ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

34

ಕೋಟಿ ಚೆನ್ನಯ

ಚಿವಟಿ ನೆತ್ತಿಗೆ ಇಟ್ಟು ಸುಣ್ಣ ಸವರುತಿದ್ದಾಗ, ಚೆಂದುಗಿಡಿಯು ಕಂಚಿನ ಹಡಪವನ್ನು ಅವನ ಪಕ್ಕದಲ್ಲಿ ಮಡಗಿ, “ನೀವು ಬಂದ ಕಾರ್ಯ ಗೊತ್ತಾಯಿತು” ಎಂದು ಪ್ರಾರಂಭಿಸಿದನು.

ಚೆನ್ನಯ-“ಗೊತ್ತಾಗುವುದಕ್ಕೆ ಆರು ತಿಂಗಳು ಹಿಡಿದರೆ, ಪೂರಯಿಸುವುದಕ್ಕೆ ಎಷ್ಟು ಕಾಲ ಬೇಕಾಗುವದೊ?

ಕೋಟಿ--- "ಅಯ್ಯಾ, ನಾವು ಬಲ್ಲಾಳರ ಭೇಟಿಯನ್ನು ನಿರೀಕ್ಷಿಸಿ ಬಹಳ ಕಾಲದಿಂದ ಹೆರವರ ಮನೆಯಲ್ಲಿ ಇದ್ದೇವೆ, ಒಮ್ಮೆ ಅವರ ದರ್ಶನವಾಯಿತೆಂದರೆ, ನಾವು ಇದುವರೆಗೆ ಕಾದುಕೊಂಡಿದ್ದ ಬೇಸರು ಹೋಗಿಬಿಡುತ್ತದೆ. ಬಲ್ಲಾಳರನ್ನು ನಿಮ್ಮ ಮೂಲಕ ಕಾಣಬೇಕೆಂದು ನಮ್ಮ ಭಾವನ ಅಭಿಪ್ರಾಯವಿದೆ.”

ಪಯ್ಯಬೈದ್ಯ – “ಏನು ಹೇಳುತ್ತಿ, ಭಾವಾ? ನಮಗೆ ಬೇಕಾದಾಗ ಬಲ್ಲಾಳರು ನೋಡಸಿಗಲಿಕ್ಕೆ ಅವರೇನು ನಾವು ಕಟ್ಟುವ ತಾಳೆಯ ಮರವೊ? ಆಳ ನೋಡಿ ತೊರೆಯನ್ನು ದಾಟಬೇಕು, ವೇಳೆ ನೋಡಿ ದೊರೆಯನ್ನು ಕಾಣ ಬೇಕು, ಅರಸನ ಚಿತ್ರ, ಬೀಡಿನ ಸಂಗತಿ, ಅಲ್ಲವೆ ಚೆಂದುಗಿಡಿ?”

ಚೆನ್ನಯ-- “ಇನಾದರೂ ಆ ಕಾಣುವುದಕ್ಕೆ ಇದೆಯೋ ಇಲ್ಲವೊ?

ಚೆಂದುಗಿಡಿ-“ಅದಕ್ಕೇನು ಅಡ್ಡಿ ?”

ಚೆನ್ನಯ- “ ಹಾಗಾದರೆ, ಯಾವಾಗ?"

ಚೆಂದುಗಿಡಿ “ನಾಳೆ?"

ಪಯ್ಯಬೈದ್ಯ– “ನಾಳೆ ಸಂಕ್ರಾಂತಿ, ನಾಳೆ ಬೇಡ --ನಾಡದು ಆಗಬಹುದು"

ಚೆಂದುಗಿಡಿ-"ನಾಡದು ಸೋಮವಾರ--"

ಚೆನ್ನಯ- “ಎಷ್ಟು ಹೊತ್ತಿಗೆ?”

ಚೆಂದುಗಿಡಿ “ಹಟ್ಟಿಯಿಂದ ಹೋದ ದನ ಹಟ್ಟಿಯೊಳಗೆ ಬರುವುದರೊಳಗೆ,

ಕೋಟಿ-ಆ ದಿನ ನಿಮ್ಮ ಕೈಗೆ ಬಿಡುವು ಇದೆಯಷ್ಟೆ!”