ಪುಟ:ಕೋಹಿನೂರು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ ವೃದ್ಧನಾದ ಮುಸಲಮಾನ ಫಕೀರನು ವೇಗವಾಗಿ ಬಾದಷಹನ ಬಳಿಗೆ ಹೋಗಿ, ವಜ್ರಗಂಭೀರ ನಾದದಿಂದ ಸೂಜಿಬಿದ್ದ ಶಬ್ದ ವೂ ಇಲ್ಲದೆ ಮೌನವಾ ಗಿದ್ದಾ ಬಾದಷಹನ ದರಜಾರನ್ನು ಶೆಲೆಗೊಳಿಸುತ್ತ ಹೇಳಿದುದೇನೆಂದರೆ :- ಕೇಳು ಸಮಾಜ ಅವರಂಗಜೇಬ ! ಮೂರ್ಖತೆಗೂ ಎಲ್ಲೆಯುಂಟು. ಅದೂರದರ್ಶಿತಗೂ ಪರಿಣಾಮವುಂಟು, ಈ ವೀರಯುವಕನ ರಕ್ತ ಬಿಂದುವೊಂದು ಭೂಮಿಯ ಮೇಲೆ ಬಿದ್ದ ಕ್ಷಣಮಾತ್ರದಲ್ಲಿ ನಿನ್ನ ತಲೆಕಳಚಿದ ಮುಂಡವು ನೆಲವನ್ನು ಚುಂಬನ ಮಾಡುವುದೆಂದು ನಿಜವಾಗಿ ತಿಳಿದಿರು ೨೨ ಸಮಾಜನು ರೋಷನಿಂದ ತುಟಿಯನ್ನು ಕಡಿದುಕೊಂಡು " ಹಾ ! ಉನ್ಮತ್ತ ಫಕೀರ ! ನಾನು ಭಾರತವರ್ಷದ ಸಮಾಜನು ೨೨ ಎಂದು ಹೇಳಿದನು. ಫಕೀರನು ತೀವ್ರವಾದ ಕಟಾಕ್ಷದಿಂದ ಬಾದಷಹನ ಮುಖಮಂಡಲ ವನ್ನು ದೃಷ್ಟಿಸಿನೋಡಿ, ಅವನ ಕಣ್ಣುಗಳಿಗೆದುರಾಗಿ ಕೈ ಬೆರಳುಗಳಿಂದ ಒಂದೆರಡು ತಡವೆ ಸಂಜ್ಞೆ ಮಾಡಿ, “ ನೀನೇಯೋ ಸಮಾಜ ? ಮುಂದೆ ಮೇಲುಗಡೆ ಒಂದು ತಡವೆ ಕಣ್ಣು ತೆರೆದು ನೋಡು, ಸಮಾಜನಾರು ? ” ಎಂದು ಹೇಳಿದನು. ಬಾದಷಹನು ಮಂತ್ರಾಹತನಾದವನ ಹಾಗೆ ತಲೆಯೆತ್ತಿ ನೋಡಿ ಕಣ್ಣು ಗಳನ್ನು ಮುಚ್ಚಿಕೊಂಡನು. ಪುನಃ ಕಣ್ಣೆರೆದು ಎವೆ ಇಕ್ಕದೆ ಬಿರಿಗಣ್ಣಿನಿಂದ ತನ್ನ ತಲೆಯ ಮೇಲುಗಡೆ ಆಕಾಶಮಾರ್ಗದಲ್ಲಿ ನೋಡುತಿದ್ದನು ! ಮಂತ್ರದ ಬಲವೋ ಅಥವಾ ಮೆಸ್ಮರಿಜಮೋ (Mesmerism-ಎದುರಾಳಿಯ ಮನ ಸೃನ್ನು ಬಗ್ಗಿಸಿ ವಶಮಾಡಿಕೊಳ್ಳುವ ಒಂದು ಆಕರ್ಷಣಶಕ್ತಿ ವಿಶೇಷ) ನಾವ ದನ್ನು ಅರಿಯೆವು ! ಅವರಂಗಜೇಬನು ಮೇಲುಗಡೆ ನೋಡುತಿದ್ದನು ಹನ್ನೆರಡು ಚಂದ್ರಕಿರಣಗಳಿಂದ ದಿಂಡಲವು ಬೆಳಕಾಗಿ, ಗೌರವಮಯವಾದ ಅಪಾರ್ಥಿವ ಕಾಂತಿಯುಕ್ತನಾಗಿ ರತ್ನ ಕಿರೀಟ ಶೋಭಿತನಾಗಿ ಸಮಾಜ ಅಕಬರನು ಜ್ಯೋತಿ ರ್ಮಯವಾದ ಸ್ವರ್ಗದ ವಿಮಾನದಲ್ಲಿ ಕುಳಿತಿದ್ದನು ! ವಿಮಾನಕ್ಕೆ ನಾಲ್ಕು ಕಡೆ ಯಲ್ಲಿಯೂ ಪ್ರಫುಲ್ಲ ವದನರಾಗಿ ಪುಲಕಿತ ನಯನವುಳ್ಳ ಅಸಂಖ್ಯ ಅಮರರು ಸುತ್ತಿಕೊಂಡಿದ್ದರು ! ಅವರಂಗಜೇಬನು ಅಚ್ಚರಿಗೊಂಡ ಕಣ್ಣುಗಳಿಂದಲೂ, ಕಳವಳಗೊಂಡ ಪ್ರಾಣಗಳಿಂದಲೂ, ಶೂನ್ಯ ದೃಷ್ಟಿಯಿಂದಲೂ ಆ ರಾಜರಾಜೇಶ್ವರ ಮೂರ್ತಿಯನ್ನು ನೋಡಿ ನೋಡಿ ಪುನಃ ಕೆಳಗೆ ತನ್ನ ಸಭಾಮಂಟಪದ ಕಡೆ ದೃಷ್ಟಿಯನ್ನು ತಿರುಗಿಸಿ ನೋಡಿದನು, ಏನು ನೋಡಿದನು ? ರತ್ನರಾಜಿಯಿಂದ