ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭ್ರಾಂತಿವಿಲಾಸ +AAAAAAYAAAAAMAAAAAAAAAAAAAAAAAAAAAwnhhhtvian ಭಗಳನ್ನು ಅನುಭವಿಸಿರುವುದಲ್ಲದೆ ಈಗಲೂ ಅನುಭವಿಸುತಿರುವೆನಾದುದ ರಿಂದ, ನನ್ನಿ ಪ್ರಾಣವನ್ನೊಂದು ನಿಮಿಷವಾದರೂ ಇಟ್ಟುಕೊಂಡಿರುವುದಕ್ಕೆ ನಗೆ ಅಪೇಕ್ಷೆಯಿಲ್ಲ, ಮತ್ತು ನನ್ನ ಪ್ರಾಣದಂಡನೆಗೆ ಸಾಯಂಕಾಲದವರೆಗೂ ಅವಧಿಯನ್ನು ಕೊಡದೆ ನನ್ನನ್ನೀಗಲೇ ಕೊಂದುಬಿಟ್ಟರೆ ನಾನು ಬಹಳ ಸು ಖಿಯಾಗುವೆನು ” ಎಂದು ಹೇಳಿದ ಮಾತನ್ನು ವಿಜಯವಲ್ಲಭರಾಯನು ಕೇಳಿ ಮಸ್ಸಿನೊಳಂದುಬಗೆಯಾದ ದಯೆಯ ಅಶ್ವರ್ಯವೂ ಉಂಟಾಗಿಸೋಮ ಗುಪ್ತನಂ ಕುರಿತು, “ಎಲೈ ಸೋಮಗುಪ್ತನೆ ? ನೀನು ಮರಣವನ್ನು ಕೊರ ಲೇಕೆ ? ಆವ ಕಾರಣದಿಂದ ಸ್ಪದೇಶವನ್ನು ಬಿಟ್ಟು, ಏಳುವರ್ಷಗಳಿಂದ ದೇಶಾ ಟನವನ್ನು ಮಾಡಿ, ಕಡೆಗೀ ದೇಶಕ್ಕೆ ಬಂದು, ನಿರ್ವೇದವೇಕೆ ? ಎಂದು ಕೇಳಲು, ಸೋಮಗುಪ್ತನು, “ ಎಲೈ ಪ್ರಭುವೆ ! ನನ್ನ ಮನಸ್ಸಿನಲ್ಲಿ ದುಃಖ ವೆಂಬ ಅಗ್ರಿಯು ದಿನೇ ದಿನೇ ವೃದ್ಧಿಗೊಂಡು ಅಂತರ್ದಾಹವನ್ನುಂಟುಮಾಡು ತಿದೆ. ಅದರ ಶಮನವು ಅಸಾಧ್ಯವಾಗಿರುವಾಗ ನನ್ನ ಜನ್ಮಭೂಮಿಯಂ ತೊ ರೆದು ದೇಶಾಂತರ ಸಂಚಾಗವನು ಕುರಿತು ತಮ್ಮ ಸನ್ನಿಧಾನದಲ್ಲಿ ಬಿನ್ನಯಿ ಸುವುದಕ್ಕೆ ಉದ್ಯಕನಾದರೆ, ನನ್ನಾದುಃಖಾನಲವು ಈಗಿರುವದಕ್ಕಿಂತ ಶತಾಂಶ ಅಧಿಕವಾಗಿ ನನ್ನನ್ನು ಬಾಧಿಸುವುದು. ಆದುದರಿಂದ ತಾವು ಕೇಳುವ ಪ್ರಶ್ನೆಗೆ ಉತ್ತರವನ್ನು ಕೊಡುವದಕ್ಕಿಂತ ಅಧಿಕವಾದ ಸಂಕಟವು ಮತ್ತಾ ವದೂ ಇರದು. ಮಹಾರಾಜರೆ ! ಆದರೂ ತಮ್ಮ ಅಪ್ಪಣೆಯಂ ಉಲ್ಲಂಫಿಸ ಕೂಡದೆಂದು ಸಂಗ್ರಹವಾಗಿ ನನ್ನ ವೃತ್ತಾಂತವನ್ನು ಹೇಳುವೆನು, ಲಾಲಿಸ ಬೇಕು-ನಾನು ಹೇಮಕೂಟಪುರದೊಳು ಹುಟ್ಟಿದವನು ; ಮತ್ತು ಪ್ರಸಿದ್ದ ನಾದೊಬ್ಬ ವರ್ತಕನ ಮಗನು. ನನಗೆ ಯೌವಸಕಾಲವು ಪ್ರಾಪ್ತವಾದ ಬ ೪ಕ ಅತಿಸುಂದರಿಯಾದ ಲಾವಣ್ಯಮಯಿಯೆಂಬೊಬ್ಬ ಸುಂದರಿಯನ್ನು ಪಾಣಿ ಗ್ರಹಣವಂ ಮಾಡಿಕೊಂಡೆನು, ಲಾವಣ್ಯಮಯಿಯು ಸತ್ಕುಲಪ್ರಸೂತೆಯಾಗಿ ದಂತೆ ಸುಗುಣಗಳುಳ್ಳವಳಾಗಿಯೂ ಇದ್ದಳು. ನಾವಿಬ್ಬರೂ ಪರಸ್ಪರ ಸಹ ವಾಸದಿಂದ ಅತ್ಯಂತ ಸಂತೋಷಯುಕ್ತರಾಗಿದ್ದೆವು, ಮಲಯಪುರಿಯೆಂಬ ನಗರದಲ್ಲಿ ನನ್ನ ವ್ಯಾಪಾರವು ವಿಶೇಷವಾಗಿ ನಡೆಯುತಿದ್ದಿತು. ಅದರಿಂದಬಹಳ ದವ್ಯಸಂಪಾದನೆಯೂ ಆಗುತಿದ್ದಿತು, ಮುಖ್ಯವಾಗಿ ದೇವರ ಕೃಪೆಯು ನನ್ನ ಶಿರುವ ಪರ್ಯಂತ ಸಂಸಾರದ ಸುಖವನ್ನನುಭವಿಸುತಿದ್ದೆನು, ದೇವರ ದಯೆ