ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪-ಆ ಗ್ರಂಥದ ಅಂತ್ಯಭಾಗದಲ್ಲಿ ಮಹಾರಾಜರಿಂದ ಸೂಚಿಸಲ್ಪಟ್ಟ ಕನಿ ಈ ಚಿರಂಜೀವಿ ವಿಲಾಸಿನಿಯರ ವಿವಾಹವು ಬಿಡಲ್ಪಟ್ಟುದುದರಿಂದ ಅದು ಇದರಲ್ಲಿ ಸಮಗ್ರವಾಗಿ ತಿಳಿಸಲ್ಪಡುತ್ತೆ. ೫-ಯುವರಾಜಸ್ಥಾನದಲ್ಲಿದ್ದು ಮಹಾರಾಜರಿಂದಲೂ ಪೌರರಿಂದಲೂ ವಿಶೇಷ ಗೌರವಿಸಲ್ಪಡುವ ಜೇಷ್ಠ ಚಿರಂಜೀವಿಗೆ ಅತಿ ಹೇಯವಾದೊಬ್ಬ ಸೂಳೆಯ ಮನೆಯಲ್ಲಿ ಭೋಜನಸನ್ನಿವೇಶವು ಮೂಲಗ್ರಂಧಕ್ಕೆ ಉಚಿತವಾದರೂ ನಮ್ಮವರಿಗೆ ಅದು ಅಸಹ್ಯವಾಗಿರುವುದಾದುದರಿಂದ ಅದರ ಪ್ರಸ್ತಾಪವು ಇದರಲ್ಲಿ ಬಿಡಲ್ಪಟ್ಟಿರು ಇದಲ್ಲದೆ ಹೀಗೆ ಮತ್ತೂ ಕೆಲವು ಪ್ರಕರಣಗಳಲ್ಲಿ ಅನಾವಶ್ಯಕಗಳಾಗಿರುವ ಅಂಶ ಗಳನ್ನು ಬಿಟ್ಟು, ಉಚಿತಗಳಾಗಿಯೂ, ಅವಶ್ಯಾ ವೇದನೀಯಗಳಾಗಿಯೂ, ಇರುವ ಬಹ್ವಂಶಗಳು ಸೇರಿಸಲ್ಪಟ್ಟಿವೆ. ಈ ಕನ್ನಡಗ್ರಂಥವನ್ನು ರಚಿಸುವಲ್ಲೆನಗೆ ಮಾಡಲ್ಪಟ್ಟ ಸಹಾಯಕ್ಕಾಗಿ, ವಿದ್ಯಾಭ್ಯಾಸದ ಇಲಾಖಾ ೨ ನೇ ಸರ್ಕಿಲ್ ಇ೯ ಸ್ಪೆಕ್ಟರ ಅಫೀಸ್ ಕ್ಲರ್ಕ್ ಮ|| ಗುಂಡಪ್ಪನವರಿಗೂ, ಇದು ಪ್ರಕಟವಾಗುವ ಅಂಶದಲ್ಲಿ ಕಲ್ಪಿಸಲ್ಪಟ್ಟ ವಿಶೇಷವಾದ ಆನುಕೂಲ್ಯಕ್ಕೋಸ್ಕರ ಅಸಿಸ್ಟೆಂಟ್ ಕಮ್ಮಿ ಸನ‌ ಮೆ|| ವಿ. ರ್ಎ. ನರಸಿಂಹಯ್ಯಂ ಗಾಗ್ರವರಿಗೂ ನಾನು ಬಹಳ ಕೃತಜ್ಞನಾಗಿದ್ದೇನೆ. ಶಿವಮೊಗ್ಗಾ, ಬಿ, ವೆಂಕಟಾಚಾರ್ಯ ತಾ|| ೧೨ ನೇ ರ್ಜೂ ೧೮೭೬,}