ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ಈ ಸಂಸಾರದ ಕಷ್ಟಸಂಕಷ್ಟಗಳೂ ಕಾಯಿಲೆ ಕಸಾರಿಕೆ ಗಳೂ ದೆವ್ವ ದೇವತೆಗಳಿಂದ ಪ್ರಾಪ್ತವಾಗುತ್ತವೆಂದು ನಂಬಿ, ಹಣ್ಣು ಕಾಯಿಯ ಹರಕೆಯಿಂದಾಗಲಿ ರಕ್ತಮಾ ಸದ ಬಲಿಯಿಂದಾಗಲಿ ಅವುಗಳ ಉಗ್ರತೆಯನ್ನು ಶಮನಿಸಲು ಪ್ರಯತ್ನ ಪಟ್ಟು, ಬಹು ಕಾಲದಿಂದ ಅವನ್ನು ನಂಬಿಕೊಂಡು ಬಂದಿರುವ ಸೀಮೆಗಳಲ್ಲಿ ತುಳುನಾಡು ಎಂದಾಗಿದೆ. ಇಲ್ಲಿ ಗ್ರಾಮಕ್ಕೆ ಬಂದರಂತೆ ಒಂದು 'ಭೂತ' ಇದೆ; ಆ ಭೂತದ ಸಲುವಾಗಿ ವರ್ಷಕ್ಕೊಂದು ಜಾತ್ರೆ ಇದೆ; ಆ ಸಮಯದಲ್ಲಿ ಆ ಭೂತದ ವೇಷವನ್ನು ಧರಿಸಿಕೊಂಡು, ಆ ವೇಷದಿಂದ ಕುಣಿಯತಕ್ಕ ಪ್ರತ್ಯೇಕ ಜಾತಿಯವರೂ ಇದ್ದಾರೆ. ಭೂತವನ್ನು ಕಟ್ಟಿ ಕುಣಿಯುವ ಮೊದಲು ಆ ವೇಷಗಾರನು ಎರಡು ಮೂರು ತಾಸುಗಳ ತನಕ ಒಂದೇ ತೆರನಾಗಿ ಸ್ವರವೆತ್ತಿ ತುಳು ಹಾಡನ್ನು ಹೇಳುವರು. ಇದಕ್ಕೆ 'ಭೂತದ ಸಂಧಿ' ಎಂಬ ಹೆಸರೇ ತುಳು ನಾಡಿನಲ್ಲಿ ವಾಡಿಕೆಯಾಗಿದೆ. ಆಯಾ ಭೂತದ ವೃತ್ತಾಂತವು ಆಯಾ ಭೂತದ ಸಂಧಿಯಲ್ಲಿ ಬಹು ಮಟ್ಟಿಗೆ ಅಡಕವಾಗಿದೆ. 'ಕೋಟಿ ಚೆನ್ನಯ' ಎಂಬ ಭೂತಗಳ ಸಂಧಿಯನ್ನು ಅವಲಂಬಿಸಿ ಬರೆದ ಈ ಪುಸ್ತಕದಲ್ಲಿನ ಕಥೆಯನ್ನು ಆ ಭೂತ ಕಟ್ಟುವ ತುಳುವರ ಬಾಯಿಯಿಂದ ಈಗಲೂ ಕೇಳಬಹುದು.

ನಾನು ಈ ಕಥೆಯನ್ನು ಎನೆಕಲ್ಲು ಉಪಾಧ್ಯಾಯರಾದ (ಕೈ. ವಾ.) ರಾ. ಉಕ್ಕಣ್ಣ ಗೌಡರ ಪ್ರಯತ್ನದಿಂದ ೧೯೦೪ರಲ್ಲಿ