ಪುಟ:ಕೋಹಿನೂರು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩ ಕೊಹಿನುರು ನೋಡಿದ ಮೊದಲು ನಿನ್ನಲ್ಲಿ ಸೋದರಿಯ ವಿಶ್ವಾಸ ಹುಟ್ಟಿದೆ. ನೀನೊಂದು ತರವೆ ಸೈನಿಕ ಯುವಕನ ಬಳಿ ಹೋಗಿ, • ಅವನು ನನ್ನ ಮೇಲೆ ದಯವಿಟ್ಟು ಈ ದುರ್ಗವನ್ನು ಬಿಟ್ಟು ಹೊರಟುಹೋಗಬೇಕೆಂದು ನಾನು ಬೇಡಿಕೊಂಡೆ ' ನೆಂದು ಹೇಳಬೇಕು-ಮತ್ತು

  • ಅಕಸ್ಮಾತ್ತಾಗಿ ರಾಜಕುಮಾರಿಯ ವಿಶಾಲವಾದ ಎರಡು ಕಣ್ಣುಗಳನ್ನೂ ಭೇದಿಸಿಕೊಂಡು ಕಣ್ಣೀರಿನ ಪ್ರವಾಹವು ಹೊರಟು ಪುನಃ ಹೇಳತೊಡಗಿದಳು. “ ಮತ್ತು ನನ್ನ ಮತ್ತೊಂದು ಭಿಕ್ಷೆ, ಏನೆಂದರೆ ;-ಈ ಜನ್ಮದಲ್ಲಿ ಅವನು ಪುನಃ ನನ್ನನ್ನು ನೋಡದಿರಬೇಕೆಂದೂ ಅವನಿಗೆ ಹೇಳಬೇಕು ೨೨

ಹೀಗೆಂದು ಹೇಳುತ್ತ ಅಂಬಾಲಿಕೆಯು ವಿಲಾಸಕುಮಾರಿಯ ಕುತ್ತಿಗೆ ಯನ್ನು ಕಟ್ಟಿಕೊಂಡು ಅವಳ ವಕ್ಷದಲ್ಲಿ ಮುಖವನಿಟ್ಟು ಅಳುವುದಕ್ಕೆ ತೊಡಗಿ ದಳು. ವಿಲಾಸಕುಮಾರಿಯು ಸೆರಗಿನಿಂದ ಅವಳ ಕಣ್ಣೀರಸಿ, “ ಅವನನ್ನು ಮತುಬಿಡುವುದಕ್ಕಾದೀತೆ ? ೨೨ ಎಂದು ಕೇಳಿದಳು. ರಾಜಕುಮಾರಿಯು ದರ್ಪದಿಂದ ತಲೆಯೆತ್ತಿ ನೋಡಿ ಹೇಳತೊಡಗಿದಳು:- « ಏನು ಹೇಳಿದೆ ? ಸಖಿ : ಮರೆತುಬಿಡುವುದಕ್ಕಾದೀತೆ ? ಹಾಗಾದರೆ ಕೇಳು. ನಿನಗೆ ಮೊದಲಿಂದ ಹೇಳುತ್ತೇನೆ. ಈಗ್ಗೆ ಹತ್ತು ವರ್ಷಕ್ಕೆ ಮೊದಲು :-ನಮ್ಮ ತಾಯಿಯು ಸ್ವರ್ಗಸ್ಥೆಯಾಗುವುದಕ್ಕೆ ಮೊದಲು-ಮಿವಾರದ ಮಹಾರಾಜನನ್ನು ನೋಡುವುದಕ್ಕೆ ಹೋಗಿದ್ದಳು. ಆ ದಿನ ರಾಜಸಮುದ್ರ ಕೆರೆಯ ಕಟ್ಟೆಯ ಮೇಲೆ ಅರಳಿದ್ದ ಪುಷ್ಪಮಾಲಾಮಯವಾಗಿದ್ದ ಕಿಂಶುಕವೃಕ್ಷದ ಕೆಳಗೆ ಒಂದು ತಡವೆ-ಒಂದೇ ತಡವೆ, ಅವನನ್ನು ನೋಡಿದ್ದೆನು. ಆಗೆ ನಾನು-ಇದೇನು .ಸಖಿ ? ೨೨ ವಿಲಾಸಕುಮಾರಿಯು ಇದ್ದಕ್ಕಿದ್ದಹಾಗೆ ತನ್ನ ಕುತ್ತಿಗೆಯಿಂದ ಅಂಬಾ ಲಿಕೆಯ ಕೈಗಳನ್ನು ತೆಗೆದುಹಾಕಿ ಎದ್ದು ನಿಂತುಕೊಂಡಳು ಅಂಬಾಲಿಕೆಯು ಅವಳ ಕೆಂಪೇರಿದ್ದ ಮುಖವನ್ನು ನೋಡಿ. “ ಇದೇನು ಸುಖಿ ! .ನಿನಗೆ ನನ್ನ ಮೇಲೆ ಕೋಪವೆ ? ಅಥವಾ ನನ್ನನ್ನು ಕಂಡರೆ ಬೇಸರವೋ ಅಥವಾ ಆಸವೊ? ೨ ಎಂದು ಕೇಳಿದಳು. - ವಿಲಾಸಕುಮಾರಿಯು ಪುನಃ ಅಂಬಾಳಿಕೆಯನ್ನು ಆಲಿಂಗನ ಮಣಿ Gಂಡು, “ ಮನ್ನಿಸು, ರಾಜನುದಿನಿ ! ಅನೇಕ ದಿವಸದಿಂದ ನನಗೆ ಹೃದಯ

  • #