ಪುಟ:ಕೋಹಿನೂರು.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಕೊ{ ಹಿಸುರು ವಾದ ಸಂಕಲ್ಪದ ಪ್ರಕಾರ ಭಾರತ ಭೂಮಿಗೆ ಬಂದು, ಬಿದ್ದು ಹೋಗಿರುವ ಭಾರತವನ್ನು ದ್ವಾರಮಾಡುವ ಮಹಾ ವ್ರತದಲ್ಲಿ ದೀಕ್ಷಿತರಾಗಿ ನಿಲ್ಲುವರು. ಅವರಂಗಜೇಬನವಲಂಬಿಸಿದ್ದ ಭ್ರಮಾತ್ಮಕವಾದ ರಾಜನೀತಿಯು ಭವಿಷ್ಯದಲ್ಲಿ ಈ ವಿಸ್ತರವಾದ ಭರತಖಂಡದ ರಾಜಪುರುಷರಿಗೆ ಚಿರದಿನ ಸುಶಿಕ್ಷಣದ ವಾಗಿರುವುದು, 99 “ ನಾನು ಅಷ್ಟು ದಿನದ ವರೆಗೂ ನಿಶ್ಚಿಂತನಾಗಿ ನಿಶ್ಲೇಷ್ಟನಾಗಿ ಯವನರ ಪರಿಚರ್ಯದಲ್ಲಿ ಕಾಲಹರಣ ಮಾಡುತ್ತಿರಲೆ ? ೨೨ ಅಷ್ಟರೊಳಗೆ ಇದ್ದಕ್ಕಿದ್ದಹಾಗೆ ಸವಿಾಪದಲ್ಲಿ ವಿವಿಧ ವಾದ್ಯ ಯಂತ್ರಗಳ ಗಂಭೀರ ಧ್ವನಿಯೂ ಅದರೊಂದಿಗೆ ಅನೇಕ ಜನರ ಆನಂದ ಕೋಲಾಹಲ ಧ್ವನಿಯೂ ಕೇಳಿಸಿತು. ದುರ್ಗಾದಾಸನು ಆಶ್ಚರ್ಯಪಟ್ಟು, ಇದೇನು ? ಈ ವ್ಯಸನಕಾಲದಲ್ಲಿ ಆನಂದದ ಕೋಲಾಹಲವೆಲ್ಲಿಂದ ಬಂದಿತು ? ಎಂದನು. ಫಕೀರ- (ನಗುತ್ತ) -ವತ್ಸ ! ನಾವು ಬಹುಕಾಲದಿಂದ ನರಜೀವನ ಸಂಗ್ರಾಮದ ಭಯಂಕರವಾದ ರಕ್ತಪ್ರವಾಹಮಯವಾದ ರಂಗ ಭೂಮಿಯಲ್ಲಿ ವಿಷಾದಕರವಾದ ಭೀ ಷಣ ಅಭಿನಯವನ್ನು ಪ್ರತ್ಯಕ್ಷವಾಗಿ ನೋಡುತಿದ್ದೆವು. ಈಗ ಬಾ-ಕಟ್ಟ ಕಡೆಗೆ ಇಂದಿನ ಪ್ರೀತಿಕರವಾದಾ ಆನಂದೋತ್ಸವಕ್ಕೆ ಹೋಗಿ ಸೇರೋಣ. ಅಗಣಿತ ಜನರ ಆನಂದಮಯವಾದ ಕೋಲಾಹಲವೂ ವಿವಿಧ ವಾದ್ಯ ಯಂತ್ರಗಳ ಗಂಭೀರ ನಿನಾದವೂ ಅಗಣ್ಯ ಅಶ್ವ ಗಜಗಳ ಪದಧ್ವನಿಯೂ ಫಕೀರನ ಆನಂದಮಯವಾದ ಮಧುರ ಕಂಠ ಧ್ವನಿಯೊಂದಿಗೆ ಸೇರಿದವು. ಎಲ್ಲರಿಗಿಂತ ಮುಂದಾಗಿ ವಿಜಯಪಾಲನು ಕುಮಾರ ಅಮರಸಿಂಹನ ಕೈ ಹಿಡಿದುಕೊಂಡು ಬಂದು, ಫಕೀರನಿಗೆ ಅಭಿವಾದನ ಮಾಡಿ, ದುರ್ಗಾ ದಾಸನನ್ನು ಕುರಿತು, “ ನೀನು ಇವನನ್ನು ಬಲ್ಲೆಯಾ ? ರೈತನ ಹೊಟ್ಟೆಯಲ್ಲಿ ರಾಜಕುಮಾರನು ಹುಟ್ಟುವುದನ್ನು ಮೊದಲಾವಾಗಲಾದರೂ ಕೇಳಿರುವುದುಂಟೆ ? ” ಎಂದನು. 77