿಲ್ಲ; ಅವರು ಮೊದಲೇ ಅಲ್ಲಿಂದ ಕಾಲುತೆಗೆದಿದ್ದರು, ಸಾಯಿನ