ಪುಟ:ಕೋಹಿನೂರು.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ಕೊಹಿನುರು འའའའའ་ངན་་འ་་་་འནང་ནན་ཏན་ ་འགཉའ་ ವಿಲಾಸಕುಮಾರಿಯು ಎಚ್ಚೆತ್ತು ಕೊಂಡು ತಂದೆಯ ಮುಖದಮೇಲಿನ ಎಣ್ಣೆಯನ್ನೊ ರಸಿ, “ ಹಾಗಾದರೆ ಹೊರಡಕೂಡದೇಕೆ ? ಅಪ್ಪಾ ! ಈ ದಿನವೇ ಹೋಗಿ ರಾಣನನ್ನು ನೋಡು ೨೨ ಎಂದಳು. ಈ ಸಮಯದಲ್ಲಿ ಪರಿಚಾರಿಕೆಯೊಬ್ಬಳು ಬಂದು * ರಾಜನಹಿತಿ ಕಮಲಾವತಿದೇವಿಯು ದೇವಯಾನೆಯನ್ನು ನೋಡಬೇಕೆಂದು ದೂತಿಯೊಡನೆ ಮೇನೆಯನ್ನು ಕಳುಹಿಸಿದ್ದಾಳೆ ೨೨ ಎಂದು ಕೇಳಿದಳು. ವಿಲಾಸಕುಮರಿಯು ಆಶ್ಚರ್ಯಪಟ್ಟು ತಂದೆಯನ್ನು ಕುರಿತು, ರಾಜ ಮಹಿಷಿಯು ನನ್ನನ್ನು ನೋಡಬೇಕೆಂದುದೇಕೆ ? ಎಂದು ಕೇಳಿದಳು. ವೃದ್ದ ಸೇನಾಪತಿಯು ಹಾಸ್ಯ ಮಾಡುತ್ತ, “ ಅಮರಸಿಂಹನಿಗೆ ನಿನ್ನನ್ನು ಕೊಟ್ಟು ಮದುವೆ ಮಾಡುತ್ತಾರೆಂದು ತೋರುತ್ತದೆ ! ೨ ಎಂದು ಹೇಳಿದನು, -- ಮೂರನೆಯ ಪರಿಚ್ಛೇದ. ದೂತಿಯು ಮೇನೆಯನ್ನು ಸಂಗಡ ತೆಗೆಯಿಸಿಕೊಂಡು ಕಮಲಾದೇವಿಯ ಮಹಲಿಗೆ ಹೋದಳು. ಕಮಲಾದೇವಿಯು ಓಡಿಬಂದು ವಿಲಾಸಕುಮಾರಿ ಯನ್ನು ಕಂಕುಳಲ್ಲೆತ್ತಿಕೊಂಡು ಪುನಃ ಪುನಃ ಅವಳ ಮುಖವನ್ನು ಮುದ್ದಿಟ್ಟು, “ ನೀನು ಇಲ್ಲೇಕೆ ಬಂದೆ ? ಮಗು ! ೨೨ ಎಂದು ಕೇಳಿದಳು. “ ತಾವು ನನ್ನನ್ನು ಕರೆಯಿಸಿದರಂತೆ. 99 (“ ನೀನು ನನ್ನ ನ್ನು ಬಲ್ಲೆಯಾ ? ನಾನಾರು, ಹೇಳು, ನೋಡೋಣ ?99 ವಿಲಾಸಕುಮಾರಿಯು ಕಂಕುಳಿಂದಿಳಿದು, ಮೆಲ್ಲನೆ • ತಾವು ರಾಣಿ » ಎಂದಳು. ಕಮಲಾದೇವಿಯು ಎಲಾಸೆ ಯನ್ನು ಪುನಃ ಆಲಿಂಗನ ಮಾಡಿಕೊಂಡು ಮುದ್ದಿಟ್ಟು, “ ನಿನ್ನ ಮಾತು ಕಿವಿಗೆಷ್ಟೊ ಇಂಸತ್ತೆ ! ನಾನು ರಾಣಿಯೆಂದು ಹೇಗೆ ಗೊತ್ತಾಯಿತೆ ? ನೀನೂ ರಾಣಿಯಾಗುವಿಯಾ ? ಬೇಗನೆ ಹೇಳು, ರಾಣಿ ಯಾಗುವುದಕ್ಕೆ ನಿನಗೆ ಇಷ್ಟವೆ ? ೨೨ ಎಂದಳು. ಹುಡುಗಿ-(ನಕ್ಕು)- ಇಷ್ಟ ಪಟ್ಟರೆ ರಾಣಿಯಾಗಿ ಹೋಗುವನೇ ?