ಪುಟ:ಕೋಹಿನೂರು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುನುರು ಓಡಿಹೋಗತಿದ್ದವರು ಧೈರ್ಯಗೊಂಡು ನಿಂತುಕೊಂಡರು. ರಹಿಮಸು, C« ಅಹುದು ಹುಜರು ! ನಾನೂ ಹಾಗೆಯೇ ಹೇಳಿದೆನು. ಆದರೆ ಇವನು ತಮ್ಮನ್ನು ನಮ್ಮ ಹಜರತರಲ್ಲವೆಂದೂ ತಾವು ಹಿಂದೂಗಳ ಭೂತವೆಂದೂ ಹಜರ ತರ ಆಕಾರವನ್ನು ತಾಳಿ ನಮ್ಮನ್ನು ಕೊಲ್ಲುವುದಕ್ಕೆ ಬರುತಿದ್ದರೆಂದೂ ಹೇಳಿ ದು, ೨೨ ಎಂದನು. - ಹಜರತು ಅಫಜಲಖಾನನು ಕ್ರೋಧದಿಂದ, ರಹಿಮನ ಪೋಕರಿತನಕ್ಕೆ ತಕ್ಕ ಶಿಕ್ಷೆ ಮಾಡಬೇಕೆಂದು ಕತ್ತಿಯನ್ನೆತ್ತಿದನು, ರಹಿಮನ ಹಿಂದೆ ನಿಂತಿದ್ದವನು ಮತ್ತಷ್ಟು ಹಿಂದಕ್ಕೆ ಸರಿದು, ' ನೋಡಿದಿಯಾ, ಮುಠಾಳ ! ನಾನು ಹೇಳಿದುದು ನಿಜವೋ ಸುಳ್ಳೋ ನೋಡು, ಕತ್ತಿಯನ್ನೆತ್ತಿದ್ದಾನೆ ! ಈಗಲೂ ಓಡಿ ಹೋಗಿ ಪ್ರಾಣವನ್ನುಳಿಸಿಕೊಳ್ಳೋಣ ' ವೆಂದು ಹೇಳಿದನು. ಅಫಜುಲನು ಅವರಿಗೆ ಭಯವನ್ನು ತೋರಿಸಿ ಪ್ರಯೋಜನವಿಲ್ಲವೆಂದು ತಿಳಿದು ಸಮಾಧಾನೋಕ್ತಿಗಳಿಂದ, “ ನಾವು ಈ ದಿನ ಭೂತಗಳ ಸಂಗಡ ಯುದ್ಧ ಮಾಡಿದವೆಂದು ತಿಳಿದುಕೊಂಡಿರುವಿರಾ ? ಹಾಗಾಗಿದ್ದರೆ ನಾವು ಬದುಕಿಕೊಳು ತಿದ್ದವೆ? ಭೂತವಾಗಿದ್ದರೆ ನಾವು ಇಷ್ಟು ಮಂದಿಯನ್ನೂ ಜೀವದಿಂದ ಬಿಡು ತಿದ್ದೆವೆ ? ಭೂತಗಳ ಕೈಗೆ ಸಿಕ್ಕಿದ್ದರೆ ಯಾರು ಬದುಕಿಕೊಳ್ಳುತಿದ್ದರು ? ? ಎಂದು ಹೇಳಿದನು. “ ಅದೇನೋ ನಿಜ ಆದರೆ ಅವರ, ಮನುಷ್ಯರಾಗಿದ್ದರೆ ಅವರಲ್ಲೊಬ್ಬನು ಮುಸನೂನನಾಗಿ ಹುಟ್ಟಿ, ಹಿಂದೂಗಳ ಸಂಗಡ ಸೇರಿ ಮುಸಲರನ್ನು ಹೊಡೆದು ಹಾಕಿದನೇಕೆ ? 99

  • ಮುಸಲಮನನು ಕಾಫರನಾಗಲಾರನೇನು ? ನಾನು 5 ಫಕೀರನನ್ನು ಬಹಳ ದಿನಗಳಿಂದ ಬಲ್ಲ ನು. ಅವನಿರುವ ಸ್ಥಳವನ್ನೂ ನಿಮಗೆ ಹೇಳಬಲ್ಲೆನು. ಹಿಂದೂಗಳು ಅವನಿಗೆ ಲಂಡನನ್ನು ಕೊಟ್ಟು, ಅವನು ಆ ದುರಾಶೆಯಿಂದ ಕಾಫರ ನಾಗಿದ್ದಾನೆ 99

" ಅವರು ಮನುಷ್ಯರಾಗಿದ್ದರೆ ನಾಲ್ಕು ಮಂದಿ ಹಿಂದೂಗಳು ನೂರೈವತ್ತು ಜನ ಮುಸಲಮಾನರನ್ನು ನೋಡುತಿದ್ದ ಹಾಗೆ ತುಂಡುತುಂಡಾಗಿ ಕತ್ತರಿಸಿ ಹಾಕಿದರು, ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ಕೊಡುವುದಕ್ಕೆ ಖಾನಸಾಹೇಬನಿಗೆ ರಗಳೆಗಿಟ್ಟು ಕೊಂಡಿತು, ಸ್ವಲ್ಪ ಯೋಚಿಸಿ, ಬಳಿಕ, “ ನೀವು ಇಷ್ಟು ಬುದ್ಧಿವಂತರಾಗಿ