ಪುಟ:ಕೋಹಿನೂರು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಸಂಕ್ಷೇದ ೨೧ ಅದನ್ನು ತಿಳಿಯಲಾರದೆಹೋದಿರಾ ? ನಿಮಗೆ ಪ್ರಾರಂಭದಲ್ಲಿಯೇ ಅವರು ಮನುಷ್ಯರಲ್ಲದೆ ಭೂತಗಳೆಂದು ಭಯವು ಹುಟ್ಟಿ ಯಾರೂ ಸಾಹಸದಿಂದ ಯುದ್ಧ ವನ್ನು ಮಾಡಲಿಲ್ಲ. ಆ ಭೂತದ ಭಯದಿಂದಲೇ ಈ ದಿನ ನಮಗೆಲ್ಲಾ ಸರ್ವ ನಾಶವಾಯಿತು ಇಲ್ಲದಿದ್ದರೆ ಹಿಂದೂಗಳ ಸಂಗಡ ಯುದ್ದದಲ್ಲಿ ಮುಸಲಮಾ ನರು ಹೇಗೆ ಸೋಲುವರು ? ಮುಸಲರು ಸೋತುಹೋದುದು ಯಾವಾಗಲಾ ದರೂ ಕೇಳಿದ್ದೀರಾ ? ಕೊರಾನನ್ನು ಈ ದಿನ ಮರೆತಿರುವಹಾಗಿದೆ ...9 ಎಂದು ಹೇಳಿದನು. ಅಫಜುಲನ ಹೇಳಿಕೆಯಿಂದ ಕ್ರಮವಾಗಿ ಅವನ ಅನುಚರರಿಗೆ ನಂಬಿಕೆಯು ಹುಟ್ಟಿ ಅವರು ತಾವು ಆ ಮೂಲಕವಾದ ಶಂಕೆಯಿಂದ ಭೀತಿಗೊಂಡು ತಮ್ಮ ವೀರರು ಅಕಾರಣವಾಗಿ ಪ್ರಾಣವನ್ನು ಬಿಟ್ಟರೆಂದೂ ಮನಸ್ಸು ಮಾಡಿದ್ದರೆ ಅನಾಯಾಸವಾಗಿ ಯುದ್ಧದಲ್ಲಿ ಜಯವನ್ನು ಹೊಂದಬಹುದಾಗಿದ್ದಿ ತೆಂದೂ ತಿಳಿದುಕೊಂಡವರಾಗಿ, ಅಫಜುಲನನ್ನು ಕುರಿತು € ಈಗ ಹಜರತರ ಅಪ್ಪಣೆ ಏನಾಗುವುದೋ ಅದನ್ನು ಮಾಡುವುದಕ್ಕೆ ಸಿದ್ಧವಾಗಿದ್ದೇವೆ ?” ಎಂದು ಹೇಳಿದರು. ಅಫಜುಲ- ( ಸಂತುಷ್ಟನಾಗಿ)- ಈ ದಿವಸ ಸಿಕ್ಕಿದ್ದ ಬೇಟೆಯು ಕೈಪಿಡಿಸಿ ಕೊಂಡು ಹೋದುದು ಬಹಳ ಅಚ್ಚಾಸ್ಪದವಾದುದಾಗಿದೆ. ಈ ಸಮಾಚಾರ ವನ್ನು ಯಾರೂ ಯಾರಲ್ಲಿಯೂ ಹೇಳಿಕೊಳ್ಳಕೂಡದು, ಯಾರಾದರು ಚರ್ಚೆ ಮಾಡಿದರೆ ಅವರಿಗೆ ಪ್ರತ್ಯುತ್ತರವಾಗಿ, ಈ ದಿನ ಐದುಸಾವಿರ ಹಿಂದೂಗಳು ಕತ್ತಿ ಬಂದೂಕ ಮುಂತಾದ ಆಯುಧ ಸನ್ನದ್ದರಾಗಿ ಹಠಾತ್ತಾಗಿ ಬಂದು ಐವತ್ತು ಮಂದಿ ಮುಸಲಮಾನರಮೇಲೆ ಬಿದ್ದು ಹೊಡಿದುದರಿಂದ ಅವರಲ್ಲಿ ಕೆಲವು ಮಂದಿ ಮಾತ್ರ ಮುಸಲಮಾನರು ಹತರಾದರೆಂದೂ ಆ ಘೋರ ಯುದ್ಧದಲ್ಲಿ ಸತ್ತು ಹೋದ ಹಿಂದೂಗಳ ಸಂಖ್ಯೆಯೇ ಇಲ್ಲವೆಂದೂ ಹೇಳಬೇಕು, ಅದಲ್ಲದೆ ಈ ದಿನ ಬಂದಿದ್ದ ಫಕೀರನಿಗೂ ಆ ಮೂರು ಮಂದಿ ಹಿಂದೂಗಳಿಗೂ ತಕ್ಕ ಶಿಕ್ಷೆ ಮಾಡಿದ ಹೊರತು ನಮಗೆ ಮಾನ ಉಳಿಯುವುದಿಲ್ಲ. ಈ ಯುದ್ಧ ಭೂಮಿಗೆ ಅರ್ಧ ಹರಿ ದಾರಿಯ ದರದಲ್ಲಿ ರುವ ಮಸಜೀದಿನಲ್ಲಿ ಆ ಫಕೀರಸು ವಾಸವಾಗಿದ್ದಾನೆ. ಆ ಮೂರುವ.೦ದಿ ಹಿಂದೂಗಳೂ ಅವನ ಜತೆಯಲ್ಲಿ ಆ ಮಸಜೀದಿಗೆ ಹೋಗಿ. ದ್ದಾರೆ ಅವರು ಏನುಮಾಡುವರೋ, ಎಲ್ಲಿಗೆ ಹೋಗುವರೋ ಅದನ್ನೆಲ್ಲಾ