ಪುಟ:ಕೋಹಿನೂರು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ ಅಂಬರದ ಕಾಜಕುಮಾರಿಯು ಅಷ್ಟು ಆಶ್ಚರ್ಯಪಡುತಿರಲಿಲ್ಲ. ಅವಳು ಕ್ಷಣ ಮಾತ್ರ ಆಶ್ಚರ್ಯದಿಂದಲೂ ಭಯದಿಂದಲೂ ಯುವರಾಜನ ಮುಖವನ್ನು ನೋಡಿ “ ಹಾ ! ಧಿಕ್‌ ! ಕ್ಷತ್ರಿಯ ರಾಜಕುಮಾರ... ಸ್ವರ್ಗಧಾಮದಲ್ಲಿ ಪಿಶಾಚಿಯು ಹುಟ್ಟುವುದೆಂದು ಸ್ಪಷ್ಟ ದಲ್ಲಿಯೂ ತಿಳಿದಿರಲಿಲ್ಲ. ನಾನು ಪುನಃ, ಹೇಳುತ್ತೇನೆ ಕೇಳು--ನಾನು ನಿನ್ನ ನ್ನು ಮದುವೆಯಾಗುವುದು ಅಸಂಭವ 99 ಎಂದು ಹೇಳಿದಳು. ಕೇಸರಿಸಿಂಹನು ಏನೊಂದುತ್ತರವನ್ನು ಕೊಡದೆ ಆ ಸ್ಥಳವನ್ನು ಬಿಟ್ಟು ಬೇಗನೆ ದುರ್ಗಾದಾಸಸ ಬಳಿಗೆ ಹೋಗಿ, “ ನನಗೋಸ್ಕರ ಕಾದಿರಬೇಕಾದ ಆವಶ್ಯಕವಿಲ್ಲ. ತಾವು ಹೊರಡಬಹುದು. ನನಗೆ ಬೇರೆ ಕಡೆಗೆ ಹೋಗಬೇಕಾದ ಕೆಲಸವಿದ ೨೨ ಎಂದು ಹೇಳಿದನು. ಆ ದಿನ ಸಾಯಂಕಾಲ ಕೇಸಸಿಂಹನು ಒಬ್ಬೊಂಟಿಗನಾಗಿ ಯವನ ಸೇನಾಸತಿ ಅಫಜಲಖಾನನ ಬಳಿ ಹೋಗಿ ಅವನಿಗೆ ವಂದಿಸಿದನು. ಐ ದ ನೆ ಯ ಸ ರಿ ೬ ದ. ದುರ್ಗದೊಳಗೆ ಅಂತಃಪುರದಲ್ಲಿ ಕೊಠಡಿಯೊಳಗೆ ಏಳು ವರ್ಷದೊಂದು ಚಿಕ್ಕ ಹುಡುಗಿಯ ಕೈ ತಾಳವನ್ನು ಹಾಕಿಕೊಂಡು ಹಾಡುತಿದ್ದಿ ತು ರಾಗ ಶಂಕರಾಭರಣ-ಆದಿತಾಳ. ಲಜ್ಜೆ ಮಾನ ಕುಲಗಳಿಂದ ಕಜ್ಜವೇನು || ಪ | ಅಲ್ಲಿದ್ದ ಕೆಲವು ಹೆಂಗಸರು ಗೀತವನ್ನು ಕೇಳಿ ನಗುತ್ತ, ಅವರಲ್ಲೊಬ್ಬಳು ಓಡಿಹೋಗಿ ಹುಡುಗಿಯ ಬಾಯಿಯನ್ನು ಕೈಯಿಂದ ಭದ್ರವಾಗಿ ಹಿಡಿದು ಕೊಂಡು, ಸುಮ್ಮನಿರು, ಸೊಟ್ಟ ಮೇಲೆಯವಳೆ ! ಅಂಬಾಲಿಕೆಯು ಕೇಳಿದರೆ ಅನರ್ಥಮಾಡುವಳೆಂದು ಹೇಳಿದಳು. ಅಂಬಾಲಿಕೆಯು ಕೊಠಡಿಯ ಪಾರ್ಶ್ವ ಗವಾಕ್ಷದ ಬಳಿ ನಿಂತು ಗೀತವನ್ನು ಕೇಳುತಿದ್ದಳೆಂದು ಒಳಗಿದ್ದ ಹೆಂಗಸರಿಗೆ ತಿಳಿಯದು. ಅವಳು ವಿಶಾಸಕುಮಾ ರಿಯ ಜತೆಯಲ್ಲಿ ಅದೇ ಕೊಠಡಿಗೆ ಬರುತಿದ್ದಾಗ ಗೀತವನ್ನು ಕೇಳಿ, ವಿಲಾಸ ಕುಮಾರಿಯನ್ನು ಸಂಬೋಧಿಸಿ, ೮ ವಿಕಾಸಕುಮಾರಿ ! ನೀನು ನಂಬುವುದಿಲ್ಲ