ಪುಟ:ಕೋಹಿನೂರು.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ನಾ ಲ್ಕ ನೆಯ ಪರಿ “ ದ . - ಈ ದಿನ ವೈರಾಗ್ಯ ವ್ರತವನ್ನು ತಾಳಿದ ಸನ್ಯಾಸಿಗಳಿಗೆ ಶಾಂತಿಮಯವಾದ ಆಶ್ರಯವಾಗಿದ್ದ ರಾಧಾನಾಥನ ನಿಕೇತನವಾದ ನಾಥದ್ವಾರವು ಇದ್ದಕ್ಕಿದ್ದಹಾಗೆ ಕೋಲಾಹಲಮಯವಾದ ರಾಜಧಾನಿಯಾಗಿ ಪರಿಣಮಿಸಿದೆ. ಮಂದಿರಕ್ಕೆ ಸವಿಾಪ ಬಹು ಸಂಖ್ಯಕ ಶಿಬಿರಗಳು ಸ್ಥಾಪಿಸಲ್ಪಟ್ಟಿವೆ. ಅವುಗಳ ನಾಲ್ಕು ದಿಕ್ಕುಗಳಲ್ಲಿ ಯೂ ಇದ್ದ ಸೈನ್ಯ ದಳಗಳೊಳಗೆ ನೂರಾರು ರಾಜರ ಉಷಗಳು ಬಿಳಿಬೆಳಗಿನಲ್ಲಿ ಬೆಳಗುತ್ತಿವೆ. ಇದ್ದಕ್ಕಿದ್ದ ಹಾಗೆ ಯಾವುದೋ ಒಂದು ಮೋಹ ಯಂತ್ರದ ಬಲದಿಂದ ಸಂಸಾರ ತ್ಯಾಗಿಗಳಾಗಿದ್ದ ವಿರಾಗಿಗಳೆಲ್ಲರೂ ತಮ್ಮ ಚಿರ ಸನ್ಯಾಸದ ವ್ರತವನ್ನು ಮರೆತು, ಪುನಃ ಸಂಸಾರದ ಕೋಲಾಹಲದಲ್ಲಿ ಸೇರಿದ್ದ ಹಾಗೆ ತೋರತು ! ಯುದ್ದ ವ್ರತವುಳ್ಳ ಕ್ಷತ್ರಿಯ ವೀರರು ಯುದ್ದ ರಂಗಗಳನ್ನು ಬಿಟ್ಟು, ಯವನ ಯುದ್ದವನ್ನು ಮರೆತು, ಒಂದು ಆನಂದೋತ್ಸವಗಳಲ್ಲಿ ಸೇರಿ ದ್ದರು ! ರಾಜಸ್ಥಾನದ ರಾಜಪರಿವಾರದ ರಮಣಿಯರೆಲ್ಲರೂ ವಿವಾಹ ಮಹೋ ತೃವಕ್ಕೆ ಬಂದಿದ್ದರು, ಯೋಧಪುರದ ರಾಜಮಹಿಷಿ ಅರುಂಧತಿದೇವಿಯ ಮಾತೃಮಂದಿರದಲ್ಲಿದ್ದ ನಾರಿಯರನ್ನು ಸಂಗಡ ಕರೆದುಕೊಂಡು ಬಂದಿದ್ದಳು. ಈ ನರನಾರಿಯರೆಲ್ಲರ ಮುಖಮಂಡಲದಲ್ಲಿ ಸ್ಫೂರ್ತಿಯ ಚಿಹ್ನೆಗಳು ಪ್ರಕಟಿತ ವಾಗಿದ್ದುವು. ಒಬ್ಬ ಸನ್ಯಾಸಿನಿಯು ಮಾತ್ರ ಒಬ್ಬಳೇ ಒಬ್ಬಳು, ಈ ಆನಂದ ಕೋಲಾಹಲದ ಸಂದಣಿಯನ್ನು ಬಿಟ್ಟು ಬಹುದೂರ ಹೋಗಿ ಒಬ್ಬೊಂಟಿಗಿತ್ತಿ ಯಾಗಿ ನದಿಯ ಮರಳಲ್ಲಿ ಕುಳಿತುಕೊಂಡು ನೀರವವಾಗಿ ರೋದನ ಮಾಡುತಿ ದೃಳು, ಕಣ್ಣೀರಿಂದ ತೋಯಿದ ಅವಳ ಕಾವಿಯ ರಂಗಿನ ಒಳ್ಳೆಯ ಸೆರಗು ಮರಳಲ್ಲಿ ಬಿದ್ದು ಹಾರಾಡುತಿತ್ತು, ಅವಳಾ ಕೆದರಿದ ಕೂದಲ ಗೊಂಚಲುಗಳು ಅನಾದರದಿಂದ ದಂಡೆದಂಡೆಯಾಗಿ ನೀರಿನಲ್ಲಿ ತೇಲಾಡುತಿದ್ದುವು. ಅವಳಾ ನೀಲೋತ್ಪಲದಹಾಗಿದ್ದ ಕಣ್ಣುಗಳನ್ನು ಭೇದಿಸಿಕೊಂಡು ವಾರಿಧಾರೆಯು ಸುರಿ ಯುತಿತ್ತು, ಆ ಹೊಸ ಸನ್ಯಾಸಿಯು ಯಾರೆಂದು ಪಾಠಕರಿಗೆ ಹೇಳಬೇಕೆ ? ಹಾ ! ಕೃಷಿಕ ಸೈನಿಕನು ಈ ಸಮಯದಲ್ಲಿ ರಾಜಾಧಿರಾಜಕುಮಾರನ ವೇಷ ದಲಿ ಒಂದು ತಡವೆ ಅಂಬರದ ರಾಜಕುಮಾರಿಯ ಎದುರಿಗೆ ಬಂದು ನಿಲ್ಲಬಾರದೆ ! ದಲ್ಲಿ ಒಂದು ಆ ಮಂದಿರದೆದುರಿಗೆ ಹೂವು ಮಾಲೆಗಳಿಂದಲೂ ದಂಡೆಗಳಿಂದಲೂ ಮುತ್ತು ಮುಂತಾದ ರತ್ನ ಗಳಿಂದಲೂ ಬಹುವಿಧವಾಗಿ ಅಲಂಕರಿಸಿದ್ದ ತೋರಣಗಳನ್ನು