ಪುಟ:ಕೋಹಿನೂರು.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ts ಕೊಹಿನುಕು wwwwy ರಾಜಮಹಿಷಿಯಿಂದ ಅನೇಕ ತಡವೆ ಕೇಳೊಣಾಗಿದೆ ನಾನು ಅವರಿಗೆ ಆನೇಕ ತಡವೆ ವಿಜ್ಞಾಪಿಸಿಕೊಂಡಿದ್ದೇನೆ. !! “ ಕೇಳು, ರಾಜನಂದಿನಿ ! ನಿನ್ನನ್ನು ಮತ್ತೊಂದು ತಡವೆ-ಇದೇ ಕಡೆಯ ತಡವೆ-ಕೇಳಲು ಇಲ್ಲಿಗೆ ಬಂದೆನು, ಈ ಜೀವನದಲ್ಲಿ, ಈ ಇಪ್ಪದು ವರ್ಷ ಕಾಲ ಪರ್ಯಂತ, ಎದುರಿಗಿದ್ದ ಶತ್ರುನಾಶನದಲ್ಲಿ ಹೊರತು ಯಾವಾಗಲೂ ಮತ್ತಾವ ಚಿಂತೆಯ ನನಗಿರಲಿಲ್ಲ. ಆದರೆ ನಿನ್ನನ್ನು ನೋಡಿದ ಮೊದಲು ನಾನು ಹುಚ್ಚನಾಗಿದ್ದೇನೆ, ಅಲ್ಲಿ ನೋಡು, ದುರ್ಗದ ಪಾರ್ಶ್ವದಲ್ಲಿ ವೀರರೆಲ್ಲರೂ ಯವನರ ಯುದ್ಧಕ್ಕೆ ಹೊರಟು ಸಿದ್ದರಾಗಿ ನನಗೆ ಸಲುವಾಗಿ ಕಾದು ನಿಂತಿ ದ್ದಾರೆ. ಈ ಸಮಯದಲ್ಲಿ ಹೇಳು, ಅಂಬಾಲಿಕೆ ! ನೀನು ನನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿಕೊಂಡರೆ ಅತುಲಾನಂದರಿಂದ ಈ ವೀರರೊಡನೆ ಹೋಗಿ ಯುದ್ಧಕ್ಕೆ ಸಹಾಯಮಾಡುವೆನು. ಒಪ್ಪದೆ ಹೋದರೆ ಶತ್ರು ಸಂಹಾರ ವನ್ನು ಮಾಡಬೇಕೆಂದು ಈ ಎದೆಯಲ್ಲಿ ನಾಟಿರುವ ಆಶಾ ಲತೆಯನ್ನು ನನ್ನ ಕೈಯಿಂದ ಸಮಲವಾಗಿ ಕಿತ್ತು ಹಾಕಿ, ಈ ಜನ್ಮದಲ್ಲಿ ಇದೇ ಈ ವೀರ ಧರ್ಮಕ್ಕೆ ತರ್ಪಣವನ್ನು ಬಿಟ್ಟು ಬಿಡುವೆನು, ಮತ್ತು-ಮತ್ತು-೨೨ ಹೇಳುತಿದ್ದ ಹಾಗೆ ಯುವರಾಜನು ಸುಮ್ಮನಾಗಿ ನೆಲದಮೇಲೆ ದೃಷ್ಟಿಯ ನಿಟ್ಟು ನೋಡುತಿದ್ದನು. ಅ೦ಬಾಲಿಕೆಯು ಅಭಿಮಾನದಿಂದ “ ಮತ್ತು ೨೨ ಏನು ? ಎಂದು ಕೇಳಿದಳು. - (ಯುವರಾಜ ! ನನ್ನ ಹೃದಯದಲ್ಲಿ ಸ್ಥಾನ ಕೊಟ್ಟಿರುವ ಪೈಶಾಚಿಕ ಪ್ರತಿಜ್ಞೆಯನ್ನು ಹೇಳಿಕೊಳ್ಳುವುದಕ್ಕೆ ಕಂಠವು ರುದ್ದವಾಗಿದೆ. ಆದರೆ ನಾನು ಉನ್ನತ ! ಉನ್ಮತ್ತನಿಗೆ ಮಾನಾವಮಾನವೇನು ? ಉನ್ಮತ್ತನಿಗೆ ಪುನಃ ಆತ್ಮಾಭಿ ಮಾನವೇಕೆ ? ಹಾಗಾದರೆ ಕೇಳು, ರಾಜನಂದಿನಿ ! ಮತ್ತು-ವತ್ತು ನಾನು ಮಾಡಿಕೊಂಡಿರುವ ಪ್ರತಿಜ್ಞೆಯನ್ನು ಹೇಳುತ್ತೇನೆ. ಈ ದಿನ ಮೊದಲ್ಗೊಂಡು ಇನ್ನೊಂದು ವರ್ಷದೊಳಗೆ ನೀನು ಯದನ ರಾಕ್ಷಸನ ತೊಡೆಯಮೇಲೆ ಕಳಿಸಿ ಶುವುದನ್ನು ನೋಡುವೆನು, ನಿನ್ನನ್ನು, ಈ ಕನಕ ಪಾರಿಜಾತವನ್ನು ನಂದನ ಕನಸದಿಂದ ನರಕದಲ್ಲಿ ತಳ್ಳಿಬಿಡುವೆನು. ಈ ಸಮಯದಲ್ಲಿ ಯುವರಾಜ ಕೆಸಸಿಂಹನ ಸುಂದರವಾದ ವೀಕ ಮುಖರ್$ಯು ಇದ್ದಕ್ಕಿದ್ದಹಾಗೆಯೆ ಕಾಳಭುಜಂಗದ ರೂಪವನ್ನು ತಾಳಿದ್ದರೂ