ಪುಟ:ಕೋಹಿನೂರು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಎರಡನೆಯ ಭಾಗ: ಮೂ ದ ಲ ಸ ಯ ಪ ರಿ ೬ : ದ. ವಿಕಾಸಕುಮಾರಿ-ಅದೋ ಕೇಳು, ಶಂಖಧ್ವನಿಯಾಗುತ್ತದೆ ! ದರ್ಗೆದ. ಮಧ್ಯದಲ್ಲಿರುವ ವತ್ರಮಂದಿರದಲ್ಲಿ ಮಂಗಳಾರತಿಗೆ ಆರಂಭವಾಗಿದೆ ವೀರವರ ! ಇಲ್ಲೇ ಸ್ವಲ್ಪ ಹೊತ್ತು ನಿಲ್ಲು. ದೂರದಿಂದ ಮಂಗಳಾರತಿಯನ್ನು. ನೋಡಿ ಪ್ರಾಣವನ್ನು ಪವಿತ್ರ ಮಾಡಿ ಕೊಂಡ ಬಳಿಕ ಹತ್ತಿರ ಹೋಗೋಣ ! ಅದು ಶಂಖದ ಧ್ವನಿಯೇ ? ಶಂಖವ ಧ್ವನಿಯು ಅಷ್ಟು ಮಧುರವೆ? ಶಂಖದ ಧ್ವನಿಯಲ್ಲಿ ಹೀಗೆ ರಾಗವನ್ನು ಆಲಾಪಮಾಡಬಹುದೆ ? ಶಂಖಧ್ವನಿಯು ಪ್ರೇಮಿಕನ ಪ್ರಾಣವನ್ನು ಹೀಗೆ ಹುಚ್ಚು ಹಿಡಿಸುವುದೆ ? ಅದು ವೀಣೆಯ ಧ್ವನಿ ಯಾಗಿರಬೇಕು, ಅಲ್ಲ! ವೀಣೆಯ ತಾನವಾಗಿರಬೇಕು, ವೀಣೆಯ ತಾಸವು ಅಷ್ಟು ಗಂಭೀರವೆ ? ವೀಣಾರವದಿಂದ ವೀರನ ಪ್ರಾಣವು ಹೀಗೆ ಮದಿಸುವುದೆ ? ವೀಣೆಯ ತಾನವು ಹೀಗೆ ಒಂದೇತಡವೆ ಸಸ್ಯಮದಲ್ಲೇರುವುದೆ ? ವೀಣೆಯನ್ನು ಹೀಗೇರಿಸಿದರೆ ತಂತಿಯು ಹರಿದು ಹೋಗುವುದು ? ಅಪೂರ್ವವಾದಾ ಶುಖ ಧ್ವನಿಯು ಕೃಷಿಕನ ಶರೀರವನ್ನು ರೋಮಾಂಚಿತ ಮಾಡಿ ತರುಣಿಯ ಹೃದಯದ ತಪ್ಪವಾದ ರಕ್ತವನ್ನು ನಾಡಿಗಳಲ್ಲಿ ಪ್ರಬಲವೇಗದಿಂದ ಚಾಲನೆ ಮಾಡಿ, ಆಕಾಶದ ಶೂನ್ಯ ಹೃದಯದಲ್ಲಿ ಯೂ, ಪಾಷಾಣಗಳ ವಕ್ಷದಲ್ಲಿ ಯೂ, ಪ್ರತಿಧ್ವನಿತವಾ ಯಿತು. ಆ ಶಂಖದ ರವದೊಂದಿಗೆ, ಸಂಗೀತಕ್ಕೆ ಲೀಲಾನಿಕೇತನವಾಗಿಯೂ ಜಗತ್ತಿಗೆ ಪ್ರೇಮರಸವನ್ನು ಕರೆಯುವುದಾಗಿಯೂ ಇರುವ, ಸುಂದರಿಯ ಕಂಠವು ಸೇರಿದ್ದಿತೆಂದು ಕೃಷಿಕನು ತಿಳಿದಿರಲಿಲ್ಲ. ಈ ಕ್ರಮವಾಗಿ ಎಶುದ್ದ ವಾದ ಶಂಖಧ್ವನಿಯು ಕಾಮಿನಿಯ ಕಂಠದ ಜೀವ ಕಳೆಯಿಂದ ಸ್ಪೂರ್ತಿಗೊಂಡು ಭಾಷೆಯಲ್ಲಿ ಪರಿಣಮಿಸಿತು, ಕೃತಕನು ನೋಡು ತಿದ್ದಹಾಗೆ ಹನ್ನೆರಡುಮಂದಿ ಸುಂದರಿಯರು ಶಂಖಗಳನ್ನೂದುತ್ತ ಮಂದಿರದಿಂದ