ಪುಟ:ಕೋಹಿನೂರು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏ ಳ ನೆ ಯ ಸ ರಿ ಚ್ಛ ದ. ದಿನಗಳಮೇಲೆ ದಿನಗಳು ಕಳೆದು ಹೋದುವು. ವರ್ಷದಮೇಲೆ ವರ್ಷ ಕಳೆದುಹೋಯಿತು, ರಾಣಾ ಬಯಸಿಂಹನು ಮಹಿಷಿ ಕಮಲಾದೇವಿಯೊಡನೆ ಜಯಸಮುದ್ರದ ಪ್ರಮೋದಭವನದಲ್ಲೇ ಇರುತ್ತಿದ್ದನು. ಸ್ವಲ್ಪ ಕಾಲದಲ್ಲೇ ರಾಠೋರ ಸೇನಾಪತಿ ದುರ್ಗಾದಾಸನ ಛೇರಿಯ ನಾದದಿಂದ ಸಮಗ್ರ ರಾಜಾ ಸ್ಥಾನವೆಲ್ಲಾ ಶಲೆಗೊಂಡಿತು, ರಾಜಪೂತ ರಾಜರೆಲ್ಲರೂ ಒಬ್ಬೊಬ್ಬರಾಗಿ ಆರಾವಳಿ ಬೆಟ್ಟವನ್ನು ಹತ್ತಿ ಬಂದು ದುರ್ಗಾದಾಸನನ್ನು ಆಲಿಂಗನ ಮಾಡಿ ಕೊಂಡರು, ಸಮಗ್ರ ಭಾರತ ವರ್ಷಕ್ಕೆ ಅಧಿಪತಿಯಾಗಿದ್ದ ರಾಜಕುಲ ಶ್ರೇಷ್ಠ ನಾಗಿದ್ದ ಮಿವಾರದ ರಾಣಾನು ಮಾತ್ರ ಮಾತೃಮಂದಿರಕ್ಕೆ ಬಂದು ಮಹಾ ವ್ರತಕ್ಕೆ ಸೇರಲಿಲ್ಲ. ಸೇರಿದ್ದ ರಾಜರೆಲ್ಲರೂ ಗೋಳಿಟ್ಟು ರಾಣಾನ ಬಳಿಗೆ ಬಿನ್ನಹ ವನ್ನು ಕಳುಹಿದರು. ಆದರೆ ಅವರ ದುಃಖಕರವಾದ ರೋದನವು ಆ ದುರ್ದಿನ ದಲ್ಲಿ ರಾಣಾನ ಮನಸ್ಸಿಗೆ ತಟ್ಟಲಿಲ್ಲ. ಸೇರಿದ್ದ ರಾಜಪೂತ ವೀರರು ಅದಕ್ಕೆ ಕಾರಣವನ್ನು ತಿಳಿಯಲು ರಾಜಮಹಿಷಿ ಕರ್ಣಾ ವತಿಯಿಂದ ತಿಳಿದುಕೊಳ್ಳಲು ಜಯಪುರದ ಅರಮನೆಗೆ ದೂತನನ್ನು ಕಳುಹಿಸಿಕೊಟ್ಟರು. ದೂತನಿಂದ ಸಮಾ ಚಾರವನ್ನು ಕೇಳಿ ಕ್ಷತ್ರಿಯ ರಾಣಿಯಾದ ಕರ್ಣಾವತಿಯ ಅಂತಃಕರಣವು ಕರಗಿತು. ದೂತನು ಹೊರಟುಹೋದ ಬಳಿಕ ಕರ್ಣಾವತಿಯು ತನ್ನ ಮಗನನ್ನು ಕರೆದು, ಕಣ್ಣೀರು ತುಂಬಿದವಳಾಗಿ, " ಹಾ, ವತ್ಥ ಅಮರ ! ಬಪ್ಪರಾಯ ವಂಶಕ್ಕೆ ಈ ದಿನ ಬಂದಿರುವ ಕಳಂಕವನ್ನು ಹೋಗಲಾಡಿಸುವರಾರು ? ೨ ಎಂದು ಹೇಳಿದಳು. ಅಮರಸಿಂಹ-ತಾಯೆ ! ಅಪ್ಪಣೆಯಾದರೆ ದಾಸನು ಈ ಪುಣ್ಯಪ್ರದ ವಾದ ಯುದ್ಧದಲ್ಲಿ ಪ್ರಾಣವನ್ನು ಕೊಟ್ಟು ಮಿವಾರದ ಗೌರವವನ್ನು ಳಿಸುವೆನು, « ವತ್ಥ ! ನಿನ್ನ ನ್ನು ಒಬ್ಬೊಂಟಿಗನನ್ನಾಗಿ ಅಷ್ಟು ದೂರ ಹೇಗೆ ಕಳುಹಿಸಿ ಕೊಡಲಿ ? 9೨ (F ಒಬ್ಬನನ್ನೇ ಏತಕ್ಕೆ, ತಾಯಿ ! ಸೈನ್ಯವೆಲ್ಲಾ ಬಹಳ ದಿನಗಳಿಂದ ಯವನರ ರಕ್ತಪಾನದಲ್ಲಿ ಆತರವುಳ್ಳದುದಾಗಿದೆ. ಇಂಗಿತ ಮಾತ್ರದಲ್ಲಿ ಈಗ ಏರ್ಪಟ್ಟಿರುವ ಮಹಾಪುಣ್ಯಮಯವಾದ ಯುದ್ಧ ಸಮುದ್ರದಲ್ಲಿ ಧುಮುಕಿ