ದನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುವೆನು. ಶ್ರೀ ವಿದ್ಯಾಸಾಗರರ ಸಹಾಯ ದಿಂದಲೇ ನಾನು ಬಂಗಾಳಿ ಭಾಷೆಯನ್ನು ಕೆಲವುಮಟ್ಟಿಗೆ ಕಲಿತುಕೊಂಡವನಾದೆನು. ಮತ್ತು ಆ ಪಂಡಿತರು ಈಗ್ರಂಥವನ್ನು ಕನ್ನಡಕ್ಕೆ ಭಾಷಾಂತರಮಾಡಿ ಪ್ರಕಟಿಸಬ ಹುದೆಂದು ಕಲಿಕತ್ತೆಯಿಂದ ನನ್ನ ಹೆಸರಿಗೆ ಬರೆದ ೧೮೭೩ ನೇ ಇಸವಿ ನವಂಬರ ೧೯ ನೇ ತಾರೀಖುಳ್ಳ ಕಾಗದದಲ್ಲಿ ಅಪ್ಪಣೆ ಕೊಟ್ಟಿರುತ್ತಾರೆ, ಹೇಗೆಂದರೆ, « ನನ್ನ ಗ್ರಂಥದಲ್ಲಾವದನ್ನಾಗಲಿ ನಿಮ್ಮ ದೇಶಭಾಷೆಯೊಳು ರಚಿಸುವುದಕ್ಕೆ ನೀವು ಸ್ವತಂತ್ರರಾಗಿರುವಿರಿ, ಪುನಃ ನೀವು ನನ್ನ ಸಮ್ಮತಿಯಂ ಪಡೆಯುವುದಕ್ಕೋಸ್ಕರ ನನಗೆ ಬರೆಯಬೇಕಾದುದಿಲ್ಲವು.” ಷೇಕ್ಸ್ಪಿಯರ್ ಕವಿಯು ಈ ಭ್ರಾಂತಿವಿಲಾಸದಂತೆ ಬೇರೆ ಬೇರೆ ವಿಷಯದ ಮೂವತ್ತೈದು ನಾಟಕಗಳನ್ನು ರಚಿಸಿದ್ದಾನೆ. ಅವುಗಳೆಲ್ಲವೂ ವಿಲಾಯತಿಯಲ್ಲಿ ಮುದ್ರಿಸಲ್ಪಟ್ಟು, ಇಂಗ್ಲೀಷುಭಾಷಾಪ್ರಾಚುರ್ಯವುಳ್ಳ ಸಕಲ ದೇಶಗಳಲ್ಲಿಯ ಹೇರಳವಾಗಿ ಓದಲ್ಪಡುತಿವೆ. ತತ್ರಾಪಿ ಆ ಭಾಷೆಯೊಳು ಸರಸವಾದ ವ್ಯುತ್ಪತ್ತಿ ಯಂ ಬಯಸಿ ವಿದ್ಯಾರ್ಥಿಗಳಿಗೆ ತತ್ಪಠನವತ್ಯಂತಾಪೇಕ್ಷಿತವಾಗುವಷ್ಟು ಲಾಲಿತ್ಯ, ಮಾಧುರ್ಯ, ಗಾಂಭೀರ್ಯಾದಿಗಳಿಂದಲೂ, ತತ್ತತ್ಸಂದರ್ಭಾನುಗುಣಗಳಾದ ಯು ಕ್ರಿಪ್ರತ್ಯುಕ್ತಿಗಳ ಔಚಿತೀಸ್ವಾರಸ್ಯಾದಿಗಳಿಂದಲೂ ಪರಿಶೋಭಿತಗಳಾಗಿವೆ. ಅವುಗ ಳೊಳಗೆ ಅನೇಕ ನಾಟಕಗಳು ಇದುವರೆಗೆ ತೆಲುಗು ಅರವ ಮುಂತಾದ ಭಾಷೆಗ ಇಲ್ಲಿ ರಚಿಸಲ್ಪಟ್ಟಿವೆ. ಈ ದೇಶಭಾಷೆಯಲ್ಲಿ ಮಾತ್ರ ಅಂತಹ ಪಠನೀಯಗಳಾದ ಗ್ರಂಥಗಳಿಲ್ಲದಿರುವುದನ್ನು ದೊಡ್ಡ ಲೋಪವನ್ನಾಗಿ ಎಣಿಸಿ ಅದನ್ನು ಪೂರ್ತಿಗೈಯ ಬೇಕೆಂಬ ನನ್ನ ಉದ್ದೇಶಕ್ಕೆ ಪ್ರಕೃತ ಅಲ್ಪ ಪ್ರಯತ್ನವನ್ನು ಅಂಕುರಾರ್ಪಣವನ್ನಾಗಿ ವಹಿಸಿದನು. ಈ ಗ್ರಂಧದ ವಿಷಯದಲ್ಲಿ ನನ್ನ ತಾತ್ಪರ್ಯವು ಯುಕ್ತವಾದು ದೆಂದು ಇದನ್ನೋದುವವರು ಸುಲಭವಾಗಿ ತಿಳಿದುಕೊಳ್ಳುವರೆಂದು ನಂಬುತ್ತೇನೆ. ಈ ಭ್ರಾಂತಿವಿಲಾಸದಂತೆ ಇನ್ನೂ ಅನೇಕ ಗ್ರಂಥಗಳು ಶ್ರೀ ಈಶ್ವರಚಂದ್ರ ರಿಂದಲೇ ರಚಿಸಲ್ಪಟ್ಟು ಪ್ರಕಟಿಸಲ್ಪಟ್ಟಿರುವುದರಿಂದ ಅವುಗಳೆಲ್ಲವನ್ನೂ ಕನ್ನಡಿಸಿ ಪ್ರಚುರಪಡಿಸಬೇಕೆಂದೆನಗೆ ಬಹಳ ಅಪೇಕ್ಷೆಯುಂಟು-ಆದರೂ ತಕ್ಕಸಾಧನ ಸಮವ ಧಾನವನ್ನು ಅಪೇಕ್ಷಿಸುತ ಆವಿಷಯದೊಳು ಅದ್ಯಾಪಿ ಕೃತಪ್ರಯತ್ನ ನಾಗದಿದ್ದೇನೆ. ಈ ಸಂದರ್ಭದಲ್ಲಿ ಮತ್ತೊಂದಂಶವನ್ನು ಸೂಚಿಸುತ್ತೇನೇನೆಂದರೆ.ಕರ್ಣಾ ಟಪ್ರಕಾಶಿಕಾ ಪ್ರೊಪ್ರೈಟರಾದ ಶ್ರೀರ್ಮಾ ಭಾಷ್ಯಂ ತಿರುಮಲಾಚಾರ್ಯರವರು ಈ ಭ್ರಾಂತಿವಿಲಾಸದ ಚಮತ್ಕೃತಿಗೆ ಮೆಚ್ಚಿ ಅದನ್ನು ಲಲಿತತರ ಸುಶಬ್ದಗಳಿಂದ
ಪುಟ:ಕ್ರಾಂತಿವಿಲಾಸ.djvu/೧೧
ಗೋಚರ