ಪುಟ:ಕೋಹಿನೂರು.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಹಿನುರು ಸಪ್ತಮತಾನದಲ್ಲಿ ಮಾತನಾಡಿಸುತಿದ್ದಿತು, ರಾಜಸಮುದ್ರದ ತರಂಗನಾಲೆಗಳು ಬಿಳಿದಾದ ಶಿಲೆಯ ಸೋಪಾನಾವಳಿಯನ್ನು ತೊಳೆಯುತ್ತ ಪ್ರೇಮಕಲ್ಲೋಲದಲ್ಲಿ ಪುಳಕಿತ ಹಿಲದಿಂದ ಕುಣಿದಾಡುತ್ತಿದ್ದುವು. ಮೃದುವಾದ ಈಗಾಳಿಯು ಆ ಅಲೆಗಳನ್ನಾ ಲಿಂಗನವಾಡಿ, ಬಿಸಿಲಿಂದ ತಪ್ತವಾಗಿ ಚಂಚಲವಾಗಿದ್ದ ದೇಹ ವನ್ನು ಶೀತಲವಾಡಿಕೊಂಡು ಯಾಮಿನಿಯನ್ನು ಸಂಗಡ ಕರೆತರುವುದಕ್ಕೆ ಓಡಿ ಹೋಗುತ್ತಿದ್ದಿತು, ದೂರ ಆಕಾಶಪ್ರಾಂತದಲ್ಲಿ ಶುಕ್ಲಪಕ್ಷದ ಯಾಮಿನಿಯ ನೀಲವರ್ಣದ ಸೀರೆಯ ಸೆರಗಿನಲ್ಲಿ ಒಂದೆರಡು ವಜ್ರದ ಕಿಡಿಗಳು ಕಾಣಿಸಿಕೊಳ್ಳು ತಿದ್ದುವು. ಚಂದ್ರನು ನೀಲಾಕಾಶದೊಳಗಿನಿಂದ ಮುಖವನ್ನು ಹೊರಗೆ ತೋರಿ ಸುತ್ತ ಆಶೆಯಿಂದಲೂ ನಿರಾಶೆಯಿಂದಲೂ ಭಯದಿಂದಲೂ ಭರವಸೆಯಿಂದಲೂ ನೋಡುತ್ತಿದ್ದನು. ಆ ಹುಡುಗನು ನಾಲ್ಕು ಕಡೆಯೂ ನೋಡಿ, ಪುನಃ ಚಕಿತ ಹರಿಣಿಯ ನಯನ ಗಳ ಹಾಗಿದ್ದ ಹುಡುಗಿಯ ಚಂಚಲವಾದ ಕಣ್ಣುಗಳನ್ನು ನೋಡುತ್ತ, “ ನಿನಗೆ ಸಲುವಾಗಿ ಹೂವನ್ನು ತರುವುದಕ್ಕೆ ಹೋಗುವಾಗ ಈ ಬಂಡೆಯಮೇಲೆ ಇರುವ ಮುಳ್ಳುಗಳೆಲ್ಲಾ ಮೈಗೆ ಚುಚ್ಚಿ ಘಾಯವಾದರೂ ನಿನ್ನ ಮೇಲೆ ಕೋಪವಾಡ ಲಾರೆನು ೨೨ ಎಂದು ಹೇಳಿದನು. ಆ ಹುಡುಗನು ಕಂಟಕಮಯವಾಗಿದ್ದ ಬಂಡೆಯಮೇಲೆ ಹಾರಿ ಹತ್ತಿದನು. ಈ ಸಮಯದಲ್ಲಿ ಹುಡುಗಿಯ ಕೈಯಲ್ಲಿ ದೊಂದು ಹಕ್ಕಿಯು ಹಾರಿಹೋ ಯಿತು. ಹುಡುಗನು ಮರವನ್ನು ಹತ್ತಿ ಹೂವನ್ನು ಕಿತ್ತುಕೊಂಡು ಕೆಳಗಿಳಿದು ಬಂದು, “ ಇದೇನು ! ನನ್ನ ಸಾರಿಕೆಯು ಎಲ್ಲಿಗೆ ಹಾರಿಹೋಯಿತು ? 99 ಎಂದು ಕೇಳಿದನು.

  • ನಾನೇನು ಬೇಕೆಂದು ಹಾರಿಸಿಬಿಟ್ಟಿನೆ ? 99 “ ಹಾಗಾದರೆ ಹಾರಿಹೋದುದು ಹೇಗೆ ? ? ?

“ ನಾನು ಬೇರೇ ಯೋಚನೆಯಿಂದ ನೀನು ಮರವನ್ನು ಹತ್ತಿ ಹೂವನ್ನು ಕೀಳುತಿದ್ದುದನ್ನು ನೋಡುತಿದ್ದೆನು, ಹಾಗೆ ನೋಡುತಿದ್ದಾಗ-ಅಯ್ಯೋ ! ಇದ್ದುದೂ ಹಾರಿಹೋಯಿತು. ೨೨ ಹುಡುಗಿಯ ಕೈಯಲ್ಲಿದ್ದ ಮತ್ತೊಂದು ಹಕ್ಕಿಯ ಹಾರಿಹೋಯಿತು. ಹುಡುಗನು ಕೋಪಿಸಿಕೊಳ್ಳಲಿಲ್ಲ.. ಲಜ್ಜೆಯಿಂ ದಲೂ, ಭೆಯಿಂದಲೂ ಕೆಂಬಣ್ಣಗೊಂಡ ಹುಡುಗಿಯ ಮುಖವನ್ನು ನೋಡಿ