ಪುಟ:ಕೋಹಿನೂರು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೬ ಕೋಹಿಸುರು wwwxmmmmmmmmm ಅಫಜ.ಲಖಾನನು ಭಯದಿಂದ ಕುಂದಿ ಸಂದೇಹಪಟ್ಟು ಕಾಫರಹುಡುಗನ ಮುಖವನ್ನು ದೃಷ್ಟಿಸಿ ನೋಡಿದರು, ಕಾಸರಹುಡುಗನು ತಲೆಯ ಮೇಲಿದ್ದ ಹಗಡಿಯನ್ನು ತೆಗೆದು ದೂರ ಬಿಸುಟನು. ಕಾಳಮೋಘದ ಮಧ್ಯದಲ್ಲಿ ಪೂರ್ಣಿಮಾಚಂದ್ರನಂತೆ ಚಂಚಲವಾದ ಮುಂಗುರುಳ ಗೊಂಚಲುಗಳೊಳಗೆ ಕಮನೀಯವಾದ ಕಾಮಿನಿಯ ಮುಖವು ಕಂಗೊಳಿಸಿತು. ವಿಲಾಸಕುಮಾರಿಯ: ದಾನವಸೇನಾಸತಿ ! ಈಗ ನನ್ನ ಗುರು ತಾಯಿತೆ ? ನಾನಾರು ? ಎಂದು ಕೇಳಿದಳು. ದಾನವಸೇನಾಪತಿಯು ಭಯದಿಂದಲೂ ಆಶ್ಚರ್ಯದಿಂದಲೂ ಭುವನ ಮೋಹಿನಿಯಾದಾ ಸುರೇಶ್ವರಿಯ ರೂಪಿಯದವಳ ಮುಖಕಾಂತಿಯನ್ನು ನೋಡಿ, ಮುಖ ಕುಂದಿದವನಾಗಿ ವಿಕೃತಸ್ವರದಿಂದ, “• ವಿಕ್ರಮಸಿಂಚನ ಮಗಳು ! 99 ಎಂದನು ವಿಲಾಸಕುಮಾರಿಯು ಹಾರಿಹೋಗಿ ಅಫಜುಲಖಾನನ ಕುತ್ತಿಗೆಯನ್ನು ಹಿಡಿದು ಬಗ್ಗಿಸಿ ಮತ್ತೊಂದು ಕೈಯಿಂದ ಕತ್ತಿಯನ್ನು ಮೇಲಕ್ಕೆತ್ತಿಕೊಂಡು, CC ವಿಕ್ರಮಸಿಂಹನ ಮಗಳು ಈ ದಿನ ತನ್ನ ತಂದೆಯನ್ನು ಕೊಂದವನ ರಕ್ತದಿಂದ ಪರಲೋಕಕ್ಕೆ ಹೋಗಿರುವ ತನ್ನ ತಂದೆಗೆ ತರ್ಪಣವನ್ನು ಕೊಡುವಳು. ಸಾಧ್ಯ ವಾದರೆ ಆತ್ಮರಕ್ಷಣೆ ಮಾಡಿಕೊ ೪೨ ಎಂದು ಹೇಳಿದಳು. ಅಫಜುಲಖಾನನು ನಡುಗುತಿದ್ದ ಕೈಯಿಂದ ಕತ್ತಿಯನೆತ್ತಿ ವಿಲಾಸಕುಮ ರಿಯ ಕುತ್ತಿಗೆಗೆ ಗುರಿಯಿಟ್ಟು ಬೀಸಿದನು, ಆದರೆ ಪ್ಲೇಚ್ಛ ಸೇನಾಪತಿಯ ಕತ್ತಿಯು ಆ ಸುರೇಶ್ವರಿಯ ಕುತ್ತಿಗೆಯಲ್ಲಿ ಕೂಡುವುದರೊಳಗೆ ಅವನ ಛಿನ್ನ ಮಸ್ಯಕವು ವಿಲಾಸಕುಮಾರಿಯ ಕೈಯಲ್ಲಿ ಬಂದಿದ್ದಿತು ಒಂದು ಮುಹೂರ್ತ ದಲ್ಲಿ, ಆ ದಿನ ಕೇಸರಿಗೂ ಶೃಗಾಲಗಳಿಗೂ ನಡೆದ ಅಪೂರ್ವ ಯುದ್ಧರಣರುಗ ದಲ್ಲಿ ಸೇರಿದ್ದ ಹಿಂದ ವೀರರು, ಶಂಭನಾಶಿನಿಯಾದ ಸಿಂಹವಾಹಿನಿಯ ಕಾಗೆ ಕುದುರೆಯಮೇಲೆ, ದೈತ್ಯರಕ್ತದಿಂದ ಕೆಂಪಾದ ಭಯಂಕರವಾದ ಕತ್ತಿಯನ್ನೂ ದಾನವರ ಛಿನ್ನ ಮಸ್ತಕವನ್ನೂ ಹಿಡಿದು ರಕ್ತಮಯವಾದ ದೇಹವುಳ್ಳವಳಾಗಿಯೂ ಗಾಳಿಗೆ ಹಾರಾಡುತ್ತಿದ್ದ ಕೇಶಪಾಶವುಳ್ಳವಳಾಗಿಯೂ ಇದ್ದ ರಮಣಿಯ ಮೂರ್ತಿಯು ಬರುತಿದ್ದುದನ್ನು ನೋಡಿದನು.