ಪುಟ:ಕೋಹಿನೂರು.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ ೧೮೬ ಅತುಳ ಶೌರ್ಯ ವೀರ್ಯ ಪರಾಕ್ರಮಗಳನ್ನು ತೋರಿಸಿ ಪ್ರಪಂಚವನ್ನೆಲ್ಲಾ ಆಶ್ಚರ್ಯಗೊಳಿಸುವುದು, 99 ರಾಣಿಯು ಗರ್ವದಿಂದಲೂ ಕಳವಳದಿಂದಲೂ ನಿಟ್ಟುಸಿರನ್ನು ಬಿಟ್ಟು, CC ವತ್ವ ! ರಾಜರ ಅಪ್ಪಣೆ ಇಲ್ಲದೆ ಸೈನ್ಯವನ್ನು ಯುದ್ಧಕ್ಕೆ ತೆಗೆದುಕೊಂಡು ಹೋದರೆ ಅವರಿಗೂ ರಾಣಿ ಕಮಲಾದೇವಿಗೂ ಇರುವ ಕೋಪವು ಇಮ್ಮಡಿ ಯಾಗಿ ಹೆಚ್ಚು ವುದು ! !” ಎಂದಳು. ಮಗನು ಕೈಮುಗಿದುಕೊಂಡು, (• ತಾಯಿ ! ಹಾಗಾದರೆ ಅಪ್ಪಣೆಯಾ ಗಲಿ; ನಾನೊಬ್ಬನೇ ಹೋಗುವೆನು ೨೨ ಎಂದನು. ರಾಜ್ಜಿಯು ಕಣ್ಣೀರು ತುಂಬಿದವಳಾಗಿ, “ ದೇವರೆ ! ಮಿವಾರದ ಮಹಾರಾಣನ ಮಗನು ಇಂದು ಯವನರ ಯುದ್ಧಕ್ಕೆ ಏಕಾಂಗಿಯಾಗಿ ಹೋಗ ಬೇಕಾಯಿತೆ ! 99 ಎಂದೆಂದುಕೊಂಡು, " ಹಾಗಾದರೆ, ವತ್ಥ ! ಸಾವಕಾಶಮಾಡಿ ಪ್ರಯೋಜನವಿಲ್ಲ. ಈ ರಾಜಕುಮಾರನ ಉಡುಪನ್ನು ತೆಗೆದುಹಾಕಿ, ನೆಲವನ್ನು ಳುವ ದೀನನಾದ ಕೃಷಿಕನ ಉಡುಪನ್ನು ಡು, ೨” ಎಂದಳು. ರಾಜಪೂತ ಜನ್ಮದವಳಾದ ತಾಯಿಯು ಸೆರಗಿನಿಂದ ಕಣ್ಮರೆಸಿಕೊಂಡು ತನ್ನ ಕೈಯಿಂದ ಮಗನಿಗೆ ಕೃಷಿ ಕೆನ ಉಡುಪನ್ನು ಡಿಸಿ, “ ಹೊರಡು, ವತ್ಸ ! ಆಶೀರ್ವಾದ ಮಾಡುತ್ತೇನೆ. ಈ ಸುರಾಸುರ ಯುದ್ದದಲ್ಲಿ ಕ್ಷತ್ರಿಯ ಶೌರ್ಯ ದಿಂದ ಭೂಮಿಯನ್ನು ಬೆಳಗು ಮಾಡು, ಆ ಅನಾಥ ದೇವದೇವನು ನಿನ್ನನ್ನು ಪ್ರಾಣದಿಂದ ರಕ್ಷಿಸಿದರೆ ಒಂದು ವರ್ಷದ ಬಳಿಕ ಪುನಃ ಹಿಂದಿರುಗಿ ಬಂದು ನನ್ನನ್ನು ನೋಡು ೨೨ ಎಂದು ಹೇಳಿದಳು,

  • ಕೃಷಿಕನ ವೇಷಧಾರಿಯಾದ ರಾಜಾಧಿರಾಜಕುಮಾರ ಅಮರಸಿಂಹನು ಜನನಿಯ ಚರಣಗಳಿಗೆ ಅಡ್ಡ ಬಿದ್ದು ಅವನ ಪಾದ ಧೂಳಿಯನ್ನು ಶಿರದಲ್ಲಿ ಧರಿಸಿ ಒಬ್ಬೊಂಟಿಗನಾಗಿ ಒಂದು ಕುದುರೆಯನ್ನೂ ಒಂದು ಕತ್ತಿಯನ್ನೂ ಮಾತ್ರ ತೆಗೆದುಕೊಂಡು ರಾಜಪ್ರಾಸಾದದಿಂದ ಹೊರಟನು

ಹಾ ! ಈಗ ಆ ದಿನವು ಎಲ್ಲಿ ಹೋಯಿತು ! ಈಗ ಆ ಕಾಲದ ನಿಜ ವಾದ ಚರಿತ್ರೆಯನ್ನು ಉಪನ್ಯಾಸಗಳಲ್ಲಿ ಬರೆದರೂ ಅಸಂಭವವೆಂದೂ ಹಾಸ್ಯ ಜನಕವಾದುದೆಂದೂ ತೋರುವಹಾಗಾಯಿತು ! ಹಾ ! ವಿಧಿಯೆ ! ಭಾರತ ಭೂಮಿಯನ್ನು ಈ ಸ್ಥಿತಿಗೆ ತರಬಹುದೆ ! •ಳಷ್ಥಿಯ