ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಕ್ಕಣೆಯ ಸೇನಬೋವ

31

ಆ ಸೇನಬೊವನು ಮುಂಜಾನೆಯ ಮುಂಬಿಸಿಲಿಗೆ ಹಾಕಿಸಿ ಸಂಜೆಯ ತಂಬಿಸಿಲಿಗೆ ತೆಗೆಯಿಸಿ, ಸರಿಗೊಳಿಸಿದ ತಾಳೆಯ ಗರಿಗಳ ಕಟ್ಟೊ೦ದನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಬಲ್ಲಾಳನಿಗೆ ಕೈಮುಗಿದು “ಬುದ್ಧಿ" ಎಂದು ನಿಂತನು. ಬಲ್ಲಾಳನು “ಗುಟ್ಟಿನ ಕೆಲಸವಿದೆ. ಒಳಗಿನ ಕೊಟಡಿಗೆ ಬಾ” ಎಂದು ಹೇಳಿ ಇಬ್ಬರೂ ಏಕಾಂತವಾದ ಒಂದು ಕೋಣೆಗೆ ಹೋದರು. ಸೇನಬೋವನು ಕೈಯಲ್ಲಿದ್ದ ಕಟ್ಟಿನಿಂದ ಒಂದು ಓಲೆಯನ್ನು ಈಚೆಗೆ ತೆಗೆದು, ಅದರ ಕಡೆ ಕುಡಿಗಳನ್ನು ಕತ್ತರಿಸಿ, ನಡುವಿನ ಬಾವನ್ನು ಸರಿಮಾಡಿ, ಎಣ್ಣೆಯನ್ನೂ ಅರಸಿನವನ್ನೂ ಪೂಸಿ, ಮೇಲೆ ಶ್ರೀಕಾರವನ್ನು ಗೀರಿ, ಬಲ್ಲಾಳನು ಹೇಳಿದ ಒಕ್ಕಣೆಯನ್ನು ಬರೆದು, ಓಲೆಯನ್ನು ಆತನ ಕೈಯಲ್ಲಿ ಕೊಟ್ಟನು, ಬಲ್ಲಾಳನು ಪತ್ರದ ಕೊನೆಯಲ್ಲಿ ಕಂಟದಿಂದ ಗೆರೆಗೀರಿ ಸೇನಭೋವನೊಡನೆ “ಇದನ್ನು ಳರಿಗೆ ಮುಟ್ಟಿಸಬೇಕು” ಎಂದು ಅಪ್ಪಣೆ ಮಾಡಿದನು. ಓಲೆಯನ್ನು ತೆಗೆದುಕೊಂಡು ಇಬ್ಬರು ಓಲೆಕಾರರು ಪಡುಮಲೆಯಿಂದ ಅದೇ ದಿನ ಹೊರಟರು.

ಇತ್ತ ಬಲ್ಲಾಳನು ಓಲೆಯನ್ನು ಬರೆಯಿಸುತ್ತಿದ್ದಾಗ, ಅತ್ತ ಚಂದುಗಿಡಿಯು ಮನೆಯ ಚಾವಡಿಯಲ್ಲಿದ್ದು ತನ್ನ ಮನಸ್ಸಿನಲ್ಲಿ ಹೀಗೆ ಚಿಂತಿಸುತ್ತಿದ್ದನು- “ಏನು ಮಾಡಿದರೂ ಕೋಟಿ ಚೆನ್ನಯರ ಹೆಸರೇ ಮೇಲೆ ಬರುತ್ತದಲ್ಲಾ! ಇವರ ಅಮಾನುಷ ಕೃತ್ಯಗಳಿಂದ ಊರಲ್ಲಿದ್ದ ಮಕ್ಕಳಿಗೆ ಮದ್ದು ಮಾಯೆ ಮಾಡಿದಂತಾಗಿದೆ, ಹೆಂಗಸರಿಗೆ ಮಂಕುಬೂದಿ ಹಾಕಿದಂತಾಗಿದೆ; ಮುದುಕರಿಗೆ ಮುದಿಭ್ರಾಂತಿ ಹಿಡಿದಂತಾಗಿದೆ. ಏನು ಮಾಡಿದರೂ, ಈ ಬಿಲ್ಲರ ಕುಟ್ಟಿಗಳ ಮಾರಾಟವನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲವಲ್ಲ! ಇವರ ಸುದ್ದಿಯನ್ನು ನಾನು ಕಟ್ಟಿಕಟ್ಟಿ ಬಿಗಿದಷ್ಟಕ್ಕೆ ಅದು ಜೋರು ಜೋರು ಬಾಯಿ ಮಾಡುತ್ತದಲ್ಲಾ! ಎಲ್ಲಿ ಅವರು ನಮ್ಮ ಕೇಮರ ಬಲ್ಲಾಳನ ಎದುರಿಗೆ ಬಿದ್ದು ಅವನನ್ನು ಮರುಳು ಮಾಡಿ, ನನಗೆ ಅಪಾಯವನ್ನು ತಂದೊಡ್ಡುವರೋ ಗೊತ್ತಾಗುವುದಿಲ್ಲ! ಸಾಲದ್ದಕ್ಕೆ ನಮ್ಮ ಬಲ್ಲಾಳನಿಗೆ ಹಿತ್ತಾಳಿಯ ಕಿವಿ; ಕೆಸರುಗೂಟದ ಮನಸ್ಸು; ಬಂಗಿ ಮುಕ್ಕಿ ಹೊತ್ತಿಗೊಂದು ಬುದ್ಧಿ. ಯಾವ ಉಪಾಯವೂ ಹೊಳೆಯುವುದಿಲ್ಲವಲ್ಲಾ!" ಹೀಗೆ ಚಂದುಗಿಡಿಯು ಯೋಚಿಸುತಿದ್ದಾಗ ಬಲ್ಲಾಳನ ಜನ ಬಂದು “ಬುದ್ದಿ, ಅಟ್ಟ ಅನ್ನದಲ್ಲಿ ಉಟ್ಟ