ಪುಟ:ಕೋಹಿನೂರು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಳ ಕೊಹಿನುರು ವರಾಗಿದ್ದರೆ ಮುಂದರಿದು ಬರಬಹುದು, ಕುದುರೆಯಮೇಲೆ ಸವಾರರಾಗಿ ವಿಜಯಪಾಲನ ಸಂಗಡ ಹೋಗಿ ಎದುರಿಗೆ ಕಾಣುವ ಪರ್ವತ ಶೃಂಗಗಳನ್ನು ದಾಟಿ ಅಡ್ಡವಾಗಿ ಹರಿಯುವ ನದಿಯನ್ನು ಈಜಿಕೊಂಡು ಹಾಯ್ದು ಎಲ್ಲ ಕ್ಕಿಂತಲೂ ಎತ್ತರವಾಗಿರುವ ಶೈಲಶೃಂಗವನ್ನು ಹತ್ತಿ ರಕ್ತಪಾಕವನ್ನು ಹಿಡಿದು ತೋರಿಸಬೇಕು, ೪೨ - ಅತಿ ಕಷ್ಟವಾದ ಪ್ರಾಣಕ್ಕೆ ಅಪಾಯಕರವಾದಂತಹ ಶ್ರಮವನ್ನು ಸಹಿಸಿ ಕೇವಲ ವೀರತ್ವವನ್ನು ತೋರಿಸುವುದಕ್ಕೆ ಮಾತ್ರ ಮುಂದರಿದು ಬರುವವರಾರು ? ಯಾವ ಕೆಲಸಕ್ಕೂ ಹೆದರದ ಅಸಮಸಾಹಸಿಕನಾದ ವಿಜಯಪಾಲನನ್ನು ಈ ದುಸ್ಸಾಹಸಿಕ ಕಾರ್ಯದಲ್ಲಿ ಸೋಲಿಸುವುದು ಅಸಂಭವವಾದದು. ಪ್ರಯ ತವು ಸಾಗದೆ ವಿಫಲವಾದರೆ ಉಪಹಾಸಕ್ಕೆ ಕಾರಣವಾಗಿ ಹೆಂಗಸರಲ್ಲಿ ನಗು ಪಾಟಲಿಗೆ ಗುರಿಯಾಗಬೇಕಾಗುವುದು. ಆದುದರಿಂದ ರಾಜವಂಶದವರಾರೂ ಮುಂಡರಿದು ಬರಲಿಲ್ಲ. - ದುರ್ಗಾದಾಸನು, ಸೇನಾಪತಿಗಳೂ, ರಾಜಕಾರ್ಯದಲ್ಲಿದ್ದ ಉದ್ಯೋ ಗಸ್ಟರ ನಿಂತಿದ್ದ ಕಡೆಗೆ ತಿರುಗಿ ಬಹಳ ಹೊತ್ತು ನೋಡಿದನು, ಎಲ್ಲರೂ ಮೊದಲಿನಹಾಗೆ ಮೌನವಾಗಿ ನಿಶ್ವಲರಾಗಿದ್ದರು. ಆಗ ರಾಠೋರ ಸೇನಾಪತಿಯು ತಾಳ್ಮೆಯನ್ನು ತಾಳಿರಲಾರದೆ ದುಃಖದಿಂದಲೂ ಅಭಿಮಾನದಿಂದಲೂ ಗರ್ಜನೆ ಮಾಡಿ, ಕಂಪಿತ ಕಂಠದಿಂದ ಹೇಳಿದರು :-* ರಾಜಪೂತನು ವೀರತ್ವವನ್ನು ತೋರಿಸುವುದರಲ್ಲಿ ಭಯಪಡುವನೆಂದು ಮೊದಲು ನಾನು ತಿಳಿದಿರಲಿಲ್ಲ ! ಆದರೂ ನನಗಿನ್ನೂ ಆಶೆಯು ತಪ್ಪಲಿಲ್ಲ, ಕೇಳಿರಿ-ಎಲ್ಲಾ ಸೇನೆಯವರುಗಳಿರಾ ! ಸೇರಿರುವ ದರ್ಶಕರುಗಳಿರಾ ! ಮುದುಕರಾಗಲೀ, ಯುವಕರಾಗಲೀ, ಬಾಲಕರಾಗಲೀ ಉಚ್ಚವಂಶದವರಾಗಲೀ, ನೀಚವಂಶದವರಾಗಲೀ ಎಲ್ಲರೂ ಕೇಳಿರಿ ! ನಿನ್ನಲ್ಲಿ ಯಾರ ನರಗಳಲ್ಲಾದರೂ ರಾಜಪೂತನ ರಕ್ತವಿದ್ದರೆ ಮುಂದಾಗಿರಿ ! ಇಲ್ಲವಾದರೆ ಇಂದಿನ ರಾಜಪೂತ ವೀರಪ್ರದರ್ಶನಿಯು ಇಲ್ಲಿಗೆ ಕಡೆಯಾಗುವುದು, ಕೂಟ ವೀರರಿಗೆ ತಾಯಿಯಾದ ರಾಜಪುತಾನೆಯ ಪುತ್ರ ಗೌರವವು ಒಬ್ಬ ವೀರನಲ್ಲಿ ಮಾತ್ರ ಪರ್ಯವಸಿತವಾಗುವುದು, ನೋಡಿರಿ-ದೂರದಲ್ಲಿ ಮಾತೃಮಂದಿರದ ಉಚ್ಚ ಶಿಖರದ ಮೇಲುಭಾಗದಲ್ಲಿ ರಕ್ತಸತಾಕಕ್ಕೆ ಪಾರ್ಶ್ವದಲ್ಲಿ ಆರ್ಯ ರಮಣಿ ಯರು ಜಯಮಾಲೆಯನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ. ೨೨