ಶಿ ww Anth NAAAAAAAAAAA #y hhhhh ಮೊದಲನೆಯ ಪರಿಚ್ಛೇದ ಯು ಕಡಿಮೆಯಾಗುತ ಬರಲು; ಮಲಯಪುರದಲ್ಲಿ ಕಾರ್ಯನಿರ್ವಾಹಕ ನಾಗಿದ್ದ ಮನುಷ್ಯನು ಮೃತನಾದನು. ತರುವಾಯ ನನಗೆ ಮನೋವ್ಯಥೆಯ, ವ್ಯಾಪಾರಹಾನಿಯೂ ಬಂದೇಕಾಲದಲ್ಲಿ ಪ್ರಾಪ್ತವಾಗಿ, ಜೀವನಕ್ಕೆ ಅಪಾಯ ಸಂಭವಿಸುವುದೆಂದು ಯೋಚಿಸಿ, ವ್ಯಾಪಾರವನ್ನು ವೃದ್ಧಿಗೊಳಿಸಲು ನನ್ನ ಪಿ) ಯೆಯಾದ ಲಾವಣ್ಯಮಯಿಯನ್ನು ಹೇಮಕೂಟದಲ್ಲಿಯೇ ಬಿಟ್ಟು ಹೊರ ಟವನು ಮಲಯಪುರವಂ ಸೇರಿದೆನು. ಆರುತಿಂಗಳುಗಳೊಳಗೆ ಲಾವಣ್ಯಮ ಯಿಯು ನನ್ನನ್ನಗಲಿರಲಾರದೆ ಮಲಯಪುರಕ್ಕೆ ಬಂದಳು, ಬಳಿಕ ಅವಳು ಮಲಯಪುರಿಯಲ್ಲಿಯೇ ಗರ್ಭಿಣಿಯಾಗಿ ಯಮಳರಾದ ಇಬ್ಬರು ಕುಮಾರ ರನ್ನು ಪಡೆದಳು. ಆ ಮಕ್ಕಳಿಬ್ಬರೂ ಒಂದೇ ರೀತಿಯಾಗಿ ರೂಪಚರ್ಯಗ ಳಿಂದ ಪ್ರಕಾಶಿಸುತ್ತಾ, ಸ್ವಲ್ಪವೂ ಭೇದತೋರದೆ ಕಣೇಳಿಸುತಿದ್ದರು. ನಾನು ವಾಸಮಾಡುತಿದ್ದ ಮನೆಯಲ್ಲಿ ಮತ್ತೊಬ್ಬ ಬಡವಳಾದ ಹೆಂಗಸು ನನ್ನ ಪ್ರಿಯೆಯಂತೆ ಬಂದೇ ಆಕಾರವುಳ್ಳ ಅವಳಿಜವಳಿ ಗಂಡುಮಕ್ಕಳನ್ನು ಹಡದಳು, ಕೆಲವು ದಿನಗಳಾದ ಬಳಿಕ ಆ ಬಡಹೆಂಗಸು ಮಕ್ಕಳನ್ನು ಸಾಕಿ ಸಲಹುವುದಕ್ಕೂ ತನ್ನ ಉದರಪೋಷಣೆಗೂ ಗತಿಯಿಲ್ಲದೆ ತನ್ನೆ ರಡು ಮಕ್ಕ ಇನ್ನೂ ವಿಕಯಿಸಲುದ್ಯುಕ್ಕೆಯಾದಳು. ನಾನಾ ಮಕ್ಕಳನ್ನು, ಮುಂದೆ ನನ್ನ ಮಕ್ಕಳಿಗವರು ಕಿಂಕರರಾಗಿರುವರೆಂಬ ಉದ್ದೇಶದಿಂದ, ಬೆಲೆಗೆ ಕೊಂಡು ಕೊಂಡು ನನ್ನ ಸ್ವಂತ ಕುಮಾರರಿಬ್ಬರಿಗೆ ಚಿರಂಜೀವಿಗಳೆಂತಲೂ ಕ್ರಯಲ ಇರಾದಾ ಮಕ್ಕಳಿಬ್ಬರಿಗೆ ಕಿಂಕರರೆಂತಲೂ ನಾಮಕರಣವನ್ನು ಮಾಡಿದೆನು. - ಕೆಲವು ಕಾಲ ಕಳೆದಬಳಿಕ ನನ್ನ ವಿಯೆಯು ಹೇಮಕೂಟಕ್ಕೆ ಪುನಃ ಹೋಗಬೇಕೆಂದು ಅಪೇಕ್ಷಿಸಿ, ತನ್ನೊಂದಿಗೆ ಬರಲು ನನ್ನನ್ನು ಬಲಾತ್ಕಾರದ ಡಿಸಿದುದರಿಂದ ಮನಸ್ಸಿಲ್ಲದೆ ಒಡಂಬಟ್ಟವನಾಗಿ ನಾಲ್ಕು ಶಿಶುಗಳನ್ನೂ ಕರ ಕೊಂಡು ನನ್ನ ಪ್ರಿಯೆಯೊಡನೆ ಮಲಯಪುರದಿಂದ ಪೊರಮಟ್ಟು, ಹಡಗನ್ನೇರಿ ಸಮುದ್ರದಮೇಲೆ ಅರ್ಧ ಹರಿದಾರಿಯ ದೂರದಲ್ಲಿ ಬರುತ್ತಿರಲು, ಅಂತರಿಕ್ಷ ದಲ್ಲಿ ಮೇಘುಪಟ್ಟಿಯು ಮುಸುಕಿತ್ತು ಪ್ರಳಯಕಾಲದ ಮಾರುತನಂತೆ ಎಂಟು ದಿಕ್ಕುಗಳಲ್ಲಿಯೂ ಬಿರುಗಾಳಿ ಯೆದ್ದಿತು. 'ಸಮುದ್ರವು ತರಂಗಗಳ ಸಮೂ ಹದೊಡನೆ ಮೇಲಕ್ಕೆ ಉಕ್ಕಿತು. ಆ ಅದ್ಭುತಗಳನ್ನು ಕಂಡು ನಾನು ಪ್ರಾಣದ ಆಕೆಯನ್ನು ತೊರೆದು ಪ್ರತಿಕ್ಷಣದಲ್ಲಿಯೂ ಮೃತ್ಯುವನ್ನೆದುರು ನೋಡುತಿ
ಪುಟ:ಕ್ರಾಂತಿವಿಲಾಸ.djvu/೧೮
ಗೋಚರ