ಮನೋಹರಮಪ್ಪಂತೆ ಸಂಸ್ಕೃತದೊಳು ವಿರಚಿಸಿದರು. ಅದೀಗ ತೆಲಗು ದೇವ ನಾಗರ ಲಿಪಿಗಳಲ್ಲಿ ಮುದ್ರಿಸಲ್ಪಡಲಿಕ್ಕೆ ಆರಂಭವಾಗಿದೆ. ಆದರೆ ಇಂಗ್ಲೀಷುಭಾಷಾ ಮಯವಾದ ಮೂಲಗ್ರಂಥವು ಆಪಾತತಃ ಬಹಳ ಚಮತ್ಕಾರವುಳ್ಳದುದಾಗಿ ಕಾಣ ಬಂದರೂ, ಅದನ್ನು ಸಂಸ್ಕೃತಮರ್ಯಾದೆಯಂ ಅನುಸರಿಸಿ ರಚಿಸಲೆತ್ನಿಸಿದಾಗ ಮಧ್ಯೆ ಮಧ್ಯೆ ಕೆಲವಂಶಗಳು ಅತ್ಯಂತಾಪೇಕ್ಷಿತಗಳಾಗಿಯೂ, ಅವುಗಳುವಿನಾ ಸಂಸ್ಕೃತಜ್ಞರಿಗೆ, ಪ್ರೌಢಿಮೆ, ಸರಸತೆ, ಔಚಿತೆ ಮುಂತಾದ ಗುಣಪ್ರಯುಕ್ತ ವಾದ ತೃಪ್ತಿಯು ಸುತರಾಂ ಉಂಟಾಗಲಾರದೆಂದು ಯೋಚಿಸಿ ಈಕಥೆಗೆ ಮುಖ್ಯಾಂ ಗಗಳಾದ ಪಾತ್ರ ಸನ್ನಿವೇಶಾದಿಗಳ ಗೋಜಿಗೆ ಹೋಗದೆ ಅನುಚಿತಗಳಾದ ಕೆಲವು ಆಂತರಾಳಿಕವಿಷಯಗಳನ್ನು ಪರಿಷ್ಕರಿಸಿ, ತತ್ತಪ್ಪಕರಣಾನುಗುಣಗಳಾಗಿಯೂ, ರಸಜ್ಞ ಜನ ಹೃದಯಾವಿಷ್ಕರಣೈಕ ಪ್ರಯೋಜನಗಳಾಗಿಯೂ, ತೋರಿದ ಅಂಶಗಳ ನ್ನು ಮಾತ್ರ ಸೇರಿಸಿದ್ದಾರೆ. ಏವಂಚ ಅವೆಲ್ಲ ವಿದ್ಯಾರ್ಥಿಗಳಿಗೆ ಜ್ಞಾತವ್ಯಗಳಾದ ಧರ್ಮನ್ಯಾಯ ಮುಂತಾದ ಬಹುವಿಧವಿಷಯಗಳನ್ನು ನಾತಿಸಂಗ್ರಹ ವಿಸ್ತರವಾಗಿ ತಿಳಿಸುವುದಲ್ಲದೆ ಸಂಸ್ಕೃತವಿಷಯಗಳ ಪ್ರಯೋಗಸರಣೆಯ, ಶಯ್ಯ ಬಹಳ ಸ್ಪಷ್ಟವಾಗಿ ತೋರಿಸಲ್ಪಟ್ಟಿವೆ. ಉಕ್ತ ಪಂಡಿತರಾ ಗ್ರಂಥಕ್ಕೆ ವಿಸ್ತಾರವಾ ದೊಂದು ಪೀಠಿಕೆಯನ್ನು ರಚಿಸಿದ್ದಾರೆ. ಅದರಲ್ಲಿ ಅನೇಕ ಯುಕ್ತಿ ನ್ಯಾಯಗಳು ನಿದರ್ಶನಗಳಾಗಿ ನಿರೂಪಿಸಲ್ಪಟ್ಟಿವೆ. ಆ ಸಂಸ್ಕೃತ ಕವಿಯು ಈ ಗ್ರಂಥರಚನಾ ವಿಷಯದಲ್ಲಿ ಮಾಡಿದ ಪ್ರತಿಜ್ಞೆಗಳನ್ನು ಈಬಳಿ ತಿಳಿಸುತ್ತೇನೆ:- ೧-ಆಂಗಿಲೇಯಭಾಷಾಮಯವಾದ ಮೂಲಗ್ರಂಥವು ಆ ಸಂಪ್ರದಾಯ ಪ್ರಕಾರ ನಾಟಕರೂಪವಾಗಿ ರಚಿಸಲ್ಪಟ್ಟಿದ್ದರೂ ಸಂಸ್ಕೃತದೊಳು ದಶರೂಪಕಾದಿ ಲಕ್ಷಣಗ್ರಂಥಗಳಿಂದ ತಿಳಿಸಲ್ಪಟ್ಟಿರುವ ದಶವಿಧರೂಪಕಲಕ್ಷಣಗಳೊಳಗೆ ಅದ ಕ್ಕೊಂದೂ ಇಲ್ಲವಾದುದರಿಂದ ಕಾದಂಬರಿ ಮುಂತಾದವುಗಳಂತೆ ಕೇವಲ ವಾಕ್ಯ ರೂಪನಾಗಿ ಮಾಡಲ್ಪಟ್ಟಿವೆ. ೨-ಈ ಗ್ರಂಥದಲ್ಲಿ ಪ್ರತಿಪಾದ್ಯವಾದ ಭ್ರಾಂತಿಯಿಂದ ಆವಿಷ್ಟರಾದ ಪಾತ್ರಗಳಿಗೆ ಆಯಾ ಸಂದರ್ಭದೊಳಗೆ ಉಂಟಾಗತಕ್ಕ ಭಾವಗಳನ್ನು ಆವಶ್ಯ ಹೇಳ ಬೇಕಾಗಿದ್ದರೂ ಮೂಲಗ್ರಂಥದಲ್ಲಿ ಕಾಣಲ್ಪಡದ ಕಾರಣದಿಂದ ಅವುಗಳನ್ನು ಇಲ್ಲಿ ವಿಶದಪಡಿಸಬೇಕಾಯಿತು. ೩-ಈ ಗ್ರಂಥನಾಯಕರಾದ ಇಬ್ಬರು ಚಿರಂಜೀವಿಗಳು, ಇಬ್ಬರು ನಾಯಕಿಯರು ಇವರ ವೃತ್ತಾಂತಗಳು ಮೂಲಗ್ರಂಥದ ಪ್ರಥಮಭಾಗದಲ್ಲಿ ಸ್ಪಷ್ಟ ವಾಗಿ ಹೇಳಲ್ಪಡದಕಾರಣದಿಂದ ಅವು ಇದರಲ್ಲಿ ಹೇಳಲ್ಪಡುತ್ತವೆ. Kis |
ಪುಟ:ಕ್ರಾಂತಿವಿಲಾಸ.djvu/೧೨
ಗೋಚರ