ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಟ್ಟಾ

37

ಹಾಕಿದ ಶಬ್ದವು ಕೇಳಿಸಿತು. ಆಗ ಆತನು ತಮ್ಮಾ, ಹಾಲೆಂದು ಬಾಯಿಗೆ ಮುಟ್ಟಿಸುವಾಗ ಅದು ಕಳ್ಳಿಯ ಹಾಲಾಯಿತಲ್ಲಾ! . ಹಾಸಿಗೆಯೆಂದು ಒರಗುವಷ್ಟರಲ್ಲಿ ಅದು ಮುಳ್ಳಿನ ಹಾಸಾಯಿತಲ್ಲಾ! ಇಂಬು ಎಂದು ನಂಬಿದ್ದು ಅಂಬು ಆಯಿತಲ್ಲಾ! ಇವನು ಬಲ್ಲಾಳನಲ್ಲ ನಿಜವಾಗಿಯೂ ಬಲ್ಲಾಳನಲ್ಲ” ಎಂದು ಉದ್ರೇಕಗೊಂಡನು.

ಚೆನ್ನಯನು – "ಅಣ್ಣಾ ! ನೀನು ಹೇಳಿದ್ದು ಸರಿಯೆ, ಬಲ್ಲಾಳನಿಗೆ ಗಿಳಿ ಮೂಗು, ಕುಡಿತೆ ಕಿವಿ, ಜಳ್ಳು ಹೊಟ್ಟೆ, ಅಂಡೆ ಕಾಲು ಎಂದು ಹೇಳುವು ದನ್ನು ಕೇಳಿದ್ದೇನೆ. ಇವನ ಮೈಕಟ್ಟು, ಗರಡಿಯಲ್ಲಿ ಸಾಧಕ ಮಾಡಿದ ತೆರದಲ್ಲಿದೆ. ಇವನು ಬಲ್ಲಾಳನಿಗೆ ಹುಟ್ಟಿದ ....."

ಅಷ್ಟರಲ್ಲಿ ಗದ್ದಿಗೆಯ ಮೇಲೆ ಇದ್ದವನು ಚಿರನೆ ಚೀರಿ, ಕತ್ತಿಯನ್ನು ಜಳಪಿಸುತ್ತ, ಕೆಳಕ್ಕೆ ಇಳಿದು ಮುಂದೆ ಬರುತ್ತಿದ್ದನು.

ಚೆನ್ನಯನ ಕಣ್ಣು ಅರಳಿತು ಹಲ್ಲುಗಳು ಒಂದಕ್ಕೊಂದು ಅಂಟಿಕೊಂಡುವು, ತೆರೆದ ಸೊಳ್ಳೆಯಿಂದ ಬಿಸಿ ಗಾಳಿಯು ಹೊರಟಿತು, ಮೈಕೂದಲು ಜುಮ್ಮೆಂದು ಎದ್ದು ನಿಂತಿತು.

ಅದನ್ನು ಕಂಡು ಕೋಟಿಯು ಅವನ ಕೈ ಹಿಡಿದು, “ಚೆನ್ನಯ, ತಡಿ, ದುಡುಕಬೇಡ” ಎಂದು ಹೇಳಿ, ಕತ್ತಿ ಹಿರಿದು ತನ್ನ ಮುಂದೆ ನಿಂತವನನ್ನು ಗುರುತಿಸಿ – ತಮ್ಮಾ, ಇವನು ಬಲ್ಲಾಳನಲ್ಲ, ಬಲ್ಲಾಳನ ವೇಷದಿಂದ ಕುಳಿ ತಿದ್ದ ಅವನ ಬೀಡಿನ ಕೊಟ್ಟಾರಿ” ಎಂದು ಹೇಳಿ ಎದ್ದು ನಿಂತನು.

ಆದರೆ ಗದ್ದಿಗೆಯಿಂದ ಇಳಿದಿದ್ದ ಕೊಟ್ಟಾರಿಯು ಕೋಟಿಚೆನ್ನಯರನ್ನು ಎದುರಿಸದೆ, ಬಡಗು ಗೋಡೆಯಲ್ಲಿದ್ದ ಬಾಗಿಲನ್ನು ಸರ್ರನೆ ತೆರೆದು, ಅದನ್ನು ದಾಟಿ, ತನ್ನ ಬೆನ್ನ ಹಿಂದೆ ಅದನ್ನು ಕೀಲಿಸಿ ಹೊರಕ್ಕೆ ಹೋದನು. ಕೂಡಲೆ ಡೋಲು ಬಡೆದಂತೆ ಬಡ ಬಡ ಬಡ ಶಬ್ದವಾಯಿತು.

"ಪಡುಮಲೆಯಿಂದ ಬಂದವರನ್ನು ಸಾಂಗವಾಗಿ ಕಂಡದ್ದಾಯಿತು. ಇನ್ನು ಇವರು ನಮ್ಮ ಬೀಡಿನಲ್ಲಿ ಯಾರ ತೊಂದರೆಯು ಇಲ್ಲದೆ ಬೇಕಾದಷ್ಟು ಕಾಲ ಸುಖವಾಗಿ ಇರಬಹುದು” ಎಂಬ ಮಾತುಗಳು ಕೇಳ ಬಂದುವು; ಸ್ವರವು ಚೆಂದುಗಿಡಿಯ ಸ್ವರವಾಗಿತ್ತು.