ಪುಟ:ಕೋಹಿನೂರು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ಹ ನ್ಯೂ ೦ ದ ನೆ ಯ ಪ ರಿ ಚೇ ದ . ಮರುದಿನ ಪ್ರಭಾತದಲ್ಲಿ ವಿಜಯ ಸಾಲನು ಅಂಬಾಲಿಕೆಯನ್ನೂ ವಿಲಾಸ ಕುಮಾರಿಯನ್ನೂ ಸೈನ್ಯದೊಂದಿಗೆ ಮಾತೃಮಂದಿರಕ್ಕೆ ಕರೆತಂದನು. ಕೃಷಿಕನ ಎದುರಿಲ್ಲದ ವೀರತ್ವದ ವಾಹಿಣಿ ಯ) ಸರ್ವತ್ರ ಹರಡಿಕೊಂಡಿತು. ಆ ದಿನ ದುರ್ಗದಲ್ಲಿ ಎಲ್ಲೆಲ್ಲಿಯ ವಿಾಶೆಯಕೂದಲು ಹುಟ್ಟಿದ ತರುಣ ಸೈನಿಕನ ಮಾತು ಹೊರತು ಬೇರೇ ಪ್ರಸ್ತಾಪವಿಲ್ಲ. ಅವನಾರು ? ಎಲ್ಲಿಂದ ಬಂದವನು ? ಎಂಬೀ ವಿಚಾರದ ಗದ್ದಲವು ಹತ್ತಿದ್ದಿತು, ಸೈನಿಕರೆಲ್ಲರೂ ಒಟ್ಟು ಸೇರಿ ರಾಶಿ ರಾಶಿ ಮಾದಕ ಪದಾರ್ಥಗಳಾದ ಅಫೀಮು ಮುಂತಾದವುಗಳನ್ನು ಎದುರಿಗಿಟ್ಟು ಕೊಂಡು ಚೆನ್ನಾಗಿ ಸೇವಿಸಿ ದಿವ್ಯಜ್ಞಾನವನ್ನು ಹೊಂದಿ ಮೇಲಿನ ವಿಚಾರ ಗಳನ್ನು ತರ್ಕಿಸಿ ಸಿದ್ದಾಂತವಾಡಲೆತ್ನಿಸಿದರು. ಒಬ್ಬಸು, ಆ ಯುವಕನು, ಪೂರ್ವಜನ್ಮದಲ್ಲಿ ವಿಖ್ಯಾತ ರಾಜವಂಶದಲ್ಲಿ ಹುಟ್ಟಿ ಒಬ್ಬ ಬ್ರಾಹ್ಮಣನ ಶಾಪ ದಿಂದ ಈ ಜನ್ಮದಲ್ಲಿ ಹೀಗೆ ನೀಚವಂಶದಲ್ಲಿ ಹುಟ್ಟಿದನೆಂದು ಹೇಳಿದನು. ಮತ್ತೊಬ್ಬನು, ಹಾಗಲ್ಲ, ಹಾಗಲ್ಲ, ನೀನು ಹೇಳುವುದು ತಪ್ಪ-ಕೇಳದೆ, ತಿಳಿ ಯದೆ ಅಫೀಮಿನ ಅಮಲಲ್ಲಿ ಮನಸ್ಸಿಗೆ ಬಂದುದೆಲ್ಲಾ ಬೊಗಳುತ್ತೀ-ಅವನ ನಿಜವಾದ ಪರಿಚಯವು ಬೇಕಾದರೆ, ನಾನು ಹೇಳುತ್ತೇನೆ, ಕೇಳಿರಿ-ಆ ಕುಮಾ ರನು ವಿಜಯಪಾಲನನ್ನು ಸೋಲಿಸಿ ಬಾವಟೆಯನ್ನು ಕೈಯಲ್ಲಿ ಹಿಡಿದುಕೊಂಡು ಮಂದಿರದ ಮೇಲಿನ ಕಂಬಿಯಿಂದಿಳಿದು ಬರುತಿದ್ದಾಗ ನಾನವನ ಸಂಗತಿಯ ನೆಲ್ಲಾ ತಿಳಿದುಕೊಂಡೆನು. ಅವನು ಮನುಷ್ಯನಲ್ಲವಣ್ಣಾ ! ಭೂತದ ಮಗು ! ವೇಷವನ್ನು ಮಾರುವಾಡಿಕೊಂಡು ಬಂದು ಕೃಷಿ ಕನ ಯುವಕನೆಂದು ಹೇಳಿ ಕೊಂಡಿದ್ದಾನೆಂದು ಹೇಳಿದನು. ಒಬ್ಬ ಮುದುಕ ವಾರವಾತಿಯು, ನೀವೆಲ್ಲಾ ಹುಡುಗರು-ನಿಮಗೆ ಅದೆಲ್ಲಾ ಗೊತ್ತಾಗುವ ಬಗೆ ಹೇಗೆ ? ನಾನು ಹೋಗಿ ವೃದ್ಧ ಫಕೀರನನ್ನು ವಿಚಾರಿಸಿಕೊಂಡ, ಬಂದಿದ್ದೇನೆ-ಫಕೀರನು ಒಂದು ದಿನ ಸ್ವರ್ಗದಲ್ಲಿ ಇಂದ್ರನ ಬಳಿ ಹೋಗಿ ಅವರುಗಷಹನನ್ನು ವಧೆಮಾಡುವುದಕ್ಕೆ ಸಲುವಾಗಿ ಅವನ ಸಹಾಯವನ್ನು ಕೇಳಿಕೊಂಡನು. ಇಂದ್ರದೇವನು ಸ್ವಂತ ವಾಗಿ ವೈಕುಂಠಕ್ಕೆ ಹೋಗಿ ವಿಷ್ಣುವನ್ನು ಪ್ರಾರ್ಥಿಸಿ ಈ ಹುಡುಗನನ್ನು ಕರೆ