ಪುಟ:ಕೋಹಿನೂರು.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಕೊಹಿನುರು ಹೀಗೆ ಹೇಳಿಕೊಂಡು ಕಣ್ಣಿಂದ ಸಂತತ ಧಾರೆಯನ್ನು ಸುರಿಸುತ್ತ ರಾಣನ ಬಳಿಗೆ ಹೊರಟುಹೋದಳು. ಅಲ್ಲಿ ಅವಳಿಗೂ ರಾಣಾ ಜಯಸಿಂಹನಿಗೂ ನಡೆದ ಮಾತು ಕಥೆಗಳು ನಮಗೆ ಕೇಳಿಸಲಿಲ್ಲ, ಅದನ್ನೆಲ್ಲಾ ನಾವು ಅರಿಯೆವು, ಆದರೆ ಮಾರನೆಯ ದಿನವೇ ಪ್ರಭಾತದಲ್ಲಿ ರಾಣಾ ಜಯಸಿಂಹನು ರಾಜ್ಯಭಾರವನ್ನು ಮಂತ್ರಿಗಳಿಗೆ ವಹಿಸಿ ಕಮಲಾದೇವಿಯೊಡನೆ ಬಯಸಮುದ್ರದಲ್ಲಿ ಏಕಾಂತವಾದ ಪ್ರಮೋದಭವನಕ್ಕೆ ಹೊರಟುಹೋದನು. ಆ ರ ನೆ ಯ ಪ ರಿ ಚೇ ದ. ಹದಿನಾರಾಣೆ ರಾಜಪೂತ ಸೇನಾಪತಿ ವಿಕ್ರಮಸಿಂಹನ ಮಗಳನ್ನು ಯುವರಾಚಾ ಅಮರಸಿಂಹನಿಗೆ ಕೊಟ್ಟು ನಡೆದ ಮದುವೆಯು ಸಾಂಗವಾಗದೆ ಅರ್ಧದಲ್ಲಿ ನಿಂತುಹೋಯಿತೆಂಬ ಸಮಾಚಾರವು ದೇಶದಲ್ಲೆಲ್ಲಾ ಹರಡಿ ಕೊಂಡಿತು, ಅದರೊಂದಿಗೆ ವಿಲಾಸಕುಮಾರಿಯ ಸಮನಿಲ್ಲದ ರೂಪ ಲಾವಣ್ಯಗಳು ಸಹಸ್ರಾರುಮಂದಿ ಜನರ ಬಾಯಿಯಲ್ಲಿ ಬಂದು ದೇಶದೇಶದಲ್ಲಿ ಖ್ಯಾತಿಗೊಂ ಡವು, ಯವನಸೇನಾಪತಿ ಅಫಜುಲಖಾನನು ಈ ಜನವಾಹಿನಿಯ ನಿಜತ್ವವನ್ನು ತಿಳಿದುಕೊಳ್ಳಲು ವಿಕ್ರಮಸಿಂಹನನ್ನು ನೋಡಬೇಕೆಂಬ ನೆವದಿಂದ ಒಂದು ದಿನ ಕೌಶಲದಿಂದ ಅಚಲಗಡಕ್ಕೆ ಬಂದು ವಿಲಾಸಕುಮಾರಿಯನ್ನು ನೋಡಿದನು. ವಿಲಾಸಕುಮಾರಿಗೆ ಹದಿನಾಲ್ಕು ವರ್ಷ, ಅನಾಘಾತವಾಗಿದ್ದ ಮೊಗ್ಗೆಯೆನ್ನಾ ಞಾಣಮಾಡಲೆಳಸಲು ದಾನವನ ಹೃದಯವು ಕಳವಳಪಡುತಿದ್ದಿತು. ಕೆಲವು ದಿನಗಳ ಬಳಿಕ ಒಂದು ರಾತ್ರಿ ವಿಲಾಸಕುಮಾರಿಯು ತಂದೆಯ ಕೊಟಡಿಯಲ್ಲಿ ಮಲಗಿದ್ದಳು, ಇದ್ದಕ್ಕಿದ್ದಹಾಗೆ ಬಹಳ ಕೋಲಾಹಲ ಶಬ್ದವು ಅವಳಿಗೆ ಕೇಳಿಸಿತು. ಹುಡುಗಿಯು ಎದ್ದು ನೋಡಲಾಗಿ ನಾಲ್ಕು ಕಡೆಯ ಮುಸಲಮಾನರು ಶಸ್ತ್ರಸಾಣಿಗಳಾಗಿ ಸುತ್ತಿಕೊಂಡಿದ್ದರು. ತಂದೆಯು ಮಲ ಗಿದ್ದ ಹಾಸಿಗೆಯ ಬಳಿ ಓಡಿಹೋಗಿ ನೋಡಿದಳು, ಮುಸಲಮಾನನೊಬ್ಬನು ರಕ್ತ ತೊಟಕಿಡುತಿದ್ದ ಕತ್ತಿಯನ್ನು ಹಿಡಿದುಕೊಂಡು ನಿಂತಿದ್ದನು. ಪಾಪಿಷ್ಠ ಸೇನಾಪತಿ ಅಫಜುಲನು ಮಲಗಿದ್ದ ವೀರನೆದೆಯನ್ನು ಕತ್ತಿಯಿಂದ ಇರಿದಿದ್ದನು.